ಹಾಸನ / ಚಿಕ್ಕಮಗಳೂರು : ಬೇಲೂರು– ಬಿಳಿಕೆರೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವಾಗ ಚಿಕ್ಕ ಮಗಳೂರಿನಿಂದ– ಬೇಲೂರುವರೆಗಿನ 25 ಕಿ.ಮೀ. ಕೈಬಿಟ್ಟಿದ್ದರು. ರಾಷ್ಟ್ರೀಯ ಹೆದ್ದಾರಿಗೆ ಈ ಭಾಗವನ್ನು ಸೇರಿಸಬೇಕು ಎಂದು ಮನವಿ ಮಾಡಲಾಗಿತ್ತು. ಕೈಬಿಟ್ಟಿದ್ದ ಭಾಗವನ್ನು ರಾಷ್ಟ್ರೀಯ ಹೆದ್ದಾರಿಗೆ ಸೇರ್ಪಡೆ ಮಾಡಿ ಗಜೆಟ್‍ನಲ್ಲಿ ಪ್ರಕಟಿಸಿದೆ.
ಲೋಕೋಪಯೋಗಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ರಸ್ತೆಯನ್ನು ಹಸ್ತಾಂತರಿಸಿದ ನಂತರ ರಸ್ತೆ ಅಭಿವೃದ್ಧಿ ಆರಂಭವಾಗಲಿದೆ. ಈ ರಸ್ತೆ ಅಭಿವೃದ್ಧಿಪಡಿಸಿದರೆ ಚಿಕ್ಕಮಗಳೂರಿನಿಂದ ಬೆಂಗಳೂರು, ಮೈಸೂರಿಗೆ ಸಂಚಾರ ಇನ್ನಷ್ಟು ಸುಗಮವಾಗಲಿದೆ ಎಂದು ಶಾಸಕ ಸಿ.ಟಿ.ರವಿ ಪ್ರಕಟಣೆಯಲ್ಲಿ ತಿಳಿಸಿದ್ದು
ನಗರದ ಎಐಟಿ ವೃತ್ತದಿಂದ ಬೇಲೂರು – ಹಾಸನ – ಹೊಳೆನರಸೀಪುರ – ಬಿಳಿಕೆರೆ ಸಂಪರ್ಕ ರಸ್ತೆಯನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಯಾಗಿ (ಎನ್‌ಎಚ್–373) ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.