ರೈತ ಮಕ್ಕಳಿಗೆ ಶಿಷ್ಯ ವೇತನ ಯೋಜನೆ

0

ಹಾಸನ : ರೈತರ ಮಕ್ಕಳ ಹೆಚ್ಚಿನ  ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಹೊಸ ಶಿಷ್ಯ ವೇತನ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು, ಮೆಟ್ರಿಕ್ ವಿದ್ಯಾಭ್ಯಾಸ ಪೂರ್ಣಗೊಳಿಸಿ ಅಧಿಕೃತ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಕೋರ್ಸ್‍ಗಳಲ್ಲಿ  ವಿಧ್ಯಾಭ್ಯಾಸ ನಡೆಸುತ್ತಿರುವ ರೈತರ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ರೂ.2500-11000 ವರೆಗೆ ನೇರ ನಗದು ವರ್ಗಾವಣೆ ಮೂಲಕ ಶಿಷ್ಯ ವೇತನ ಪಾವತಿ ಮಾಡುವ ಯೋಜನೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಸದರಿ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಸೆ.5 ರಂದು ಉದ್ಘಾಟಿಸಲಿದ್ದು ಕಾರ್ಯಕ್ರಮದಲ್ಲಿ ದ್ವಿತೀಯ ಪಿ.ಯು.ಸಿ ಓದುತ್ತಿರುವ ಜಿಲ್ಲೆಯ ರೈತ ಕುಟುಂಬದ ನಾಲ್ಕು ವಿಧ್ಯಾರ್ಥಿಗಳು ಭಾಗವಸಲಿದ್ದಾರೆ ಆದ್ದರಿಂದ ಎಲ್ಲಾ ರೈತರು ಕಾರ್ಯಕ್ರಮವನ್ನೂ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿಯೂ ವೀಕ್ಷಣೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

#farmersnewshassan #ರೈತಮಿತ್ರ_ಹಾಸನ್_ನ್ಯೂಸ್

LEAVE A REPLY

Please enter your comment!
Please enter your name here