ಮೂಲಂಗಿಯನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ

0

ಮೂಲಂಗಿ ಅಂದ್ರೆ ಎಷ್ಟೋ ಜನಕ್ಕೆ ತಲೆಬಿಸಿ.ಬಹಳಷ್ಟು ಮಕ್ಕಳು ಮೂಲಂಗಿ ಸಾರು ಅಂತ ಹೇಳಿದರೆ ಊಟ ಮಾಡೋದೇ ಇಲ್ಲ. ಆದ್ರೆ ರೆಸ್ಟೋರೆಂಟ್ಗಳಲ್ಲಿ ಮೂಲಂಗಿಯನ್ನು ಹಲವಾರು ಸಲಾಡ್ ಗಳಲ್ಲಿ, ವಿಭಿನ್ನ ರೀತಿಯ ಅಡುಗೆಯಲ್ಲಿ  ಉಪಯೋಗಿಸುತ್ತಾರೆ. ಮೂಲಂಗಿ ಬಹಳ ಆರೋಗ್ಯಕರ, ಇದರ ಉಪಯೋಗಗಳು ತಿಳಿದಮೇಲೆ ಮೂಲಂಗಿಯನ್ನು ತಿನ್ನಲು ಖಂಡಿತ ಪ್ರಯತ್ನಿಸುತ್ತೀರಾ.

ಮೂಲಂಗಿಯ ಉಪಯೋಗಗಳು:

ಮಲಬದ್ದತೆಯ ಸಮಸ್ಯೆಗೆ ಉಪಯೋಗಕಾರಿ:

            ನಾವು ಸೇವಿಸುವ ಆಹಾರದಲ್ಲಿ ನಾರು ಕಡಿಮೆ ಇದ್ದಲ್ಲಿ  ಮಲಬದ್ದೆತೆಯ ಸಮಸ್ಯೆ ನಮ್ಮನ್ನು ಹಿಂಬಾಲಿಸುತ್ತದೆ. ಹಾಗಾಗಿ ನಾರಿನಂಶವಿರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು. ಮೂಲಂಗಿಯಲ್ಲಿ ನಾರು ಹೆಚ್ಚಿರುವ ಕಾರಣದಿಂದ ಇದನ್ನು ಸೇವಿಸಬಹುದು.

ಮೂಲವ್ಯಾಧಿ ಸಮಸ್ಯೆಗೆ ಸಹಾಯಕಾರಿ:

         ಮೂಲಂಗಿ ಜೀರ್ಣಕ್ರಿಯೆಗೆ ಬಹಳ ಉಪಯೋಗಕಾರಿ. ನಿಮ್ಮ ಊಟದೊಂದಿಗೆ ಕಚ್ಚಾ ಮೂಲಂಗಿ ಸೇವಿಸುವುದರಿಂದ ಜೀರ್ಣಕ್ರಿಯೆ ಬಹಳ ಸುಲಭವಾಗಿ ನಡೆಯುತ್ತದೆ , ಹಾಗಾಗಿ ಮೂಲವ್ಯಾಧಿ ಸಮಸ್ಯೆಗೆ ಮೂಲಂಗಿ ಉತ್ತಮ.

ತೂಕ ಇಳಿಸಲು ಸಹಾಯಕಾರಿ:

         ಮೂಲಂಗಿಯಲ್ಲಿ ನಾರಿನಂಶ ಬಹಳ ಹೆಚ್ಚು, ತೂಕ ಇಳಿಸಲು ಪ್ರಯತ್ನಿಸುತ್ತಿರುವವರು ನಾರಿನಂಶ ಹೆಚ್ಚಿರುವ ಪದಾರ್ಥಗಳನ್ನು ಸಾಮಾನ್ಯವಾಗಿ ಸೇವಿಸುತ್ತಾರೆ ಮೂಲಂಗಿ ಯಲ್ಲಿರುವ ಪೋಷಕಾಂಶಗಳ ಪ್ರಮಾಣ ಕೂಡ ಹೆಚ್ಚು ಇದರಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿವೆ ಹಾಗಾಗಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ:
           ಮೂಲಂಗಿಯಲ್ಲಿರುವ anthocyanin ಅಂಶವು ಹೃದಯಕ್ಕೆ ಸಂಬಂಧಿಸಿದ ಯಾವುದೇ ತೊಂದರೆಗಳಿಗೂ ಉತ್ತಮ ಪರಿಹಾರ ನೀಡುತ್ತದೆ, ಹಾಗಾಗಿ ಮೂಲಂಗಿ ಸೇವಿಸುವುದರಿಂದ ಹೃದಯ ಸಮಸ್ಯೆಗಳನ್ನು ತಡೆಗಟ್ಟಬಹುದು.

ಮೂಲಂಗಿಯಲ್ಲಿ ಪೊಟಾಶಿಯಮ್, ತಾಮ್ರ, ವಿಟಮಿನ್ ಬಿ, ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಂಶಗಳು ಹೆಚ್ಚು ಪ್ರಮಾಣದಲ್ಲಿದ್ದು ಇದನ್ನು ಇನ್ನಷ್ಟು ಆರೋಗ್ಯಕರವಾಗಿ ಮಾಡುತ್ತದೆ. ಮೂಲಂಗಿ ಸೇವಿಸಿ ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಿ.ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.

– ತನ್ವಿ. ಬಿ

LEAVE A REPLY

Please enter your comment!
Please enter your name here