#ರೈತಮಿತ್ರ_ಹಾಸನ್_ನ್ಯೂಸ್
ಹಾಸನ,ಸೆ.25(ಹಾಸನ್_ನ್ಯೂಸ್): ಈ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವನ್ನು ಕಂದಾಯ ಇಲಾಖೆ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ವತಿಯಿಂದ ಕೈಗೊಳ್ಳಲಾಗುತ್ತಿದ್ದು, ಆಲೂರು ತಾಲ್ಲೂಕಿನಲ್ಲಿ ಈ ವರೆಗೆ ಶೇ. 70 ರಷ್ಟು ಸಮೀಕ್ಷೆ ಕಾರ್ಯ ಮುಗಿದಿರುತ್ತದೆ.
ರೈತರಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ, ಬೆಳೆದರ್ಶಕ್ ಆಪ್ ಮುಖಾಂತರ ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ವೀಕ್ಷಿಸಬಹುದಾಗಿದ್ದು, ಸಮೀಕ್ಷೆ ಕಾರ್ಯದಲ್ಲಿ ಲೋಪವಿದ್ದಲ್ಲಿ ಬೆಳೆ ದರ್ಶಕ್ ಆಪ್ ಮುಖಾಂತರ ಆಕ್ಷೇಪಣೆ ಸಲ್ಲಿಸಬಹುದಾಗಿರುತ್ತದೆ.
ಬೆಳೆ ಸಮೀಕ್ಷೆ ಮಾಹಿತಿಯನ್ನು ಸರ್ಕಾರದ ವಿವಿಧ ಯೋಜನೆಗಳಿಗೆ ಹಾಗು ಪರಿಹಾರ ಧನ ವಿತರಿಸಲು ಬಳಸಲಾಗುವುದರಿಂದ ರೈತರು ತಮ್ಮ ಜಮೀನಲ್ಲಿ ಬೆಳೆದ ಬೆಳೆ ಮತ್ತು ಸಮೀಕ್ಷೆ ಕಾರ್ಯದಲ್ಲಿ ನಮೂದು ಮಾಡಲಾದ ಬೆಳೆಯು ಸರಿಯಾಗಿರುವುದನ್ನು ಖಾತರಿಪಡಿಸಿಕೊಳ್ಳಲು ಕೋರಿದೆ.
ಆಕ್ಷೇಪಣೆ ಸಲ್ಲಿಸಲು ಅ.15ರಂದು ಕೊನೆಯ ದಿನವಾಗಿರುತ್ತದೆ. ತಾಲ್ಲೂಕಿನ ಎಲ್ಲಾ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು – ಸಹಾಯಕ ಕೃಷಿ ನಿರ್ದೇಶಕರು