ಮುಂಜಾನೆ ಎದ್ದಕೂಡಲೇ ಬಹುತೇಕ ಮನೆಗಳಲ್ಲಿ ಕೇಳುವ ಶಬ್ದ ‘ ಅಮ್ಮ ಕಾಫಿ’. ಕಾಫಿ ಹಲವರಿಗೆ ಪೆಟ್ರೋಲ್ ಇದ್ದಂತೆ. ಕಾಫಿ ಇಲ್ಲದಿದ್ದರೆ ನಮ್ಮ ಈ ಗಾಡಿ ಮುಂದೆ ಸಾಗೋಲ್ಲ. ಕಾಫಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವಾದಿಸುವವರು ಹಲವರಿದ್ದಾರೆ. ಇತ್ತೀಚಿನ ಒಂದು ಸಂಶೋಧನೆಯ ಪ್ರಕಾರ ದಿನಕ್ಕೆ ಮಿತ ಪ್ರಮಾಣದಲ್ಲಿ ಕಾಫಿ ಸೇವಿಸಿವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಶೇ. 53.51 ರಷ್ಟು ಭಾರತೀಯರು ಪ್ರತಿದಿನ ಕಾಫಿ ಸೇವಿಸುತ್ತಾರೆ.
![](https://hassananews.com/wp-content/uploads/2021/06/images2864297630422454303322967..jpg)
ಹಾಗಿದ್ರೆ ನಿಮಗೆ ಇಷ್ಟವಾದ ಕಾಫಿಯಿಂದ ಆಗುವ ಉಪಯೋಗಗಳನ್ನು ತಿಳಿದುಕೊಳ್ಳಿ
• ತೂಕ ಇಳಿಸಿಕೊಳ್ಳಲು ಸಹಾಯಕಾರಿ:
ಕಾಫಿಯಲ್ಲಿ ಮೆಗ್ನೀಷಿಯಂ ಮತ್ತು ಪೊಟ್ಯಾಷಿಯಂ ಅಧಿಕ ಪ್ರಮಾಣದಲ್ಲಿದೆ, ಇದು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಲಾಭಕಾರಿ. ಇದರಲ್ಲಿರುವ ಕೆಫಿನ್ ಅಂಶ ದೇಹದಲ್ಲಿರುವ ಕೊಬ್ಬಿನಾಂಶವನ್ನು ಕಡಿಮೆಗೊಳಿಸಲು ಉಪಯೋಗಕಾರಿ ಹಾಗಾಗಿ ತೂಕ ಇಳಿಸಿಕೊಳ್ಳಲು ನೆರವಾಗುವುದು.
![](https://hassananews.com/wp-content/uploads/2021/06/images2865293776235541172963692..jpg)
• ಮೆದುಳಿನ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ:
ಕಾಫಿಯಲ್ಲಿ ಕೆಫಿನ್ ಅಂಶವಿರುವ ಎಲ್ಲರಿಗೂ ತಿಳಿದ ವಿಚಾರ. ಕೆಫಿನ್ ಅಂಶ ನಮ್ಮ ಮೆದುಳನ್ನು ಚುರುಕಾಗಿ ಮಾಡುತ್ತದೆ ಇದರಿಂದ ಮೆದುಳಿನ ಶಕ್ತಿ ಮಟ್ಟವೂ ಹೆಚ್ಚಾಗುತ್ತದೆ ನಮ್ಮ ಮನಸ್ಥಿತಿ ಶಾಂತವಾಗಿರುತ್ತದೆ ಮತ್ತು ಮೆದುಳು ಅನೇಕ ಕಾರ್ಯಗಳನ್ನು ಸುಲಭವಾಗಿ ಮಾಡಲು ಸಹಾಯಮಾಡುತ್ತದೆ.
• ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ:
ಕಾಫಿಯಲ್ಲಿ ಆಂಟಿಆಕ್ಸಿಡೆಂಟ್ ಅಂಶ ಭಾರಿ ಪ್ರಮಾಣದಲ್ಲಿದೆ. ಹಾಗಾಗಿ ಇದು ಕ್ಯಾನ್ಸರ್ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಉಪಯೋಗವಾಗುತ್ತದೆ. ದಿನದಲ್ಲಿ 2-3 ಕಪ್ ಕಾಫಿ ಕುಡಿದರೆ ಕ್ಯಾನ್ಸರ್ ರೋಗವನ್ನು ದೂರವಿಡಬಹುದು.
![](https://hassananews.com/wp-content/uploads/2021/06/images2863292573572728105222001..jpg)
• ಟೈಪ್ 2 ಡಯಾಬಿಟಿಸ್ ಸಮಸ್ಯೆಯನ್ನು ತೊಲಗಿಸುತ್ತದೆ:
ಕಾಫಿ ಕುಡಿಯುವುದರಿಂದ ಶೇ. 42 ರಷ್ಟು ಟೈಪ್ 2 ಡಯಾಬಿಟಿಸ್ ಬರುವ ಸಂಭವ ಕಡಿಮೆಯಾಗಲಿದೆಯಂತೆ. ಇದರಲ್ಲಿರುವ ಕೆಫೀನ್ ಅಂಶ ಈ ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಹಾಗಾಗಿ ಮಿತ ಪ್ರಮಾಣದ ಕಾಫಿ ಸೇವನೆ ದೇಹಕ್ಕೆ ಬಹಳ ಒಳ್ಳೆಯದು ಅತಿಯಾಗಿ ಸೇವಿಸಿದರೆ ಅದರಿಂದ ಹಲವಾರು ಅಡ್ಡಪರಿಣಾಮಗಳು ನಮಗೆ ಬರಬಹುದು ಹಾಗಾಗಿ ದಿನಕ್ಕೆ 2- 3 ಕಪ್ ಕಾಫಿ ಕುಡಿದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.
– ತನ್ವಿ. ಬಿ