ಮಾನಸಿಕ ಆರೋಗ್ಯಕ್ಕಾಗಿ ಪ್ರಾಣಾಯಾಮ ಬಹಳ ಮುಖ್ಯ

0

ದೈಹಿಕವಾಗಿ ಎಷ್ಟೇ ಆರೋಗ್ಯವಾಗಿದ್ದರೂ ಮಾನಸಿಕವಾಗಿ ಕುಗ್ಗಿಹೋಗಿದ್ದರೆ ಆ ಆರೋಗ್ಯ ಪರಿಪೂರ್ಣವಲ್ಲ. ಮನಸ್ಸನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಂಡರೆ, ಮಾನಸಿಕವಾಗಿ ನಮಗೆ ಬಹಳ ಸಹಾಯಕಾರಿ. ಆದರೆ ಮನಸ್ಸು ನಮ್ಮ ನಿಯಂತ್ರಣದಲ್ಲಿ ಹೇಗಿರುತ್ತದೆ? ಇದೇ ಇವತ್ತಿನ ವಿಚಾರ.
           

ಪುರಾತನ ಕಾಲದಿಂದಲೂ ಪ್ರಾಣಾಯಾಮಕ್ಕೆ ಬಹಳ ಪವಿತ್ರವಾದ ಶಕ್ತಿಯಿದೆ ಎಂದು ನಂಬಿದ್ದಾರೆ. ಪ್ರಾಣಾಯಾಮ ನಮ್ಮ ಮನಸ್ಸಿಗೆ ನೆಮ್ಮದಿ ಮಾತ್ರವಲ್ಲ ಉಸಿರಾಟ ಹಾಗೂ ದೈಹಿಕ ಮಾನಸಿಕ ಸಮತೋಲನವನ್ನು ಕಾಪಾಡುತ್ತದೆ. ಪ್ರಾಣಾಯಮದಲ್ಲಿ ಮುಖ್ಯವಾಗಿ ಬೇಕಾಗಿರುವುದು ನಮ್ಮ ಏಕಾಗ್ರತೆ. ಪ್ರಾರಂಭದಲ್ಲಿ ಇದು ಕಷ್ಟವಾದರೂ ಇದು ನಮಗೆ ನೆಚ್ಚಿನ ಅಭ್ಯಾಸವಾಗುತ್ತದೆ. ಈ ಲಾಭಕರವಾದ ಪ್ರಾಣಾಯಾಮದ ಉಪಯೋಗಗಳು ತಿಳಿಯೋಣ.

ಪ್ರಾಣಾಯಾಮ ಮಾಡುವುದರ ಪ್ರಯೋಜನಗಳು

• ಉಸಿರಾಟದ ಸಮಸ್ಯೆಗೆ ಪರಿಹಾರ:
              ಪ್ರಾಣಾಯಮದಲ್ಲಿ ಮುಖ್ಯವಾಗಿ ಉಸಿರಾಟ ತಂತ್ರಗಳು ಕಾರ್ಯನಿರ್ವಹಿಸುತ್ತದೆ. ಪ್ರತಿದನ ಪ್ರಾಣಾಯಾಮವನ್ನು ಮಾಡುವುದರಿಂದ ನಮ್ಮ ಶ್ವಾಸಕೋಶ ಉತ್ತಮವಾಗಿ ಕೆಲಸ ಮಾಡುತ್ತದೆ ಇದರಿಂದ ಉಸಿರಾಟದ ಸಮಸ್ಯೆ ಮತ್ತು ಅಸ್ತಮಾ ಸಮಸ್ಯೆಯನ್ನು ಕೂಡ ತಡೆಗಟ್ಟಬಹುದು.

• ಮನಸ್ಸಿಗೆ ನೆಮ್ಮದಿ:

                ನೀವೇ ಗಮನಿಸಿರಬಹುದು ನಮ್ಮ ಮನಸ್ಸು ಶಾಂತ ರೂಪದಲ್ಲಿ ಇರುವಾಗ ನಮ್ಮ  ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತೇವೆ. ಎಲ್ಲರೊಂದಿಗೂ ಸಂತೋಷವಾಗಿ ಕಾಲ ಕಳೆಯುತ್ತೀವೆ. ಮನಸ್ಸು ಸ್ಥಿರವಿಲ್ಲದಿದ್ದಾಗ ಅರಿವಿಲ್ಲದೆ ನಾವು ತೊಂದರೆಗೆ ಒಳಗಾಗುತ್ತವೆ, ಪ್ರಾಣಾಯಾಮ ಮಾಡುವಾಗ ನಮ್ಮ ಮನಸ್ಸು ಯಾವುದೇ ತರಹದ ಚಿಂತೆ ಮಾಡುವುದಿಲ್ಲ ಈ ರೀತಿ ನಾವು ಅಭ್ಯಾಸ ಮಾಡಿಕೊಂಡಾಗ ನಮ್ಮ ಮನಸ್ಸು ಅತ್ಯಂತ ಶಾಂತ ರೂಪದಲ್ಲಿರುತ್ತದೆ. ಖಿನ್ನತೆಗೆ  ಒಳಗಾಗಿರುವವರು  ಪ್ರಾಣಾಯಾಮದಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

• ಏಕಾಗ್ರತೆಯನ್ನು ಹೆಚ್ಚಿಸುತ್ತದೆ:

                  ದಿನದಲ್ಲಿ ಕನಿಷ್ಠ ಐದು ನಿಮಿಷವಾದರೂ ಪ್ರಾಣಾಯಾಮ ಮಾಡುವುದರಿಂದ ನಮ್ಮ ಏಕಾಗ್ರತೆ ಬಹಳ ಹೆಚ್ಚಾಗುತ್ತದೆ. ಯಾವುದೇ ಚಿಂತೆಗೆ ಒಳಗಾಗದೆ ನಮ್ಮ ಮನಸ್ಸನ್ನು ಶಾಂತ ರೀತಿಯಲ್ಲಿ ಇಟ್ಟುಕೊಳ್ಳುವುದೇ ಪ್ರಾಣಾಯಾಮದ ಪ್ರಯತ್ನ ಇದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಹೆಚ್ಚಾಗುತ್ತದೆ.

ನಾವು ಪ್ರಾಣಾಯಾಮ ಮಾಡುವುದರಿಂದ ನಮ್ಮ ದೇಹದಲ್ಲಿರುವ ವಿಷಕಾರಿ ಅಂಶವು ಹೊರಹೋಗುತ್ತದೆ ಇದರಿಂದ ನಮ್ಮ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ. ನಮಗೆ ಯಾವುದೇ ಹೃದಯದ ಸಮಸ್ಯೆ ಅಥವಾ ಜೀರ್ಣಕ್ರಿಯೆ ಸಮಸ್ಯೆ ಬರುವುದಿಲ್ಲ. ಪ್ರಾಣಾಯಾಮವನ್ನು ನಿಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಿ ಜೀವನದ ಧನಾತ್ಮಕ ಕಡೆಯನ್ನು ನೀವು ಕಾಣುವಿರಿ. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.

ತನ್ವಿ. ಬಿ
                

LEAVE A REPLY

Please enter your comment!
Please enter your name here