ಭೀಕರ ರಸ್ತೆ ಅಪಘಾತ , ಎರಡು ಕಾರು ಜಖಂ ! ಘಟನೆ ಹಾಸನ ಜಿಲ್ಲೆ

0

ಭೀಕರ ರಸ್ತೆ ಅಪಘಾತ CCTVಯಲ್ಲಿ ಸೆರೆ , ಅಬ್ಬಬ್ಬಾ! ಈ ಅಪಘಾತ ಗಮನಿಸಿದ ಮೇಲೆ ಮೊದಲು ನಾವು ಊಹಿಸೋದು ಇಷ್ಟೇ !! ಯಾವುದೇ ತುರ್ತು ಪರಿಸ್ಥಿತಿ ಇದ್ದರು ಇಷ್ಟು ವೇಗಕ್ಕೆ ಹೊತ್ತು ಕೊಡೋದು ಬೇಕಿತ್ತಾ ??

ಘಟನೆ : ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕುಂದೂರು ಹೋಬಳಿಯ ಚನ್ನಾಪುರದ ರಸ್ತೆಯಲ್ಲಿ ನಡೆದಿದೆ . ವಿಡಿಯೋ ಸೂಕ್ಷ್ಮವಾಗಿ ಗಮನಿಸಿದರೆ ಎಡಗಡೆಯಿಂದ ಗೂಡ್ಸ್ ಮಹಿಂದ್ರಾ ವಾಹನ ಸಾಗುತ್ತಿರುವಾಗ ಅದರ ಹಿಂಬದಿಯಲ್ಲಿ ಈ ಗೂಡ್ಸ್ ವಾಹನ ಓವರ್ ಟೇಕ್ ಮಾಡಲು ಮುನ್ನುಗುವ ರಭಸಕ್ಕೆ ಎದುರಿನಿಂದ ಬಂದ ವೋಕ್ಸ್‌ವ್ಯಾಗನ್‌ ವಾಹನಕ್ಕೆ ಡಿಕ್ಕಿ ಹೊಡೆಯುತ್ತದೆ . ಬಲಿಷ್ಠ ವೋಕ್ಸ್‌ವ್ಯಾಗನ್‌ ರಸ್ತೆ ಪಕ್ಕದ ಮನೆ ಗೇಟ್ ಬಡಿದು ನಿಂತರೆ , ಸ್ವಲ್ಪ ದೂರಕ್ಕೆ ಮಾರುತಿ 800 ಜಖಂಗೊಂಡು ನಿಂತಿದೆ . ಘಟನೆ ಧರ್ಮಪ್ಪ ಎಂಬುವರನೆಯ ಆವರಣದ CCTV ಯಲ್ಲಿ ದಾಖಲಾಗಿದ್ದು . ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲ .

accidentnewshassan hassan hassannews alur sakleshpur mahindra wolkswagon maruthi800 accidents cctvfootages

LEAVE A REPLY

Please enter your comment!
Please enter your name here