ಹಾಸನ : ರಾಜ್ಯದ ವಿವಿಧ ಉಪ ವಿಭಾಗ ಹಾಗೂ ವೃತ್ತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 19 ಮಂದಿ ಡಿವೈಎಸ್ಪಿ ಹಾಗೂ 192 ಮಂದಿ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಹಾಸನ ಉಪ ವಿಭಾಗದ ಡಿವೈಎಸ್‌ಪಿಯಾಗಿ ಎರಡು ಬಾರಿ ವರ್ಗಾವಣೆಗೊಂಡಿದ್ದ ಉದಯಭಾಸ್ಕರ್ ಜಿ.ವಿ. ಅವರು ಮತ್ತೆ ಜಿಲ್ಲೆಗೆ ಬಂದಿದ್ದು, ಹೊಳೆನರಸೀಪುರ ಉಪ ವಿಭಾಗದ ಡಿವೈಎಸ್‌ಪಿಯಾಗಿ ನಿಯೋಜನೆಗೊಂಡಿದ್ದಾರೆ. ಈ ಹಿಂದೆ ಹಾಸನ ಡಿವೈಎಸ್ಪಿಯಾಗಿದ್ದ ಉದಯಭಾಸ್ಕರ್ ಅವರ ಕಾರ್ಯವೈಖರಿ ವಿರುದ್ಧ ಮಾಜಿ ಸಚಿವ ಎಚ್.ಡಿ. ರೇವಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು , ಈ ಹಿನ್ನೆಲೆಯಲ್ಲಿ ವಿಜಯ ಭಾಸ್ಕರ್ ಅವರನ್ನು ಬೆಂಗಳೂರಿನ ಪ್ರಧಾನ ಕಚೇರಿಗೆ ಕರೆಸಿಕೊಳ್ಳಲಾಗಿತ್ತು. ಇದೀಗ ಪ್ರಧಾನ ಕಚೇರಿಯಲ್ಲಿದ್ದವರನ್ನು
ಹೊಳೆನರಸೀಪುರಕ್ಕೆ ನಿಯೋಜನೆ ಮಾಡಲಾಗಿದೆ. ಹಾಗೆಯೇ ಸಕಲೇಶಪುರ ಉಪ ವಿಭಾಗಕ್ಕೆ ಕರ್ನಾಟಕ ಕುಮಾರ್ ಲೋಕಾಯುಕ್ತದಲ್ಲಿದ್ದ ಪ್ರಮೋದ್ ಅವರನ್ನು ನೇಮಕ ಮಾಡಲಾಗಿದೆ.
- ಹಲವು ಇನ್ಸ್‌ಪೆಕ್ಟರ್ ವರ್ಗ:
ಹಾಗೆಯೇ ಜಿಲ್ಲೆಯ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ ಇನ್ಸ್ ಪೆಕ್ಟರ್‌ಗಳನ್ನು ವರ್ಗಾವರ್ಗಿ ಮಾಡಲಾಗಿದೆ. ಸ್ಥಳ ನಿರೀಕ್ಷೆಯಲ್ಲಿದ್ದ ಮೋಹನ್ ಕೃಷ್ಣ ಪಿ. ಅವರನ್ನು ಹಾಸನ ನಗರ ಪೊಲೀಸ್ ಠಾಣೆಗೆ ವರ್ಗ ಮಾಡಲಾಗಿದೆ , ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೇವಣ್ಣ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ನಿಯೋಜನೆ ಮಾಡಲಾಗಿದೆ. ಕರ್ನಾಟಕ ಲೋಕಾಯುಕ್ತದಲ್ಲಿದ್ದ ಲಕ್ಕಪ್ಪ ಆರ್ .ಮಸಗುಪ್ಪಿ ಅವರು ಅರಕಲಗೂಡು ವೃತ್ತಕ್ಕೆ ಬಂದಿದ್ದರೆ, ಇಲ್ಲಿದ್ದ ರಘುಪತಿ ಎಸ್. ಎಂ. ಅವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗ ಮಾಡಲಾಗಿದೆ.
ಚಿಕ್ಕಮಗಳೂರು ನಗರ ಠಾಣೆಯಲ್ಲಿದ್ದ ಜಯರಾಂ ಎಸ್.ಎನ್. ಅವರನ್ನು ಹಳೇಬೀಳು ವೃತ್ತಕ್ಕೆ ವರ್ಗ ಮಾಡಿದ್ದರೆ, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಕಾಂತ್ ಅವರು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗವಾಗಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿದ್ದ ಸಂತೋಷ್ ಎಸ್. ಅವರು ಹಿರೀಸಾವೆ ವೃತ್ತಕ್ಕೆ ನಿಯೋಜನೆಗೊಂಡಿದ್ದಾರೆ