ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಈಗಾಗಲೇ “Karnataka State Police Mobile App”
https://play.google.com/store/apps/details?id=com.capulustech.ksppqrs
ಅನ್ನು ದಿ: 22/06/2018 ರಂದು ಮಾನ್ಯ ಮುಖ್ಯಮಂತ್ರಿಗಳು ಅಧಿಕೃತವಾಗಿ ಸಾರ್ವಜನಿಕರ ಉಪಯೋಗಕ್ಕೆ ಬಿಡುಗಡೆಗೊಳಿಸಿರುತ್ತಾರೆ. ಹಾಸನ ಜಿಲ್ಲೆಯಲ್ಲಿ ಈಗಾಗಲೇ 15,000 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಈ ಆಪ್ ಅನ್ನು “Google Play Store ನಿಂದ ಡೌನ್‌ಲೋಡ್ ಮಾಡಿಕೊಂಡು ಪ್ರಸ್ತುತ 14,725 ಸಾರ್ವಜನಿಕರು ಸದರಿ ಆಪ್ ನ ಉಪಯೋಗ ಪಡೆಯುತ್ತಿರುತ್ತಾರೆ.
ಸಾರ್ವಜನಿಕರು ಆಕಸ್ಮಿಕವಾಗಿ ಈ ಕೆಳಕಂಡ ವಸ್ತುಗಳನ್ನು ಕಳೆದುಕೊಂಡಲ್ಲಿ, ಸದರಿ ಕಳೆದುಕೊಂಡ ವಸ್ತುಗಳ ಬಗೆಗಿನ ವಿವರವನ್ನು ಪೊಲೀಸ್ ಇಲಾಖೆಗೆ ಮಾಹಿತಿಗಾಗಿ ನೀಡಲು ಪೊಲೀಸ್ ಠಾಣೆಗೆ ಭೇಟಿ ನೀಡುವುದನ್ನು ತಪ್ಪಿಸುವ ಸಂಬಂಧ ಈ ಆಪ್‌ನಲ್ಲಿ ನೂತನವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ “e-Lost Report” ಎಂಬ “Feature” ಅನ್ನು ಪರಿಚಯಿಸಿದ್ದು, “e-Lost Report Feature
https://play.google.com/store/apps/details?id=com.pspl.karnatakpolice
ನಲ್ಲಿ ಕಳೆದ ಹೋದ ವಸ್ತುವಿನ ವಿವರವನ್ನು ದಾಖಲಿಸುವ ಮೂಲಕ ನಿಮ್ಮ ದೂರನ್ನು ದಾಖಲಿಸಿ, ತಕ್ಷಣವೇ ತಮ್ಮ ಮೊಬೈಲ್‌ನಲ್ಲೇ ಸ್ವೀಕೃತಿಯನ್ನು ಪಡೆಯಬಹುದಾಗಿರುತ್ತದೆ. ಸದರಿ ಸ್ವೀಕೃತಿ ಪತ್ರವು ಕಳೆದುಕೊಂಡ ವಸ್ತುಗಳ ನಕಲುಗಳನ್ನು ಪಡೆಯಲು ಹಾಗೂ ಮುಂದಿನ ಕಾನೂನಾತ್ಮಕ ಕ್ರಮಗಳಿಗೆ ತುಂಬಾ ಉಪಯುಕ್ತವಾಗಿರುತ್ತದೆ. ಆದುದರಿಂದ ಸಾರ್ವಜನಿಕರು “Karnataka State Police Mobile App” ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ “e-Lost Report” Feature ನ ಸದುಪಯೋಗಪಡಿಸಿಕೊಳ್ಳುವಂತೆ ಈ ಮೂಲಕ ತಿಳಿಸಲಾಗಿದೆ.
“e-Lost Report” Feature ನಲ್ಲಿ ನಮೂದಿಸಬಹುದಾದ ವಸ್ತುಗಳ ವಿವರ
1. Credit Card
2. Debit Card
3. Driving License
4. PAN Card
5. Passbook
6. Passport
7. Cheque/DD
8. Ration card
9. Identity Card
10. Tablet/l-pad
11. Laptop 8. Mobile
12. Video Camera
13. Educational Certificate
14. Voter ID Card
ಈ ಪ್ರಕಟಣೆಯನ್ನು ಹಾಸನ ಜಿಲ್ಲಾ ಪೊಲೀಸ್ ಕಛೇರಿಯಿಂದ ಹೊರಡಿಸಲಾಗಿರುತ್ತದೆ.
#hassanpolicenews