ರೋಟರಿ ಕ್ಲಬ್ ಹಾಸನ್ ರಾಯಲ್ಸ್ ವತಿಯಿಂದ ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರವನ್ನು ಹಾಸನ ಧರ್ಮಸ್ಥಳ ಆಯುರ್ವೇದ ಕಾಲೇಜು ಮತ್ತು KSRTC ನಿಗಮ ದವರೊಂದಿಗೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಶಿಬಿರದಲ್ಲಿ ನಿಗಮದ ನೌಕರರಿಗೆ ಮಧುಮೇಹ ತಪಾಸಣೆ ಹಾಗೂ ಬಿಪಿ ಪರೀಕ್ಷೆಗಳನ್ನು ನಡೆಸಲಾಯಿತು. ಸುಮಾರು 150ಕ್ಕೂ ಹೆಚ್ಚು ನೌಕರರು ಇದರ ಸದುಪಯೋಗವನ್ನು ಪಡೆದುಕೊಂಡರು.
ನಿಗಮದ ಅಧಿಕಾರಿ ಶ್ರೀ ರವಿ ಅವರು ಅಧ್ಯಕ್ಷತೆ ವಹಿಸಿದ್ದರು. ಮತ್ತು ಕಾರ್ಯಕ್ರಮದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರದೀಪ್ ರವರು ಹಾಗೂ ಅಧ್ಯಕ್ಷರಾದ ಮನು ಹಾಗೂ ಕಾರ್ಯದರ್ಶಿ ಗಿರೀಶ್ ಅವರು ಮತ್ತು ಧರ್ಮಸ್ಥಳ ಆಯುರ್ವೇದ ಕಾಲೇಜಿನ ವೈದ್ಯರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಿರೂಪಣೆಯನ್ನು ನಿಗಮದ ಅಧಿಕಾರಿ ಪುರುಷೋತ್ತಮ ರವರು ನೆರವೇರಿಸಿದರು. ರೋಟರಿ ರಾಯಲ್ಸ್ ನ ಅನೇಕ ಸದಸ್ಯರು ಭಾಗವಹಿಸಿದ್ದರು.
ವಿಶೇಷವಾಗಿ ರೋಟರಿ ಹಾಸನ ಮಿಡ್ ಟೌನ್ ಕಾರ್ಯದರ್ಶಿ ರೋಟೇರಿಯನ್ Dr ತೇಜಸ್ವಿ ರವರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದರು.