ಜೆಡಿಎಸ್‌ ವರಿಷ್ಠ, ರಾಜ್ಯಸಭೆ ಸದಸ್ಯ ಎಚ್‌.ಡಿ. ದೇವೇಗೌಡ ಅವರಿಗೆ ರಾಜ್ಯ ಸರ್ಕಾರ ₹ 60 ಲಕ್ಷದ ವೊಲ್ವೊ ಹೊಸ ಕಾರು ಒದಗಿಸಿದೆ

0

ಬೆಂಗಳೂರು: ಜೆಡಿಎಸ್‌ ವರಿಷ್ಠ, ರಾಜ್ಯಸಭೆ ಸದಸ್ಯ ಎಚ್‌.ಡಿ. ದೇವೇಗೌಡ ಅವರಿಗೆ ರಾಜ್ಯ ಸರ್ಕಾರ ₹ 60 ಲಕ್ಷದ ವೊಲ್ವೊ ಹೊಸ ಕಾರು ಒದಗಿಸಿದೆ. ಆ ಮೂಲಕ, ದೇವೇಗೌಡರು ರಾಜ್ಯದಲ್ಲಿ ಅತಿ ದುಬಾರಿ ಸರ್ಕಾರಿ ಕಾರು ಹೊಂದಿರುವ ಜನಪ್ರತಿನಿಧಿ ಎನಿಸಿದ್ದಾರೆ.

‘ವೊಲ್ವೊ ಎಕ್ಸ್‌ಸಿ60ಡಿ5 ಮಾಡೆಲ್‌ ಕಾರಿನ ಮೂಲ ಬೆಲೆ ₹59.90 ಲಕ್ಷ ಇದ್ದು, ತೆರಿಗೆ, ವಿಮೆ ಮೊತ್ತ ಸೇರಿದರೆ ₹74.90 ಲಕ್ಷ ಆಗುತ್ತದೆ. ಸರ್ಕಾರದ ಹೆಸರಿನಲ್ಲಿ ಖರೀದಿಸುವಾಗ ತೆರಿಗೆ ಇಲ್ಲದಿರುವುದರಿಂದ ₹60 ಲಕ್ಷದಿಂದ ₹65 ಲಕ್ಷ ಆಗಿರಬಹುದು’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರು ಹೇಳಿದರು.

‘ರಾಜ್ಯಸಭೆ ಸದಸ್ಯರಾದ ಬಳಿಕ ಕಾರು ಒದಗಿಸುವಂತೆ ದೇವೇಗೌಡರು ಮಾಡಿದ್ದ ಮನವಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನುಮೋದಿಸಿದ್ದಾರೆ. ತಿಂಗಳ ಹಿಂದೆಯಷ್ಟೆ ಈ ಹೊಸ ಕಾರು (ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ನೋಂದಣಿ– ಕೆಎ 53 ಜಿ 3636) ನೀಡಲಾಗಿದೆ’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಬಳಿ ಎರಡು ಫಾರ್ಚ್ಯೂನರ್‌ ಕಾರುಗಳಿವೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ವಿಧಾನಸಭಾ ಸಚಿವಾಲಯದಿಂದ ಫಾರ್ಚ್ಯೂನರ್‌ ಕಾರು ನೀಡಲಾಗಿದೆ.

‘ದೇವೇಗೌಡರು ಇಂತಹದೇ ಕಾರು ಬೇಕೆಂದು ಕೇಳಿರಲಿಲ್ಲ. ಸರ್ಕಾರವೇ ಕಾರು ಕೊಟ್ಟಿದೆ. ಅದರ ಬೆಲೆ ಎಷ್ಟು ಎಂಬುದು ಗೊತ್ತಿಲ್ಲ’ ಎಂದು ಅವರ ಆಪ್ತ ಮೂಲಗಳು ಹೇಳಿವೆ.

LEAVE A REPLY

Please enter your comment!
Please enter your name here