ಸಾವಿನಲ್ಲೂ ಒಂದಾದ ಹಾಸನದ ಆದರ್ಶ ದಂಪತಿ

0

ಸಾವಿನಲ್ಲೂ ಒಂದಾದ ದಂಪತಿ : ಪತ್ನಿ ಮೃತಪಟ್ಟು 15 ನಿಮಿಷದಲ್ಲಿ ಪತಿಗೆ ಹೃದಯಾಘಾತವಾದ ಘಟನೆ ಹಾಸನದಲ್ಲಿ ನಡೆದಿದೆ

ಹಾಸನ: ಗಂಡ ಹೆಂಡತಿ ಸಂಬಂಧಕ್ಕೆ ಏಳೇಳು ಜನುಮದ ಅನುಬಂಧ ವಿದೆ ಎನ್ನಲಾಗುತ್ತದೆ . ಇತ್ತೀಚಿನ ಗಾಂಭೀರ್ಯತೆ ಇಲ್ಲದ ಕೆಲ ಮದುವೆ ಜೀವನ ಸರ್ವೇ ಸಾಮಾನ್ಯ

ಗಂಡ ಹೆಂಡತಿ ಎಂದ ಮೇಲೆ ಜಗಳ ದುಃಖ – ಸುಖ ಸ್ವೀಕರಿಸಿ ಜೀವನ ಸರಿದೂಗಿಸಿಕೊಂಡು ಹೋಗಬೇಕು . ಮತ್ತೊಬ್ಬರಿಗೆ ಮಾದರಿಯಾಗುವಂತೆ ಜೀವಿಸಬೇಕು. ಕುಟುಂಬದಲ್ಲಿ ಯಾರಿಗೇ ಏನಾದರೂ ಆದರೆ ಸಹಿಸುವ ಗ್ರಹಿಸುವ ತೂಗಿಸಿಕೊಂಡು ಹೋಗುವ ಗುಣ ಗಂಡ- ಹೆಂಡತಿಗೆ ಇರಬೇಕು . ಇದಕ್ಕೆ ಅದ್ಭುಉದಾಹರಣೆ ಎಂಬಂತೆ ಹಾಸನ ಜಿಲ್ಲೆಯಲ್ಲೊಂದು ಸಾಕ್ಷಿ ನಡೆದಿದೆ. ಮದುವೆಯಾದ ದಿನದಿಂದ ಅಪೂರ್ವ ಜೋಡಿಗಳಂತೆ ಜೀವನ ಸಾಗಿಸುತ್ತಿದ್ದ ದಂಪತಿ ಅಂತೆಯೇ ಸಾವಿನ ಪಯಣವನ್ನೂ ಒಟ್ಟಿಗೆ ನೆರವೇರಿಸಿ ಸಾಗಿದ್ದಾರೆ

ಮನೋಸಹಜ ಅನಾರೋಗ್ಯದಿಂದ ಪತ್ನಿ ಮೃತಪಟ್ಟ ಕೆಲವೇ ನಿಮಿಷಗಳ ಅಂತರದಲ್ಲಿ ಅರ್ಧಾಂಗ ಪತಿಯೂ ಸಾವಿಗೀಡಾಗಿದ್ದೂ, ಜೀವಿಸುವ ಬಹುತೇಕ ಸಮಯ ಒಂದಾಗಿದ್ದ ದಂಪತಿಗಳು ಸಾವಿನಲ್ಲೂ ಒಂದಾಗಿ ಗಾಡ ಪ್ರೀತಿಗೆ ಸಾಕ್ಷಿಯಾದರು .

ನಾವು ಹೇಳ್ತಾ ಇರೋ ವಿಷಯ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್‌ ಹೋಬಳಿಯ  ಅಮ್ಮನಹಳ್ಳಿ ಬಡಾವಣೆಯಲ್ಲಿ ಪತ್ನಿ ಜಯಮ್ಮ(50) ಹಾಗು ಜೆ.ಡಿ.ರಾಜೇಗೌಡ ಒಂದೇ ಸಮಯ ಸಾವು ನಡೆದಿರೋದು

ಕಳೆದ ಸೋಮವಾರ 28 ಜೂನ್ 2021 ಬೆಳಿಗ್ಗೆ ಸಮಯ ಉಷಾರಿಲ್ಲದೆ ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ಆಗಿರುವ ಜಯಮ್ಮನವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುವಾಗಲೇ ಪತ್ನಿಯ ಸಾವಿನ ಸುದ್ದಿಯಿಂದ ಆಘಾತಗೊಂಡಿದ್ದ ಪತಿ ರಾಜಣ್ಣ ಅವರು ಕೂಡ ಸ್ಥಳದಲ್ಲೆ ತಲೆಸುತ್ತಿಬಿದ್ದು ಪತ್ನಿಯ ಸಾವನ್ನು ಊಹಿಸಲು ಆಗದೆ ಹಾರ್ಟ್ ಅಟ್ಯಾಕ್ ನಿಂದ ತಮ್ಮ ಬರೋಬ್ಬರಿ 25 ವರ್ಷಗಳ ವೈವಾಹಿಕ ಜೀವನ ಸವೆಸಿದ್ದ ಈ ಆದರ್ಶ ದಂಪತಿ ಸಾವಿನಲ್ಲಿಯೂ ಒಂದಾಗಿ ತಮ್ಮ ಪಯಣವನ್ನು ಸಾವಿನಲ್ಲೂ ನಾನು ನೀನು ಜೋಡಿ ಎಂದು ಜೀವನ ಮುಗಿಸಿದರು

LEAVE A REPLY

Please enter your comment!
Please enter your name here