ಹಾಸನ : ನಿಮಗೆ ನೆನಪಿರಬೇಕು !, ಹಾಸನ ಜಿಲ್ಲೆ ಈಗಾಗಲೇ ಅಂತರರಾಷ್ಟ್ರೀಯ ಕ್ರೀಡೆಗಳಿಗೆ ಹಲವು ಕ್ರೀಡಾಪಟುಗಳನ್ನು ನೀಡಿದೆ. ಪ್ರಮುಖರು ಜಾವಗಲ್ ಶ್ರೀನಾಥ್ (ಕ್ರಿಕೆಟ್), ವಿಕಾಸ್‍ಗೌಡ (ಡಿಸ್ಕಸ್ ಥ್ರೋ), ಪ್ಯಾರಾ ಒಲಿಂಪಿಯನ್ ಹೊಸನಗರ ಗಿರೀಶ್( ಹೈ ಜಂಪ್), ಇತ್ತೀಚೆಗೆ ಸುಹಾಸ್ ಲಾಳನಕೆರೆ( ಬ್ಯಾಡ್ಮಿಂಟನ್) ಅವರು ಅವಿಸ್ಮರಣೀಯ ಸಾಧನೆ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದರು
ಇದೇ ಮೊದಲ ಬಾರಿಗೆ ಹಾಸನ ಜಿಲ್ಲೆಯ ಬರೋಬ್ಬರಿ ಐವರು ಕ್ರೀಡಾಪಟುಗಳು ಭಾರತೀಯ ಹಾಕಿ ಸೀನಿಯರ್ ಮತ್ತು ಜೂನಿಯರ್ ಹಾಕಿ ವಿಭಾಗದ ರಾಷ್ಟ್ರೀಯ ಹಾಕಿ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದು ಈ ಕ್ರೀಡಾಪಟುಗಳ ಉತ್ಸಾಹ ನೋಡಿದರೆ ಮುಂದಿನ ಹಾಕಿ ಭಾರತ ತಂಡ ಪ್ರತಿನಿಧಿಸುವ ತಂಡದಲ್ಲಿ ಆಡೋದು ಬಹುತೇಕ ನಿಜವಾಗುವ ನಿರೀಕ್ಷೆ ಇದೆ
ಹಿರಿಯ ಪುರುಷರ ತಂಡಕ್ಕೆ ಆಯ್ಕೆಯಾದ ಇಬ್ಬರು :
1 . ಹಾಸನ ನಗರದ ಬೀರನಹಳ್ಳಿ ಬಡಾವಣೆ ರಾಘವೇಂದ್ರ ಕಾಲೋನಿಯ ಮಹೇಶ್-ಕಮಲ ದಂಪತಿ ಪುತ್ರ ಬಿ.ಎಂ. ಶೇಷೇಗೌಡ (ಮಿಡ್ ಫೀಲ್ಡರ್ ಆಟಗಾರ ಆಗಿರುವ ಶೇಷೇಗೌಡ ಅವರು ಪ್ರಸ್ತುತ ಇಂಡಿಯನ್ ರೈಲ್ವೆ ಹೈದ್ರಾಬಾದ್‍ನಲ್ಲಿ ಉದ್ಯೋಗಿಯಾಗಿದ್ದು, ದೇಶದ ವಿವಿಧೆಡೆ ನಡೆದಿರುವ ಹಲವು ಕ್ರೀಡಾಕೂಟದಲ್ಲಿ ಭಾಗಿಯಾಗಿ ಬಹುಮಾನ ಗಳಿಸಿ ಜಿಲ್ಲೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ)
- ಹೊಳೆನರಸೀಪುರ ತಾಲ್ಲೂಕು ಆಲದಹಳ್ಳಿ ಗ್ರಾಮದ ರಾಮಚಂದ್ರ ಅವರ ಪುತ್ರಿ ಅಂಜಲಿ ಎಚ್.ಆರ್. ಮಹಿಳಾ ತಂಡದ (ಇವರು ಮೈಸೂರಿನ ಚಾಮುಂಡಿ ವಿವಾಹ ಕ್ರೀಡಾಂಗಣದ ಮಹಿಳಾ ಕ್ರೀಡಾ ಹಾಸ್ಟೆಲ್‍ನಲ್ಲಿ ತರಬೇತಿ ಪಡೆದಿದ್ದು ಹಿರಿಯ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ)
ಇನ್ನು ಭಾರತೀಯ ಹಾಕಿ ಕಿರಿಯ ತಂಡದ ಈ ಮೂವರು ಸದಸ್ಯರು ಆಯ್ಕೆಯಾಗಿದ್ದಾರೆ
- ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಯೋಜನೆಯಡಿ (ಟಾಪ್) ಮಹಿಳಾ ಜೂನಿಯರ್ ಹಾಕಿ ತರಬೇತಿಗೆ ನಗರದ ಕ್ರೀಡಾ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅರಕಲಗೂಡು ತಾಲ್ಲೂಕು ಗಂಗೂರು ಗ್ರಾಮದ ಜಗದೀಶ್-ಸುಜಾತ ದಂಪತಿ ಪುತ್ರಿ ಚಂದನಾ ಜೆ.,
- ಶಾಂತಿ ಗ್ರಾಮದ ಪ್ರಕಾಶ-ಸೌಭಾಗ್ಯಮ್ಮ ದಂಪತಿ ಪುತ್ರಿ ಲಿಖಿತಾ ಎಸ್.ಪಿ.
- ಮಳಲಿ ಗ್ರಾಮದ ನಾಗರಾಜ್ ಪುತ್ರಿ ತೇಜಸ್ವಿನಿ ಡಿ.ಎನ್.
ಈ ಮೇಲ್ಕಂಡ ಮೂವರು ಕರ್ನಾಟಕ ರಾಜ್ಯದ 19 ವರ್ಷದೊಳಗಿನವರ ತಂಡದ ಆಟಗಾರ್ತಿಯರಾಗಿದ್ದರು.( ಆಯ್ಕೆಯಾದವರು ಹಾಕಿ ಇಂಡಿಯಾ ಆಯೋಜಿಸಿದ್ದ ರಾಷ್ಟ್ರೀಯ ಜೂನಿಯರ್ ಟೂರ್ನಿಯಲ್ಲಿ ಆಡಿದ್ದರು. ದೇಶದ ಒಟ್ಟು 60 ಆಟಗಾರ್ತಿಯರನ್ನು ಆಯ್ಕೆ ಮಾಡಲಾಗಿದ್ದು, ಇವರ ಪೈಕಿ 33 ಮಂದಿಯನ್ನು ಆರಿಸಿ ವಿಶೇಷ ತರಬೇತಿ ನೀಡಲಾಗುತ್ತದೆ) ಬೆಂಗಳೂರಿನಲ್ಲಿ ಭಾರತ ಕ್ರೀಡಾ ಪ್ರಾಧಿಕಾರದ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದಲ್ಲಿ ತರಬೇತಿಯು ಜ.17ರಿಂದ 29ರವರೆಗೆ ನಡೆಯಲಿದೆ.
ಹಾಸನ ಜನತರಯ ಆಶೀರ್ವಾದ ಸದಾ ಇರುತ್ತದೆ ., ಗೆದ್ದು ಬನ್ನಿ #hassan #hassannews #teamhassannews #hassansportsnews