ಹಾಸನಾಂಬೆ ದರ್ಶನ ಪಡೆದ ಗಣ್ಯರು

0

ಹಾಸನಾಂಬ ದೇವಿ ದರ್ಶನೋತ್ಸವಕ್ಕೆ ಎರಡನೇ ದಿನವೂ ಭಕ್ತರ ದಂಡು
ಹಾಸನ ಅ.29 :  ಹಾಸನಾಂಬ ದೇವಿ ದರ್ಶನೋತ್ಸವಕ್ಕೆ ಈ ದಿನವೂ ಭಕ್ತರ ದಂಡು ಹರಿದು ಬಂದಿದೆ. ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ  ಆಗಮಿಸಿ ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದ್ದಾರೆ.

ಸಾರ್ವಜನಿಕರು ಲಸಿಕೆ ಪಡೆದಿರುವ ಬಗ್ಗೆ 15 ಕಡೆ ತಪಾಸಣಾ ತಂಡ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಲೋಪಗಳಿಲ್ಲದಂತೆ ದರ್ಶನ ಉತ್ಸವಕ್ಕೆ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದು, ದರ್ಶನಕ್ಕಾಗಿ ಕಾದು ನಿಲ್ಲುವ ಭಕ್ತಾದಿಗಳಿಗೆ ಟಾರ್ಪಲ್, ಕಮಾನುಗಳನ್ನು ನಿರ್ಮಿಸಿ ನೆರಳಿನ ಅನುಕೂಲ ಕಲ್ಪಿಸಲಾಗಿದ್ದು, ಜಿಲ್ಲಾಡಳಿತದ ವತಿಯಿಂದ ಕಲ್ಪಿಸಲಾಗಿರುವ ಈ ಸುವ್ಯವಸ್ಥೆ ಕಂಡು ಸಾರ್ವಜನಿಕರು  ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಭಕ್ತಾದಿಗಳು ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಾ ಸಾಮಾಜಿಕ ಅಂತರ ಕಾಯ್ದುಕೊಂಡು, ಹಾಸನಾಂಬ ದೇವಿಯ ದರ್ಶನ ಪಡೆಯುವಂತೆ  ಜಿಲ್ಲಾಧಿಕಾರಿ ಆರ್. ಗಿರೀಶ್  ತಿಳಿಸಿದ್ದಾರೆ.

ಪದ್ಮಶ್ರೀ ಪುರಸ್ಕøತರಾದ ಸಾಲುಮರದ ತಿಮ್ಮಕ್ಕ, ಲೋಕ ಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವರು ಹಾಗೂ ಶಾಸಕರಾದ ಹೆಚ್.ಡಿ ರೇವಣ್ಣ, ಮಾಜಿ ಸಚಿವರಾದ ಎ.ಮಂಜು, ಹಾಗೂ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಭವಾನಿ ರೇವಣ್ಣ ಅವರು ಹಾಸನಾಂಬ ದೇವಿ ದರ್ಶನ ಪಡೆದರು.

ಹಾಸನ, ನ.02 : ರಾಜ್ಯ ಸರ್ಕಾರದ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್,  ಮೈಸೂರು ಜಿಲ್ಲೆಯ ಸಂಸದರಾದ ಪ್ರತಾಪ್ ಸಿಂಹ ಅವರು ಹಾಸನಾಂಬ ದೇವಿಯ ದರ್ಶನ ಪಡೆದರು.

    ಇದೇ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಗಿರೀಶ್, ಉಪ ವಿಭಾಗಾಧಿಕಾರಿ ಬಿ.ಎ.ಜಗದೀಶ್ ಮತ್ತಿತರರು ಹಾಜರಿದ್ದರು.

ಹಾಸನಾಂಬೆ  ದರ್ಶನ ಪಡೆದ ಶೋಭಾ ಕರಂದ್ಲಾಜೆ
ಹಾಸನ, ನ.02 : ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶೋಭಾ ಕರಂದ್ಲಾಜೆ ಅವರು ಹಾಸನಾಂಬ ದೇವಿ ದರ್ಶನ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರ ಹಾಗೂ ಬಡವರ ಸೇವೆ ಮಾಡುವ ಭಾಗ್ಯ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರೈತ ಮತ್ತು ಸೈನಿಕರು ಈ ದೇಶ ಕಾಯುವ ಮಹತ್ಮರಾಗಿದ್ದು, ಅವರಿಗೆ ರಕ್ಷಣೆಯಾಗಲೆಂದು ತಾಯಿಯಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ ಎಂದು ತಿಳಿಸಿದರು.

ನಗರ ಸಭೆ ಅಧ್ಯಕ್ಷರಾದ ಮೋಹನ್, ಜಂಟಿ ಕೃಷಿ ನಿರ್ದೇಶಕರಾದ ರವಿ ಹಾಗೂ ಮತ್ತಿತರರು ಹಾಜರಿದ್ದರು.

#hassanambha2021

LEAVE A REPLY

Please enter your comment!
Please enter your name here