ಹಾಸನ : ಹಾಸನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಡಿ.ಪುಟ್ಟಮ್ಮ (95) ಅವರು ಇಂದು ನಿಧನರಾದರು. ಬೇಲೂರು ತಾಲ್ಲೂಕಿನ ಕುಶಾವರ ಗ್ರಾಮದವರಾದ ಡಿ.ಪುಟ್ಟಮ್ಮ ಅವರು ವಯೋಸಹಜ ಅನಾರೋಗ್ಯದಿಂದ ಮನೆಯಲ್ಲೇ ಕೊನೆಯುಸಿರೆದರು.
ಬೇಲೂರು ತಾಲ್ಲೂಕು ಬೋರ್ಡ್ ಸದಸ್ಯರಾಗಿ, ಪುರಸಭೆ ಉಪಾಧ್ಯಕ್ಷರಾಗಿ, ಭೂ ಮಂಜೂರಾತಿ ಸಮಿತಿ ಸದಸ್ಯರಾಗಿ ಪುಟ್ಟಮ್ಮ ಅವರು ಕೆಲಸ ಮಾಡಿದ್ದರು. ಅಲ್ಲದೆ ಸೌಮ್ಯಕೇಶವಿ ಸಂಸ್ಥೆ ಕಟ್ಟಿ ದುರ್ಬಲ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಶ್ರಮಿಸಿದ್ದರು.
ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದ ಡಿ.ಪುಟ್ಟಮ್ಮ ಅವರ ಪತಿಯಾದ ಕೆ.ಸಿ.ಪುಟ್ಟೇಗೌಡರೂ ಸಹ ಸ್ವಾತಂತ್ರ್ಯ ಹೋರಾಟ ಗಾರರಾಗಿದ್ದರು. ಪುಟ್ಟಮ್ಮ ಅವರು ನಾಲ್ವರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಾಳೆ ಸ್ವಗ್ರಾಮ ಕುಶಾವರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.