ಹಾಸನ ನಗರದಲ್ಲಿ ರಾಬರಿ ವ್ಯಾಪಾರಿಯ ಒಂದು ಮುಕ್ಕಾಲು ಲಕ್ಷ ಹೊತ್ತು ಪರಾರಿ

0

ಹಾಸನ ನಗರ : ಹಾಡು ಹಗಲೇ ರಾಬರಿ , ಸೋಮವಾರ ಪೇಟೆಯ ಹೋಲ್‌ ಸೇಲ್ ಅಂಗಡಿ ವ್ಯಾಪಾರಿ ಬಳಿ ಇದ್ದ 1,76,450 ರೂ.
ಹಣದ ಬ್ಯಾಗನ್ನು ನಗರದ ಸಂತೇಪೇಟೆ ಸರ್ಕಲ್ ನಲ್ಲಿ ಹೊಂಚುಹಾಕಿ ನಿಂತಿದ್ದ ಅಪರಿಚಿತನೊಬ್ಬ ಕಿತ್ತುಕೊಂಡು ಪರಿಯಾಗಿರುವ ಘಟನೆ ನಡೆದಿದೆ. , ಹಣ ಕಳೆದುಕೊಂಡ ವ್ಯಾಪಾರಿ ಹೈರಾಣಗುದ್ದಾರೆ.,‌ ವ್ಯಾಪಾರಿ ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕು, ಮಾದರವಳ್ಳಿ ಗ್ರಾಮದ
ಜಗದೀಶ್ ಎಂಬುವರು ಹಾಸನ ನಗರದ ಹೋಲ್‌ಸೇಲ್ ಅಂಗಡಿಯಿಂದ ವ್ಯಾಪಾರಕ್ಕೆಂದು ಸಾಮಾಗ್ರಿಗಳ ಖರೀದಿಸಿ ಶನಿವಾರಸಂತೆಯ ವಿವಿಧ ಅಂಗಡಿಗಳಿಗೆ ವಿತರಣೆ ಮಾಡುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.,
ಎಂದಿನಂತೆ ಹಾಸನ ನಗರಕ್ಕೆ ಬಂದೋಗುವ ಈ ಜಗದೀಶ್ ರನ್ನು ಅದ್ಯಾರೋ ಅಪರಿಚಿತ ಗಮನಿಸಿರಬಹುದು ಎಂದು ಅಂದಾಜಿಸಲಾಗಿದ್ದು .,‌ಜಗದೀಶ್ ಇಂದು ಜೂ.25 ರಂದು ತಮ್ಮ ಮಗನೊಂದಿಗೆ ಅವರ‌ ಗೂಡ್ಸ್ ವಾಹನ KA-12-A-4036 ಟಾಟಾ 909 ವಾಹನದಲ್ಲಿ ಅಗತ್ಯ ವಸ್ತುಗಳ ತೆಗೆದುಕೊಳ್ಳಲು ಹಾಸನಕ್ಕೆ ಆಗಮಿಸಿದ್ದ ವೇಳೆ ಅದರಂತೆ ಶನಿವಾರಸಂತೆಯ ಸುಧಾಮ ಸ್ಟೋರ್ ಮಾಲೀಕ ಮಹೇಂದ್ರ ಎಂಬುವರ ಬಳಿ 1.41.450₹ ಹಾಗೂ ಮಧು ಸ್ಟೋರ್ ಮಾಲೀಕ ನಟರಾಜು ಎಂಬುವರ ಬಳಿ 35.000₹ ಹಣ ಪಡೆದು ಬಂದಿದ್ದರಂತೆ

ಹಾಸನದ ಸಂತೆಪೇಟೆ ಸರ್ಕಲ್ ಹತ್ತಿರ ಇರುವ ಮಧು ಟ್ರೇರ್ಸ್ ಹತ್ತಿರ ಬಂದಾಗ ಮಧು ಟ್ರೇರ್ಸ್ ಅಂಗಡಿ ಬಾಗಿಲು ತೆಗೆದಿಲ್ಲ‌,‌ ವೀಕೆಂಡ್ ಲಾಕ್ ಡೌನ್ ಎಂದು., ಜಗದೀಶ್ ರ ಮಗ ಬೇರೆಡೆ ಬೇರೆ ಸಾಮಾಗ್ರಿ ತರಲು ಹೋದ ನಂತರ ಜಗದೀಶ್ ಅಲ್ಲೇ ಕಾಯುತ್ತಾ ಕುಳಿತಿದ್ದರು. ಜಗದೀಶ್ ಇದ್ದ ಸ್ಥಳಕ್ಕೆ ಆಗಮಿಸಿದ ಅಪರಿಚಿತನೊಬ್ಬ ಯಾರೂ ಇಲ್ಲದ ಸಮಯವನ್ನೇ ಅಕ್ಕಪಕ್ಕ ವೀಕ್ಣಿಸಿ ಕಾದು, ಹೊಂಚು ಹಾಕಿ ಹಣದ ಚೀಲ ಕಿತ್ತು ಓಡಿ ಹೋಗಿದ್ದಾನೆ. ಈ ಸಂಬಂದ ಪೆನ್ಶೆನ್ ಮೊಹಲ್ಲಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಈ ತಿಂಗಳಲ್ಲಿ ಲಾಕ್ ಡೌನ್ ನಿಮಿತ್ತ ಹಾಸನ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಸಾಕಷ್ಟು ಕಳ್ಳತನ ಪ್ರಕರಣಗಳು ದಾಖಲಾಗುತ್ತಿರೋದು ವ್ಯಾಪರಸ್ಥರಿಗೆ ಆತಂಕದ ವಾತಾವರಣ ಮೂಡಿದೆ.

ಸೂಚನೆ : ಆದಷ್ಟು ಆನ್ ಲೈನ್ ಅಥವಾ ಬ್ಯಾಂಕಿಂಗ್ ವಹಿವಾಟು ಮಾಡಿದರೆ ಒಳಿತು

LEAVE A REPLY

Please enter your comment!
Please enter your name here