ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಸಲು ಅವಕಾಶ ಮಾಡಿಕೊಡಿ ಕಲ್ಯಾಣ ಮಂಟಪದ ಮಾಲೀಕರ ಸಂಘ ಹಾಸನ

0

ಕಲ್ಯಾಣ ಮಂಟಪ ಸಂಘದಿಂದ

ಜಿಲ್ಲಾ ಉಸ್ತುವಾರಿ ಮಂತ್ರಿ ಗೋಪಾಲಯ್ಯ ಅವರಿಗೆ ಮನವಿ

ಹಾಸನ: ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಸಲು ಅವಕಾಶ ಮಾಡಿಕೊಡುವಂತೆ ಕಲ್ಯಾಣ ಮಂಟಪದ ಮಾಲೀಕರ ಸಂಘದ ಅಧ್ಯಕ್ಷರಾದ ದಿನೇಶ್ ಹಾಗೂ ಎಫ್.ಕೆ.ಸಿ.ಸಿ.ಐ. ರಾಜ್ಯಾ ನಿರ್ದೇಶಕರು ಮತ್ತು ಕಲ್ಯಾಣ ಮಂಟಪ ಸಂಘದ ಉಪಾಧ್ಯಕ್ಷರಾದ ಹೆಚ್.ಎ. ಕಿರಣ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಗೋಪಾಲಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

​ ​ ​ ​ ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾ ಮಂತ್ರಿಗಳು ಶೀಘ್ರದಲ್ಲಿಯೇ ಕಲ್ಯಾಣ ಮಂಟಪದ ಬಾಗಿಲು ತೆಗೆಯಲು ನಿರ್ದೇಶನ ಕೊಡುವುದಾಗಿ ಭರವಸೆ ನೀಡಿದರು. ಮದುವೆಗಳು ಸಮುದಾಯ ಭವನಗಳಲ್ಲಿ ಹಾಗೂ ಸಣ್ಣ ಸಣ್ಣ ಮನೆಗಳಲ್ಲಿ ನಡೆಯುತ್ತಿದೆ. ಇದರಿಂದ ಕೊರೋನಾ ಸೋಂಕು ಇನ್ನು ಹೆಚ್ಚಾಗುವ ಸಾಧ್ಯತೆಗಳು ಇದೆ ಎಂದರು. ಸರಕಾರದ ನಿಯಮ ಪ್ರಕಾರ ಕಲ್ಯಾಣ ಮಂಟಪದಲ್ಲಿ ಮದುವೆ ಶುಭ ಸಮಾರಂಭಗಳನ್ನು ನಡೆಸಲಾಗುವುದು. ಸರಕಾರದ ನಿಯಮಕ್ಕೆ ಯಾವ ದಕ್ಕೆ ಆಗದಂತೆ ನ್ಯೂನ್ಯತೆಗಳನ್ನು ಪಾಲಿಸಲಾಗುವುದು. ಕೂಡಲೇ ಸರಕಾರವು ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಕೊಡುವುದರ ಮೂಲಕ ಅಡುಗೆ ಮಾಡುವ ಕೆಲಸದವರು, ವಾಲಗದವರು, ಹೂವಿನ ಅಲಂಕಾರ ಮಾಡುವವರು, ಸ್ವಚ್ಛತೆ ಮಾಡುವವರು, ಪುರೋಹಿತರಿಗೆ ಸೇರಿದಂತೆ ಅನೇಕರಿಗೆ ಉದ್ಯೋಗವನ್ನು ಮರಳಿ ಕಲ್ಪಿಸಿದಂತಾಗುತ್ತದೆ ಎಂದು ತಮ್ಮ ಮನವಿ ಕೋರಿಕೆಯಲ್ಲಿ ಹೇಳಿಕೊಂಡರು. ಕರ್ನಾಟಕದ ರಾಜ್ಯ ಕಲ್ಯಾಣ ಮಂಟಪ ಸಂಘದವರು ಕೂಡ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಲು ಅನುಮತಿ ಕೊಡುವಂತೆ ಕೋರಲಾಗಿದೆ ಎಂದು ಹೇಳಿದರು. ಈಸಮಯದಲ್ಲಿ ಜಿಲ್ಲಾಧಿಕಾರಿಗಳು ಕೂಡ ಸಕರಾತ್ಮಕವಾಗಿ ಸ್ಪಂದಿಸಿದರು.

​ ​ ​ ಹಾಸನ ಕಲ್ಯಾಣ ಮಂಟಪದ ಮಾಲೀಕರ ಸಂಘದ ಅಧ್ಯಕ್ಷರಾದ ದಿನೇಶ್, ಎಫ್.ಕೆ.ಸಿ.ಸಿ.ಐ. ರಾಜ್ಯಾ ನಿರ್ದೇಶಕರು ಮತ್ತು ಕಲ್ಯಾಣ ಮಂಟಪ ಸಂಘದ ಉಪಾಧ್ಯಕ್ಷರಾದ ಹೆಚ್.ಎ. ಕಿರಣ್, ಜಿಲ್ಲಾ ಕೈಗಾರಿಕ ಸಂಘದ ಅಧ್ಯಕ್ಷರಾದ ಜಿ.ಓ. ಮಹಾಂತಪ್ಪ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here