ಹಾಸನ ಜ.21(ಹಾಸನ್_ನ್ಯೂಸ್ !, ಸ್ಟಾಪ್ ಸೆಲೆಕ್ಷನ್ ಕಮಿಷನ್ – ಕಂಬೈಂಡ್ ಗ್ರಾಜ್ಯುಯೆಟ್ ಲೇವಲ್ ಎಕ್ಸ್‍ಮಿನೆಷನ್ – 2020 ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಅಸಿಸ್ಟೆಂಟ್, ಇನ್ಸ್‍ಪೆಕ್ಟರ್ ಆಫ್ ಇನ್‍ಕಮ್ ಟ್ಯಾಕ್ಸ್, ಇನ್ಸ್‍ಪೆಕ್ಟರ್ ಎಕ್ಸೈಸ್, ಸಬ್ ಇನ್ಸ್‍ಪೆಕ್ಟರ್ಸ್ ಸಿ ಬಿ ಐ, ಎನ್ ಐ ಎ, ಎನ್ ಸಿ ಬಿ, ಡಿವಿಜನಲ್ ಅಕೌಂಟೆಂಟ್, ಆಡಿಟರ್, ಟ್ಯಾಕ್ಸ್ ಅಸಿಸ್ಟೆಂಟ್ ಇನ್ನೂ ಮುಂತಾದ 6506 ಹುದ್ದೆಗಳ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿರುತ್ತಾರೆ.
ವಿದ್ಯಾರ್ಹತೆ: ಯಾವುದೇ ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ವಯೋಮಿತಿ: 18 ರಿಂದ 27 ವರ್ಷಗಳು, ಪರಿಶಿಷ್ಟ ಜಾತಿ/ಪಂಗಡ/ ಓಬಿಸಿ/ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ನಿಯಮಾನುಸಾರ ರಿಯಾಯಿತಿ ಇರುತ್ತದೆ ಅರ್ಜಿ ಸಲ್ಲಿಸಲು ಜ.31 ಅಂತಿಮ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ http://ssckkr.kar.nic.in ಅಥವಾ http://ssc.nic.in ನಲ್ಲಿ ಲಭ್ಯವಿರುವ ಮಾಹಿತಿಯನ್ನು ಪಡೆಯುವುದು. ಹಾಗೂ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ರವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08172 – 296374 ಅನ್ನು ಸಂಪರ್ಕಿಸಿ ಮಾಹಿತಿ ಮತ್ತು ಮಾರ್ಗದರ್ಶನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ವೇಣುಗೋಪಾಲ್ ತಿಳಿಸಿದ್ದಾರೆ.
Home COURSES FOR STUDENTS ಅಸಿಸ್ಟೆಂಟ್, ಇನ್ಸ್‍ಪೆಕ್ಟರ್ ಆಫ್ ಇನ್‍ಕಮ್ ಟ್ಯಾಕ್ಸ್ , ಕಂಬೈಂಡ್ ಗ್ರಾಜ್ಯುಯೆಟ್ ಲೇವಲ್ ಎಕ್ಸಾಮಿನೇಷನ್ ಗಳಿಗೆ...