ಕುರಿಗಾಹಿಗಳಿಗೆ ವಿಮೆಗೆ ಅರ್ಜಿ ಆಹ್ವಾನ

0

ಹಾಸನ: 2022-23 ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಕುರಿ, ಮೇಕೆ ಸಾಕಣೆದಾರರು/ ವಲಸೆ ಕುರಿಗಾರ ಆಕಸ್ಮಿಕ ಮರಣ ಹೊಂದಿದಲ್ಲಿ ಉಚಿತ 5 ಲಕ್ಷ ರೂ. ವಿಮಾ ಸೌಲಭ್ಯಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಫಲಾನುಭವಿಗಳು ಕನಿಷ್ಠ 30 ಕುರಿ/ ಮೇಕೆಗಳನ್ನು ಹೊಂದಿರುವ ಕುಟುಂಬದ ಸದಸ್ಯರಾಗಿರಬೇಕು, 18-70 ವರ್ಷದೊಳಗಿನವರಾಗಿರಬೇಕು. ವಲಸೆ ಕುರಿಗಾರರಿಗೆ ಪ್ರಥಮ ಆದ್ಯತೆ, ವಲಸೆ ಕುರಿಗಾಹಿ ಕುಟುಂಬದ 18-70 ವರ್ಷ ವಯಸ್ಸಿನ ಗರಿಷ್ಠನಾಲ್ಕು ಸದಸ್ಯರನ್ನು ವಿಮೆಗೆ ಒಳಪಡಿಸಲಾಗುತ್ತದೆ. ಇತರೆ ಕುರಿಗಾರರ ಕುಟುಂಬದ 18-70 ವರ್ಷ ವಯಸ್ಸಿನ ಒಬ್ಬ ಸದಸ್ಯನನ್ನು ವಿಮೆಗೆ ಒಳಪಡಿಸಬಹುದಾಗಿದೆ.

ಅರ್ಜಿಗಳನ್ನು ಮೇ 23ರಿಂದ ಜಿಲ್ಲೆಯ ಎಲ್ಲಾ ತಾಲೂಕು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳಿಂದ ವೇಳೆಯಲ್ಲಿ ಜೂ.10ರೊಳಗೆ ಕಚೇರಿ ಪಡೆಯಬಹುದಾಗಿದೆ. ಅಗತ್ಯ ದಾಖಲಾತಿ ಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಹತ್ತಿರದ ಪಶುವೈದ್ಯಕೀಯ ಸಂಸ್ಥೆ ಅಥವಾ ತಾಲೂಕು ಪಶು ಆಸತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಕಚೇರಿಗೆ ಸಲ್ಲಿಸಬೇಕು.

ಮಾಹಿತಿಗಾಗಿ ಸ್ಥಳೀಯ ಪಶುವೈದ್ಯಾಧಿ ಕಾರಿ, ತಾಲೂಕಿನ ಮುಖ್ಯ ಪಶುವೈದ್ಯಾಧಿ ಕಾರಿಗಳು(ಆಡಳಿತ)/ಸಹಾಯಕ ನಿರ್ದೇ ಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಹಾಸನ ಜಿಲ್ಲೆ ಅವರನ್ನು ಸಂಪರ್ಕಿಸಬಹುದು ಎಂದು ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here