ಹಾಸನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹೊಂ ಕ್ವಾರಂಟೈನ್ ಸೇವೆಯಲ್ಲಿಯೂ ರಾಜ್ಯದಲ್ಲೇ ಅಗ್ರಸ್ಥಾನ

0

ಕೊವಿಡ್ ಕೌನ್ಸಿಲಿಂಗ್ : ಹಿಮ್ಸ್ ವಿದ್ಯಾರ್ಥಿಗಳಿಗೆ ಮೊದಲ ಸ್ಥಾನ

ಹಾಸನ‌ ಜೂ 6: ಕೊವಿಡ್ ಚಿಕಿತ್ಸಾ ಸೇವೆಯಲ್ಲಿ ರಾಜ್ಯದಲ್ಲೇ ಹೆಸರಾಗಿರುವ ಹಾಸನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹೊಂ ಕ್ವಾರಂಟೈನ್ ಸೇವೆಯಲ್ಲಿಯೂ ರಾಜ್ಯದಲ್ಲೇ ಅಗ್ರಸ್ಥಾನ ಪಡೆದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಹಿಮ್ಸ್ ನ ಅಂತಿಮ ವರ್ಷದ ಎಲ್ಲಾ 70 ವಿದ್ಯಾರ್ಥಿಗಳು ಸಂಪೂರ್ಣವಾಗಿ ಕೊವಿಡ್ 19 ,ಸೇವೆ ಹಾಗೂ ಆನ್ಲೈನ್ ಮೂಲಕ ಹೋಂ ಕ್ವಾರಂಟೈನ್ ನಲ್ಲಿ ಇರುವವರವ ಅರೋಗ್ಯ ವಿಚಾರಣೆ, ಕೌನ್ಸಲಿಂಗ್ ಕಾರ್ಯದಲ್ಲಿ ತೊಡಗಿ ಮೆಚ್ಚುಗೆ ಗಳಿಸಿದ್ದಾರೆ .

ರಾಜ್ಯ ಸರ್ಕಾರ ರಾಜೀವ್ ಗಾಂಧಿ ವಿಶ್ವ ವಿದ್ಯಾನಿಲಯದ ಮೂಲಕ ಎಲ್ಲಾ 45 ವೈದ್ಯಕೀಯ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳ ಸೇವಾ ವಿವರಗಳ ದತ್ತಾಂಶ ಪಡೆದುಕೊಂಡಿದ್ದು ಶೇ 100 ರ ಸಾಧನೆಯೊಂದಿಗೆ ಹಿಮ್ಸ್ ಮೊದಲ‌ ಸ್ಥಾನದಲ್ಲಿದೆ .

ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ದಿನಕ್ಕಿಷ್ಟು ಹೋಂ ಕ್ವಾರೆಂಟಿನಲ್ಲಿರುವ ರೋಗಿಗಳ ಆರೋಗ್ಯ ವಿಚಾರಿಸುವುದು, ಕೌನ್ಸೆಲಿಂಗ್ ಹಾಗೂ ಮಾರ್ಗದರ್ಶನ ಮಾಡುವ ಕರ್ತವ್ಯ ನಿರ್ವಹಣೆಯ ಹೊಣೆ ನೀಡಲಾಗಿದೆ. ಪ್ರತೀ ವಾರಕ್ಕೊಮ್ಮೆ ರಾಜ್ಯ ಮಟ್ಟದಲ್ಲೇ ನೋಡಲ್ ಅಧಿಕಾರಿಗಳಿಂದ ವಿದ್ಯಾರ್ಥಿಗಳ ಕಾರ್ಯವೈಖರಿಯ ಮೌಲ್ಯ ಮಾಪನ ಮಾಡಿ ಕಾಲೇಜುವಾರು ಮೌಲ್ಯಾಂಕ ಪ್ರಕಟಿಸಲಾಗುತ್ತದೆ

ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ 45 ಮೆಡಿಕಲ್ ಕಾಲೇಜುಗಳ ಪಟ್ಟಿಯಲ್ಲಿ ಹಿಮ್ಸ್ ವಿದ್ಯಾರ್ಥಿಗಳ ಸಾಧನೆ ಮಂಚೂಣಿಯಲ್ಲಿದೆ

ಎಸ್ .ಎಸ್ ಇನ್ಸ್ಟಿಟ್ಯೂಟ್ ಆಫ್ ಮಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ನಂತರದ ಸ್ಥಾನದಲ್ಲಿದ್ದಾರೆ .

ಕೇವಲ ಹೊಂ ಕ್ವಾರಂಟೈನ್ ನಲ್ಲಿದ್ದವರ ಸೇವೆ ಮಾತ್ರವಲ್ಲದೆ ಹಿಮ್ಸ್ ನ ವಿದ್ಯಾರ್ಥಿಗಳು ಆಸ್ಪತ್ರೆಗಳಲ್ಲಿಯೂ ಕೊವಿದ್ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿ ಜಿಲ್ಲೆಯ ಕೊವಿದ್ ಚಿಕಿತ್ಸಾ ವ್ಯವಸ್ಥೆಗೆ ಭಲ ತುಂಬಿದ್ದಾರೆ ಎಂಬುದು ಪ್ರಶಂಸನೀಯ

ಹಿಮ್ಸ್ ನಿರ್ದೇಶಕರಿಂದ ಅಭಿನಂದನೆ :
ಹಿಮ್ಸ್ ಅಂತಿಮ ವರ್ಷದ ವಿದ್ಯಾರ್ಥಿಗಳ ಈ ಸಮರ್ಪಣಾ ಭಾವದ ಸೇವೆ ಮತ್ತು ಸಾಧನೆಗೆ ಹಿಮ್ಸ್ ನಿರ್ದೇಶಕರಾದ ಡಾ. ರವಿ ಕುಮಾರ್
ಪ್ರಾಂಶುಪಾಲರಾದ ಡಾ.ನಾಗೇಶ್ ಹಾಗೂ ವೈದ್ಯಕೀಯ ಅಧೀಕ್ಷಕರಾದ ಡಾ. ಕೃಷ್ಣಮೂರ್ತಿ ಯವರು
ಅಭಿನಂದನೆ ಸಲ್ಲಿಸಿದ್ದಾರೆ

ಸೇವೆಯಲ್ಲಿ ಹಿಮ್ಸ್ ಸದಾ ಮುಂದು

ಸುಮಾರು ಎಂಟುನೂರು ಹಾಸಿಗೆಗಳ ಕೋವಿಡ್ ಆಸ್ಪತ್ರೆಯ ಯಶಸ್ವೀ ನಿರ್ವಹಣೆ, ಕೋವಿಡ್ ಪೂರ್ವದಲ್ಲಿಯೇ ಆಕ್ಸಿಜನ್ ಶೇಖರಣೆಗೆ ಪೂರ್ವ ಸಿದ್ಧತೆ ಹಾಗೂ ವೈರಾಣು ಪತ್ತೆ ಪ್ರಯೋಗಾಲಯದ ಸ್ಥಾಪನೆ, ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನಡೆಸಲಾಗುತ್ತಿರುವ “ವೈದ್ಯರ ನಡೆ ಹಳ್ಳಿಯ ಕಡೆ” ಎಂಬ ಅನನ್ಯ ಕಾರ್ಯಕ್ರಮಕ್ಕೆ ಸಂಸ್ಥೆಯ ಎಪ್ಪತ್ತೈದು ವೈದ್ಯರನ್ನು ನಿಯೋಜಿಸಿ ಕಾರ್ಯಕ್ರಮದ ಯಶಸ್ಸಿಗಾಗಿ ಜಿಲ್ಲಾಡಳಿತ ನಡೆಸುತ್ತಿದೆ

LEAVE A REPLY

Please enter your comment!
Please enter your name here