ಪ್ರತಿಷ್ಠಿತ ಖಾದ್ರಿ ಶಾಮಣ್ಣ ಪ್ರಶಸ್ತಿ ಈ ಬಾರಿ ಹಾಸನದ ಜನತಾ ಮಾಧ್ಯಮ ಪತ್ರಿಕೆಯ ಸಂಪಾದಕರಾದ ಆರ್ ಪಿ ವೆಂಕಟೇಶ್ ‌ಮೂರ್ತಿ

0

ಅರ್.ಪಿ ವಿ ಗೆ ಖಾದ್ರಿ ಶಾಮಣ್ಣ ಪ್ರಶಸ್ತಿ.
ಹಾಸನ ಜೂ 6 : ಹಾಸನ ಜಿಲ್ಲೆಯ ಜನತಾ ಮಾಧ್ಯಮ ಪತ್ರಿಕೆಯ ಸಂಪಾದಕರಾದ ಆರ್.ಪಿ ವೆಂಕಟೇಶ್ ‌ಮೂರ್ತಿ ಅವರು 2020 ನೇ ಸಾಲಿನ ಪ್ರತಿಷ್ಠಿತ ಖಾದ್ರಿ ಶಾಮಣ್ಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಆರ್.ಪಿ ವೆಂಕಟೇಶ್ ಮೂರ್ತಿ ಅವರು ಪತ್ರಿಕಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ‌, ಸಾಮಾಜಿಕ‌ ಕಳಕಳಿಯ ಕಾರ್ಯಗಳು , ರೈತ ಚಳುವಳಿ ಹಾಗೂ ಪರಿಸರ ಕಾಳಜಿಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ‌ಮಾಡಲಾಗಿದೆ.

ಆರ್.ಪಿ ವೆಂಕಟೇಶ್ ಮೂರ್ತಿ ಅವರು ಖಾದ್ರಿ ಶಾಮಣ್ಣ ಪ್ರಶಸ್ತಿ ಪಡೆಯುತ್ತಿರುವ 28 ನೇ ಪತ್ರಕರ್ತರಾಗಿದ್ದಾರೆ .
ಈ ಪ್ರಶಸ್ತಿ 15 ಸಾವಿರ ರೂಪಾಯಿ‌ ನಗದು ಹಾಗೂ ಫಲಕವನ್ನು ಒಳಗೊಂಡಿರುತ್ತದೆ.
ಕಳೆದ‌ ಬಾರಿ ಈ ಪ್ರಶಸ್ತಿ ಗೆ ತರಂಗ ಪತ್ರಿಕೆ ಡಾ ಯು.ಬಿ ರಾಜಲಕ್ಷ್ಮಿ ಅವರನ್ನು ಆಯ್ಕೆ ಮಾಡಲಾಗಿತ್ತು. ಕೊವಿದ್ 19 ಕಾರಣಗಳಿಂದ ಪ್ರಶಸ್ತಿ ವಿತರಣಾ ಸಮಾರಂಭ ನಡೆದಿರಲಿಲ್ಲ. ಈ ಬಾರಿ ಇಬ್ಬರೂ ಸಾಧಕರನ್ಮು ಒಟ್ಟಿಗೆ ಸನ್ಮಾನಿಸಿ ಪ್ರಶಸ್ತಿ ನೀಡಲಾಗುವುದು ಎಂದು ಖಾದ್ರಿ ಶಾಮಣ್ಣ ಟ್ರಸ್ಟ್ ನ ಟ್ರಸ್ಟಿ ಹೆಚ್.ಅರ್. ಶ್ರೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಮೂಲತಹ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿಯ ರಾಂಪುರ ಗ್ರಾಮದವರಾದ ಆರ್.ಪಿ
ವೆಂಕಟೇಶ ಮೂರ್ತಿ ಅವರು 1976 ರಿಂದ ಪತ್ರಿಕಾ ರಂಗದಲ್ಲಿದ್ದಾರೆ.ಜೊತೆಗೆ ಅನೇಕ‌ ಸಾಮಜಿಕ ಕಾರ್ಯಗಳಲ್ಲಿ ತೊಡಗಿದ್ದರೆ ಅವರು ಪತ್ರಕರ್ತನೂ ಒಬ್ಬ ರೈತ ಎಂದು ಕರೆದುಕೊಂಡಿರುವುದು ಅಪರೂಪದ ಸಂಗತಿ. ಸಾಮಾನ್ಯವಾಗಿ ಪತ್ರಕರ್ತರನ್ನು ಬುದ್ಧಿಜೀವಿಗಳು ಎಂದು ಕರೆಯುವುದುಂಟು. ನಿಜವಾದ ಮಣ್ಣಿನ ಮಗ ಪತ್ರಕರ್ತನಾಗಿ `ಜನತಾ ಮಾಧ್ಯಮ’ ದಿನಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ. ಬಿಎಸ್ಸಿ ಮತ್ತು ಎಲ್ ಎಲ್‌ ಬಿ ಪದವಿ ಗಳಿಸಿ , ಜೆಪಿ ಚಳವಳಿಯಿಂದ ಸ್ಪೂರ್ತಿ ಪಡೆದು ರೈತ ಚಳವಳಿಯಲ್ಲಿ ಭಾಗವಹಿಸಿ ಹಲವು ಹೋರಾಟಗಳನ್ನು ನಡೆಸಿದ್ದಾರೆ.
ಮಂಜುನಾಥ ದತ್ತ,ಜೇಬರ್ ಹಾಗೂ ವಾಸುದೇವನ್ ಅವರ ಒಡನಾಟದಲ್ಲಿ ಜೀವನ ಹಾದಿ ಕಂಡ ವೆಂಕಟೇಶ್ ಮೂರ್ತಿ ಅವರು ಈಗ ಬಾಗಿದ ಬಾಳೆಗೊನೆ ರೀತಿ ಇದ್ದಾರೆ. ಅದು ಎಷ್ಟೇ ಬಲಿತು ಪಕ್ವವಾಗಿದ್ದರೂ ನೆಲದ ಕಡೆ ನೋಡುತ್ತದೆಯೇ ಹೊರತು ಆಕಾಶದತ್ತ ತಲೆ ಎತ್ತುವುದಿಲ್ಲ. ಈಗಲೂ ಅವರ ದೃಷ್ಟಿ ಮಣ್ಣಿನತ್ತ ಇದೆ. ಅವರಿಗೆ ಈ ಪ್ರಶಸ್ತಿ ನೀಡಲು ಖಾದ್ರಿ ಶಾಮಣ್ಣ ಟ್ರಸ್ಟ್ ಸಂತಸ ವ್ಯಕ್ತಪಡಿಸುತ್ತದೆ ಎಂದು ಖಾದ್ರಿ ಶಾಮಣ್ಣ ಟ್ರಸ್ಟ್ ನ ಟ್ರಸ್ಟಿ ಹೆಚ್ ಅರ್.ಶ್ರೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here