ಯುಪಿಎಸ್ಸಿ ಫಲಿತಾಂಶ ಕೋಚಿಂಗ್ ಇಲ್ಲದೆ ಹಾಸನದ ಹಳ್ಳಿ ಹುಡುಗನ ಸಾಧನೆ

0

” ಸ್ಪಷ್ಟ ಗುರಿ ಹಾಗೂ ಕಠಿಣ ಪರಿಶ್ರಮ ಇದ್ದರೆ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು ”  ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶದಲ್ಲೇ 752ನೇ ರ್‍ಯಾಂಕ್ ಪಡೆದ ಹಾಸನದ ಎಚ್.ವಿ. ಅಮೃತ್ 

• IRS ಹುದ್ದೆಯ ನಿರೀಕ್ಷೆಯಲ್ಲಿರುವ ಅಮೃತ್ ಅವರಿಗೆ , ಪರೀಕ್ಷೆ ತೆಗೆದುಕೊಳ್ಳಲು ತಾಯಿಯೇ ಸ್ಫೂರ್ತಿ. ಜನರ ಸೇವೆ ಮಾಡಬೇ ಕೆಂಬ ಉದ್ದೇಶದಿಂದ ಈ ಪರೀಕ್ಷೆ ತೆಗೆದುಕೊಂಡೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.,

• UPSC ಸೇರಿದಂತೆ ಇತರೆ  ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಯುವಜನರು ಮುಂದಾಗಬೇಕು. ಸತತ ಪ್ರಯತ್ನ, ಶ್ರದ್ಧೆ ಇರಬೇಕು. ಮುಂದಿನ ದಿನಗಳಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಹಾಸನ ಜಿಲ್ಲೆಯ ಯುವ ಜನರು UPSC ಹಾಗೂ ಇತತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು

• UPSC ಪರೀಕ್ಷೆಗೆ ವರ್ಷಗಟ್ಟಲೇ ಅಭ್ಯಾಸ ಮಾಡಬೇಕು ನಿಜ. ಯಾವುದನ್ನು ಓದಬೇಕು ಹಾಗೂ ಯಾವುದನ್ನು ಓದಬಾರದು ಎಂಬುದನ್ನು ಮೊದಲೇ ತಿಳಿದುಕೊಂಡರೆ ಒತ್ತಡ ಕಡಿಮೆ. ಪರೀಕ್ಷೆ ಪಾಸ್ ಮಾಡಲು ನಾನು ತರಬೇತಿ ಪಡೆದಿರುವುದಿಲ್ಲ. ಶ್ರವಣದೋಷ ಇದ್ದ ಕಾರಣ ಕೋಚಿಂಗ್ ಪ್ರಯೋಜನವಿಲ್ಲವೆಂದು ಆನ್‍ಲೈನ್ ಮೂಲಕ ಪುಸ್ತಕಗಳನ್ನು ಡೌನ್‍ಲೌಡ್ ಮಾಡಿಕೊಂಡು ಅಭ್ಯಾಸ ಮಾಡಿ ಮೂರನೇ ಪ್ರಯತ್ನದಲ್ಲಿ ಪರೀಕ್ಷೆ ಪಾಸ್ ಮಾಡಿರೋ ನನಗೆ ಖುಷಿ ಇದೆ ಎಂದರು

#hiddenachievershassan #hassan #hassannews #hvamruth #amruthhv

LEAVE A REPLY

Please enter your comment!
Please enter your name here