ಪಿಯುಸಿ ಪಾಸಾದ ಯುವಕ ಯುವತಿಯರಿಗೆ Emergency Medical Technician-Basic, ಕೌಶಲ್ಯಾಧಾರಿತ ಉಚಿತ ತರಬೇತಿ ಉದ್ಯೋಗ

0

ಹಾಸನ, ನ.05 : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ನಿರ್ದೇಶನದಂತೆ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ(PMKVY 3.0)  ಯ ಅಡಿಯಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿಗಳ ಕಚೇರಿ ಹಾಸನ ಜಿಲ್ಲೆ, ಹಾಸನ ಇವರಿಂದ ಪಿ.ಯು.ಸಿ ಪಾಸಾದ ಯುವಕ ಯುವತಿಯರಿಗೆ, Emergency Medical Technician-Basic,  ಕೌಶಲ್ಯಾಧಾರಿತ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯ ಕೌಶಲ್ಯ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

ವೃತ್ತಿ ತರಬೇತಿಯು ಅಲ್ಪಾವಧಿಯದಾಗಿದ್ದು, ತರಬೇತಿಯನ್ನು ಜಿಲ್ಲಾ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರ/ಖಾಸಗಿ ಆಸ್ಪತ್ರೆಗಳಲ್ಲಿ ನೀಡಬಹುದಾಗಿರುತ್ತದೆ. 18 ರಿಂದ 35 ವರ್ಷ ವಯೋಮಿತಿಯಲ್ಲಿ ಆಸಕ್ತ ಅರ್ಹ ಅಭ್ಯರ್ಥಿಗಳು ಕೂಡಲೇ ಜಿಲ್ಲಾ ಕೌಶಲಾಭಿವೃದ್ಧಿ ಕಚೇರಿ ಸಿಬ್ಬಂದಿಗಳ ಮೊಬೈಲ್‍ಗಳಿಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಬಹುದು. ತರಬೇತಿಯು ನವೆಂಬರ್ 20ರಂದು ಪ್ರಾರಂಭವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ: ಮೊ.ನಂ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳು 8861646939/ ಸಹಾಯಕ ನಿರ್ದೇಶಕರು: 9844552919/7996662135. ಇಮೇಲ್ ವಿಳಾಸ: dsdohsn18@gmail.com ಗೆ ಸಂಪರ್ಕಿಸಬಹುದಾಗಿದೆ.

#jobopportunitieshassan #freecourseshassan

LEAVE A REPLY

Please enter your comment!
Please enter your name here