ಹಾಸನ : 12 ದಿನಗಳಲ್ಲಿ 14.5 ಲಕ್ಷ + ಅಧಿಕ ಭಕ್ತರ ದಾಖಲೆ ಆಗಮನ , . ನಿನ್ನೆ ತಾನೆ ಉತ್ಸವ ತೆರೆ ಕಂಡಿದ್ದು, ಇಂದು ಬೀಗಿ ಪೊಲೀಸ್ ಬಂದೋಬಸ್ತ್ನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದು ಮುಕ್ತಾಯಗೊಂಡಿರುತ್ತದೆ .,
ಹಾಸನಾಂಬೆ ದೇವಾಲಯಕ್ಕೆ ಹರಿದುಬಂದಿದ್ದು

ಕೋಟಿ ಕೋಟಿ ಆದಾಯ , ಹಿಂದೆಂದಿಗಿಂತಲೂ ಹೆಚ್ಚು ಆದಾಯ ಪಡೆದ ಹಾಸನಾಂಬೆ ದೇವಾಲಯ , ಈ ಬಾರಿ ಬರೋಬ್ಬರಿ 8 ಕೋಟಿ 72 ಲಕ್ಷ 41 ಸಾವಿರ 531 ರೂ ಸಂಗ್ರಹ ಗೊಂಡಂತಾಗಿದೆ , ಕಳೆದ 2017 ರಲ್ಲಿ

4.14 ಕೋಟಿ ದಾಖಲೆಯ ಹಣ ಸಂಗ್ರಹವಾಗಿತ್ತು ಈ ಹಿಂದಿನ ದಾಖಲೆ ಯಾಗಿತ್ತು , ಎಲ್ಲಾ ವರ್ಷಗಳ ದಾಖಲೆಯನ್ನ ಬ್ರೇಕ್ ಮಾಡಿ ಈ ಭಾರಿ ಆದಾಯ ಹೊಸ ದಾಖಲೆ ಬರೆದಿದೆ , ವಿಶೇಷ ದರ್ಶನ ಟಿಕೆಟ್, ಲಾಡು ಪ್ರಸಾದದಿಂದ 6.15 ಕೋಟಿ ಸಂಗ್ರಹ ಮಾಹಿತಿ ನಿನ್ನೆಯೇ ಸಿಕ್ಕಿತ್ತು , ಇಂದು ಹುಂಡಿಯಿಂದ

2 ಕೋಟಿ 55 ಲಕ್ಷ 41 ಸಾವಿರದ 497 ರೂ ಸಂಗ್ರಹ ಲಭಿಸಿದೆ , ಕಾಣಿಕೆ ರೂಪದಲ್ಲಿ 62 ಗ್ರಾಂ ಚಿನ್ನ, 161 ಗ್ರಾಂ ಬೆಳ್ಳಿ ಬಂದಿದೆ , ಈ ಬಾರಿ 12 ದಿನ ಸಾರ್ವಜನಿಕರಿಂದ ದೇವಿ ದರ್ಶನ ವ್ಯವಸ್ಥೆ ಇದ್ದು ಮೊದಲ ಹಾಗೂ
ಕಡೆಯ ದಿನ ಸಾರ್ವಜನಿಕರಿಗೆ ಅವಕಾಶ ಇರಲಿಲ್ಲ , ಇಂದು ಬೆಳಗ್ಗೆಯಿಂದ ಸಿದ್ದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯುತ್ತಿದ್ದ ಹಣ ಎಣಿಕಾ ಕಾರ್ಯವು ,

ಹಾಸನಾಂಬ ಆಡಳಿತಾಧಿಕಾರಿ ಮಾರುತಿ ( AC ) ನೇತೃತ್ವದಲ್ಲಿ ನಡೆದ ಹುಂಡಿ ಹಣ ಎಣಿಕಾ ಕೆಲಸ ಕಂದಾಯ ಇಲಾಖೆ, ಸ್ಕೌಟ್ಸ್ – ಗೈಡ್ಸ್ ಸೇರಿದಂತೆ ಹಲವು ಇಲಾಖೆಗಳ ಸಹಕಾರದಿಂದ ಪೂರ್ಣಗೊಂಡಂತಾಯಿತು .