ಹುಡುಗಿ ಮನೆಯವರಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ಆರೋಪ?? ಯುವಕ ತನಗಾದ ಮಾನಸಿಕ ಹಿಂಸೆ ಹಾಗೂ ಗಾಯಗಳ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿ ಬೆಂಗಳೂರಿನಲ್ಲಿ ಆತ್ಮಹತ್ಯೆ ಗೆ ಶರಣು

0

ಕೌಟಂಬಿಕ ಕಲಹ: ವ್ಯಕ್ತಿ ನೇಣಿಗೆ ಶರಣು

ಸಕಲೇಶಪುರ: ಕೌಟಂಬಿಕ ಕಲಹದಿಂದ ಬೇಸತ್ತ ತಾಲೂಕಿನ ವ್ಯಕ್ತಿ ಯೊಬ್ಬರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಯಸಳೂರು ಗ್ರಾಮದ ಅಬ್ದುಲ್ ಬಷೀದ್ (34) ಮೃತ ವ್ಯಕ್ತಿ ಕೌಟಂಬಿಕ ಕಲಹದಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದ ಬಷೀದ್, ಬೆಂಗಳೂರಿನ ಸೋಮೇಶ್ವರ ನಗರದ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮೃತ ವ್ಯಕ್ತಿ 5 ತಿಂಗಳ ಹಿಂದಷ್ಟೇ ಹಾಸನ ನಗರದ ವಲ್ಲಬಾಯಿ ರಸ್ತೆಯ ಮಿಸ್ಬ ಅಮ್ರಿನ್ ರಿಜ್ವ ಎಂಬುವರೊಂದಿಗೆ ವಿವಾಹವಾಗಿದ್ದರು.

ಮೃತ ಅಬ್ದುಲ್ ಬಷೀದ್ 15ವರ್ಷಗಳಿಂದ ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ಸ್ ವ್ಯಾಪಾರ ನಡೆಸು ತಿದ್ದರು. ವಿವಾಹ ನಂತರ ಪತ್ನಿ ಯೊಂದಿಗೆ ಬೆಂಗಳೂರಿನಲ್ಲಿ ನೆಲೆಸುವ ಇಚ್ಛೆ ಹೊಂದಿದ್ದರು.

ಇದಕ್ಕೆ ಒಪ್ಪದ ಪತ್ನಿಯ ಕುಟುಂಬದವರು ಹೆಂಡತಿಯೊಂದಿಗೆ ಹಾಸನದಲ್ಲಿಯೇ ಇರಬೇಕೆಂದು ಅಬ್ದುಲ್ ಬಷೀದ್‌ಗೆ ಆಗಾಗ ಒತ್ತಾಯ ಮಾಡಿ ಮಾನಸಿಕ ವಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಹಲವು ಬಾರಿ ಎರಡು ಮನೆಯ ವರ ನಡುವೆ ರಾಜಿ ಪಂಚಾಯಿತಿ ಸಹ ನಡೆದಿತ್ತು.

ಕಳೆದ ವಾರ ಮದುವೆ ನಂತರವೂ ತವರು ಮನೆಯಲ್ಲಿದ್ದ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದ ವೇಳೆ, ಅಬ್ದುಲ್ ಬಷೀದ್ ಗೆ ಪತ್ನಿಯ ತಂದೆ ಸಗೀರ್ ಖಾನ್ ರಿಜ್ವಿ ಹಾಗೂ ಆಕೆಯ ಸಹೋದರ ಸಜೀರ್‌ ಖಾನ್ ಮತ್ತು ಸಿಮ್ರಾನ್ ರಿಜ್ವಿ ಹಲ್ಲೆ ಮಾಡಿ, ನಿಂದಿಸಿ ಮಾನಸಿಕ ಕಿರುಕುಳ ನೀಡಿದ್ದರು ಎಂದು ತಿಳಿದುಬಂದಿದೆ.

ಇದರಿಂದ ಮನನೊಂದು ವಾಪಸ್ ಬೆಂಗಳೂರಿಗೆ ತೆರಳಿದ್ದ ಬಷೀದ್, ತನ್ನ ಮನೆಯಲ್ಲೇ ಮಂಗಳವಾರ ರಾತ್ರಿ ನೇಣಿಗೆ ಶರಣಾಗಿದ್ದಾನೆ,‌ ನೇಣಿಗೆ ಶರಣಾಗುವ ಮುನ್ನ ಸಾಮಾಜಿ ಜಾಲತಾಣದಲ್ಲಿ ಹಲ್ಲೆಗೊಳಗಾಗಿರುವ ಗಾಯಗಳ ಸಮೇತ ಫೊಟೋಗಳ ಹಾಕಿದ್ದಾನೆ ಎಂದು ಮೃತನ ಸಹೋದರ ಮಹಮ್ಮದ್ ಸೈಫುದ್ದೀನ್ ಬೆಂಗಳೂರಿನ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here