ಹಾಸನ / ಬೇಲೂರು: ಇತ್ತೀಚಿಗೆ ಚಿಕ್ಕಬಳ್ಳಾಪುರದಲ್ಲಿ ನಡೆದಂತಹ ಕರ್ನಾಟಕ ರಾಜ್ಯ ಥ್ರೋಬಾಲ್ ಫೆಡರೇಶನ್ ಕಾರ್ಯದರ್ಶಿ ಆರ್.ಹೆನ್ರಿ ಪ್ರಸನ್ನ ಕುಮಾರ್ ಹಾಗು ಪದಾಧಿಕಾರಿಗಳ ನೇತೃತ್ವದ ಸಭೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬೇಲೂರಿನ ಸರ್ವೋದಯ ಶಾಲೆಯ ವಿದ್ಯಾರ್ಥಿನಿಯರಾದ ವಿಭು ಪಟೇಲ್ ಮತ್ತು ಸಮೀಕ್ಷ ಸಿ.ಎಮ್ ಇವರು ಆಯ್ಕೆಯಾಗಿದ್ದಾರೆ
ಪಂದ್ಯವೂ 2021 ರ ಎಪ್ರಿಲ್ 15,16,ಮತ್ತು 17 ನೇ ತಾರೀಖಿನಂದು ಜಾರ್ಖಂಡ್ ರಾಜ್ಯದ ಧನ್ಹಾಬಾದ್ ನಲ್ಲಿ ನಡೆಯಲಿದೆ ,
ತರಬೇತುದಾರರಾದ ಸರ್ವೋದಯ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಮೆಹಬೂಬ್ ಮುನ್ನಾಖಾನ್ ಮತ್ತು ಭಾಗವಹಿಸುತ್ತಿರುವ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಮತ್ತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದು , ಹಾಸನ ಜನತೆಯ ಪರವಾಗಿ ಈ ಇಬ್ಬರು ಪ್ರತಿಭಾವಂತ ಕ್ರೀಡಾಪಟುಗಳ ಕ್ರಿಡಾ ಭವಿಷ್ಯಕ್ಕೆ ಹಾಸನ ಜನತೆಯ ಪರವಾಗಿ , ಶುಭಾಶಯಗಳು
ಸರ್ವೋದಯ ವಿದ್ಯಾಸಂಸ್ಥೆಯ ನಿರ್ದೇಶಕ ರಂಗನಾಥ್ ಬಿ.ಎಂ, ಪ್ರೌಢಶಾಲಾ ಮುಖ್ಯ ಶಿಕ್ಷಕ ಗಿರೀಶ್, ದೈಹಿಕ ಶಿಕ್ಷಕ ಮೆಹಬೂಬ್ ಮುನ್ನಾಖಾನ್ ಕೂಡ ಈ ಸಂದರ್ಭದಲ್ಲಿ ಇದ್ದರು ..!
#hassansportsnews #hiddenachievershassan #hiddentalentshassan