ಸಕಲೇಶಪುರ ತಾಲೂಕಿನ ಹಾಲೇಬೇಲೂರು ಗ್ರಾಮದಲ್ಲಿ ಚನ್ನಕೇಶವ ಸ್ವಾಮಿಯ ಮೂಲ ವಿಗ್ರಹ ಪತ್ತೆ | ನಿಜಕ್ಕು ಸಿಕ್ಕ ಶಿಲ್ಪ ಅಧ್ಬುತ 😱

0

ಹಾಸನ / ಸಕಲೇಶಪುರ : ಪ್ರಾಚೀನ ಕಾಲದಿಂದಲೂ ಚನ್ನಕೇಶವ ಸ್ವಾಮಿಯ ಮೂಲ ನೆಲೆ ಹಾಲೇಬೇಲೂರು ಎಂಬ ಪ್ರತಿಪಾದನೆ ಇದ್ದು ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಮದಲ್ಲಿ ಹೊಯ್ಸಳರ ಕಾಲದ ದೇವಾಲಯವಿದೆ. ಇದೆ ಗ್ರಾಮದಲ್ಲಿ ಹೊಯ್ಸಳರು ಚನ್ನಕೇಶವ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದರುಂತೆ , ಆದರೆ ಪಾಳೆಗಾರರ ದಾಳಿಯ ಭಯದಿಂದ ಚನ್ನಕೇಶವನ ದೇವಸ್ಥಾನ ನಿರ್ಮಾಣ ಯೋಜನೆ ಬೇಲೂರಿಗೆ ಸ್ಥಳಾಂತರವಾಯಿತಂತೆ .,

ಆ ಕಾರಣ : ಈ ಗ್ರಾಮಕ್ಕೆ ಹಳೇಬೇಲೂರು ಎಂಬ ಹೆಸರು ಬಂತಂತೆ. ಯುಗಗಳು ಉರುಳಿದಂತೆ ಜನರ ಬಾಯಲ್ಲಿ ಹಳೇಬೇಲೂರು-ಹಾಲೆಬೇಲೂರಾಯಿತು ಎಂಬ ಮಾತಿದೆ , ಈ ಮಾತು ನಿಜವೇ ಎಂಬಂತೆ ಎರಡು ದಿನಗಳ ಹಿಂದೆ ಗ್ರಾಮದ ಹೊರವಲಯದಲ್ಲಿ ಹರಿಯುವ ಹೇಮಾವತಿ ನದಿ ದಂಡೆಯಲ್ಲಿ ಮರಳು ಗಣಿಗಾರಿಕೆ ನಡೆಸುವ ಸಮಯ ಅಂದಾಹು 4ಅಡಿ ಎತ್ತರದ ಚನ್ನಕೇಶವ ಸ್ವಾಮಿ ವಿಗ್ರಹ ಪತ್ತೆಯಾಗಿರೋದು

ಅದು ಗ್ರಾಮಸ್ಥರು ಸಂರಕ್ಷಿಸಿ ದೇವಸ್ಥಾನಕ್ಕೆ ತಲುಪಿಸಿರುತ್ತಾರೆ .,  ತಹಸೀಲ್ದಾರ್‌ ಜಯಕುಮಾರ್ ಭೇಟಿ ನೀಡಿ ಪರಿಶೀಲನೆಗೆ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here