ಬೈಕ್ ಅಡ್ಡಗಟ್ಟಿ ಸುಲಿಗೆ ಮಾಡಿದ ಆರೋಪಿಯನ್ನು ಬಂಧಿಸಿದ ಹೊಳೆನರಸಿಪುರ ನಗರ ಠಾಣೆಯ ಪೊಲೀಸರು

0

ಹಾಸನ : (ಹಾಸನ್_ನ್ಯೂಸ್) ; ಬೈಕ್ ಅಡ್ಡಗಟ್ಟಿ ಸುಲಿಗೆ ಮಾಡಿದ ಆರೋಪಿಯನ್ನು ಬಂಧಿಸಿದ ಹೊಳೆನರಸಿಪುರ ನಗರ ಠಾಣೆಯ ಪೊಲೀಸರು

ದಿನಾಂಕ-25-09-2020 ರಂದು ಮದ್ಯಾಹ್ನ 3-30 ಗಂಟೆಗೆ ಹರುವೇ ಗೌಡ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ದೂರಿನ ಮೇಲೆ ದಿನಾಂಕ 24-09-2020 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ತಮ್ಮ  ಕೆಎ13 ಈಕೆ-8593 ರ ಟಿವಿಎಸ್‌ ಸ್ಟಾರ್‌ ಸಿಟಿ ಬೈಕಿನಲ್ಲಿ ಹೊಳೆನರಸೀಪುರ ಟೌನ್ ಬಿತ್ತನೆ ಬೀಜ ತರಲು ಬಂದಿದ್ದು , 

ಸ್ವಲ್ಪ ಹೊತ್ತು ಸುಧಾರಿಸಿಕೊಳ್ಳೋಣ ಎಂದು ಸಂಜೆ 06-00 ಗಂಟೆ ಸಮಯದಲ್ಲಿ ಹಾಸನ-ಮೈಸೂರು ರಸ್ತೆಯಲ್ಲಿರುವ ರೇಣುಕಾ ಕಂಫರ್ಟ್ ಕಾಂಪ್ಲೆಕ್ಸ್ ಹತ್ತಿರ ಕುಳಿತಿದ್ದಾಗ ಇಲ್ಲಿಗೆ ಯಾರೋ ಒಬ್ಬ ವ್ಯಕ್ತಿ ಇವರ ಹತ್ತಿರ ಬಂದು ನಾನು ಸಿವಿಲ್ ಡಸ್ಟ್ ನಲ್ಲಿರುವ ಪೊಲೀಸ್ ಎಂದು ತಿಳಿಸಿ ನಿನ್ನನು ವಿಚಾರಣೆ ಮಾಡಬೇಕು ಠಾಣೆಗೆ ಬಾ ಎಂದು ಹುರವೇಗೌಡರನ್ನು ಹಾಗೂ ಅವರ ಬೈಕಿನ ಕೀಯನ್ನು ಆತನೇ ತೆಗೆದುಕೊಂಡು ಹರುವೇಗೌಡರನ್ನು ಬೈಕಿನಲ್ಲಿ ಕೂರಿಸಿಕೊಂಡು ಯಾವುದೋ ಒಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಆರೋಪಿ ಇಲ್ಲಿಗೆ ಏಕೆ ಕರೆದುಕೊಂಡು ಬಂದೆ ಎಂದು ಕೇಳಿದಾಗ ಆತನು ಬೈಕ್ ನಿಲ್ಲಿಸಿ ಅವರಿಗೆ ಚಾಕು ತೋರಿಸಿ ಹೆದರಿಸಿ  ಕೈ ಬೆರಳಿನ ಲ್ಲಿದ್ದ ಸುಮಾರು 4 ಗ್ರಾಂ ತೂಕದ ಚಿನ್ನದ ಉಂಗುರ

ಹಾಗೂ ಬೈಕನ್ನು ಕಿತ್ತುಕೊಂಡು ಹೋಗಿರುತ್ತಾನೆ, ಆತನನ್ನು ಮತ್ತೆ ನೋಡಿದರೆ ಗುರುತಿಸುತ್ತೇನೆ ಎಂದಿದ್ದ ನೊಂದ ಹರುವೇಗೌಡ , (ಬೈಕಿನ ಬೆಲೆ 45000/ ರೂ ಹಾಗೂ ಉಂಗುರದ ಬೆಲೆ ಸುಮಾರು 16000/ ರೂಗಳಾಗುತ್ತದೆ). ಹರುವೇಗೌಡರಿಗೆ ಪೊಲೀಸ್ ಎಂದು ಹೇಳಿ ನಂಬಿಸಿ ಮೋಸ ಮಾಡಿ ಚಾಕು ತೋರಿಸಿ ಹೆದರಿಸಿ ಬೈಕ್ ಮತ್ತು ಉಂಗುರವನ್ನು ಕಿತ್ತುಕೊಂಡು ಹೋದವನನ್ನು ಪತ್ತೆಮಾಡಿ ,  ಪ್ರಕರಣ ದಾಖಲಿಸಿ ,  ಪ್ರಕರಣದ ಆರೋಪಿ ಮತ್ತು ಮಾಲನ್ನು ಪತ್ತೆಹಚ್ಚಲು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಸನ ಜಿಲ್ಲೆ ಹಾಸನ ಅವರು ತಂಡವನ್ನು ರಚಿಸಿದ್ದರು ,  ಅದರಂತೆ ತನಿಖೆಯನ್ನು ಮುಂದುವರೆಸಿದ್ದು ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಹಿಡಿದು ಶಿಕ್ಷೆಗೆ ಗುರಿ ಪಡಿಸಿದ್ದಾರೆ

1) ಶಿವ, ಮಾರಗೌಡನಹಳ್ಳಿ ಶಿವ (ಜವರೇಗೌಡ ಬಿನ್ ಪುಟ್ಟಲಕ್ಕೇಗೌಡ ಮಾರಗೌಡನಹಳ್ಳಿ ಗ್ರಾಮ ಕಸಬಾ ಹೋ! ಹೊಳೆನರಸೀಪುರ ತಾ|| ಇವರನ್ನು ದಸ್ತಗಿರಿ ಮಾಡಿದ್ದು ಈತನಿಂದ 1,73000 (ಒಂದು ಲಕ್ಷ ಎಪತ್ತ ಮೂರು ಸಾವಿರ) ಬೆಲೆ ಬಾಳುವ ಚಿನ್ನಾಭರಣ ಮತ್ತು ಕೆಎ13ಇಕೆ8593ರ ಬೈಕನ್ನು ವಶಪಡಿಸಿಕೊಂಡಿರುತ್ತಾರೆ ಹೊಳೆನರಸಿಪುರ ನಗರ ಪೊಲೀಸ್ ಠಾಣೆಯ ಒಟ್ಟು 2 ಪ್ರಕರಣಗಳು ಬೆಳಕಿಗೆ ಬಂದು ಆರೋಪಿಗಳ ಹಿಡಿಯಲಾಗಿದೆ

ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್, ಶ್ರೀನಿವಾಸಗೌಡ, IPS ರವರ ಮತ್ತು ಅಪರ ಅಧೀಕ್ಷಕರಾದ ಶ್ರೀಮತಿ ಬಿ ಎನ್ ನಂದಿನಿ,KSPS ರವರ ಮಾರ್ಗದರ್ಶನದಲ್ಲಿ ಹೊಳೆನರಸೀಪುರ ಡಿವೈಎಸ್‌ಪಿ ಶ್ರೀ ಲಕ್ಷ್ಮೀಗೌಡ,KSPS ರವರ ಉಸ್ತುವಾರಿಯಲ್ಲಿ, ಹೊಳೆನರಸೀಪುರ ವೃತ್ತದ ಸಿ.ಪಿ.ಐ ಶ್ರೀ ಅಶೋಕ್ ಆರ್.ಪಿ. ಇವರು, ಹೊಳೆನರಸೀಪುರ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ ಕುಮಾರ್, ಹೊಳರನಸೀಪುರ ಗ್ರಾಮಾಂತರ ಠಾಣೆಯ ಪಿಎಸ್‌ಐ ಶ್ರೀ ಮೋಹನ್‌ಕೃಷ್ಣ, ಸಿಬ್ಬಂದಿಗಳಾದ ಪಿಸಿ-264 ಮಂಚೇಗೌಡ, ಪಿಸಿ-144 ಸಂಗಮ್, ಪಿಸಿ-83, ಕುಮಾರ್, ಪಿಸಿ-715 ಜಗದೀಶ, ಪಿಸಿ-70 ಚಿದಾನಂದ, ಪಿಸಿ-531 ಪ್ರಕಾಶ, ಪಿಸಿ-229 ಬಸವೇಗೌಡ, ಪಿಸಿ-259 ಹರೀಶ್, ಚಾಲಕರುಗಳು ಎಪಿಸಿ-251 ನಾಗಪ್ಪ, ಎಪಿಸಿ-262 ಧನರಾಜ್ ಅವರು ಪ್ರಕರಣ ಪತ್ತೆ ಹಚ್ಚುವಲ್ಲಿ ಶ್ರಮಿಸಿರುತ್ತಾರೆ.

ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್. ಶ್ರೀನಿವಾಸಗೌಡ, IPS ರವರು ಪ್ರಶಂಸಿಸುತ್ತಾರೆ. ಮತ್ತು ಸೂಕ್ತ ನಗದು ಬಹುಮಾನ ಘೋಷಣೆ ಮಾಡಿರುತ್ತಾರೆ.

LEAVE A REPLY

Please enter your comment!
Please enter your name here