ಹಾಸನ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (HIMS)ಗೆ ಪ್ರತಿಷ್ಠಿತ ನ್ಯಾಷನಲ್ ಅಕ್ರೆಡಿಟೇಷನ್ ಬೋರ್ಡ್ ಆಫ್ ಹಾಸ್ಪಿಟಲ್ ಆ್ಯಂಡ್ ಹೆಲ್ತ್ ಕೇರ್ (NABH) ಮಾನ್ಯತೆ ಲಭಿಸಿ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದೆ.
ನಿಮಗೆ ಗೊತ್ತೇ ?
ರಾಜ್ಯಮಟ್ಟದಲ್ಲಿ NABH ಪ್ರವೇಶ ಮಾನ್ಯತೆ ಪಡೆದ ಏಕೈಕ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಮ್ಮ ಹಾಸನದ ಹಿಮ್ಸ್ ಆಗಿದೆ.
• NABH ಅಂದರೆ ಒಂದು ದೇಶದ ಆರೋಗ್ಯ ಸಂಸ್ಥೆಗಳನ್ನೆಲ್ಲ ಪರಿಶೀಲಿಸಿ ಮೌಲ್ಯ ಮಾಪನ ಮಾಡಿ ಮಾನ್ಯತೆ ನೀಡುವ ಪ್ರಮುಖ ಸಂಸ್ಥೆಯಾಗಿರುತ್ತದೆ
ಅವರ ಅಂಕ ಪಟ್ಟಿ ಇಂತಿರುತ್ತದೆ :
• ರೋಗಿಗಳಿಗೆ ನೀಡುವ ಚಿಕಿತ್ಸೆಯ ಗುಣಮಟ್ಟ,
•ಸುರಕ್ಷತಾ ಕ್ರಮ,
•ಆಸ್ಪತ್ರೆ ಕಾರ್ಯವೈಖರಿ,
•ಸೇವೆ, ಸೌಲಭ್ಯ,
•ದರಗಳ ಸಂಫೂರ್ಣ ಪಾರದರ್ಶಕತೆ,
• ಸಿಬ್ಬಂದಿ ವರ್ಗದವರಿಗೆ ಭದ್ರತೆ ಹಾಗೂ ರೋಗಿಗಳಿಗೆ ಶುಭ್ರ ವಾತಾವರಣ
ಈ ಪ್ರಶಸ್ತಿಯಿಂದ ಆಸ್ಪತ್ರೆ ಸೇವೆಗಳಲ್ಲಿ ಜನ ಸಾಮಾನ್ಯರಲ್ಲಿರುವ ಭರವಸೆ ಮತ್ತು ನಂಬಿಕೆಗಳ ಮತ್ತಷ್ಟು ಹೆಚ್ಚಿಸುವುದು NABH ಧ್ಯೇಯ
ಮೌಲ್ಯ ಮಾಪನ ಹೇಗಿರತ್ತೆ ಗೊತ್ತಾ?
• ಆಸ್ಪತ್ರೆಗಳಲ್ಲಿ ದೊರೆಯುವ ಸೌಲಭ್ಯ, ಆರೋಗ್ಯ ಪರೀಕ್ಷೆಗಳು, ಚಿಕಿತ್ಸೆ ನೀಡುವಾಗ ಅನುಸರಿಸುವ ಸುರಕ್ಷತಾ ಕ್ರಮ, ತುರ್ತು ಚಿಕಿತ್ಸೆ, ICU ಕೇರ್‌ಗಳಲ್ಲಿ ತುರ್ತು ಪರಿಸ್ಥಿತಿ ಅಳವಡಿಕೆ, ಔಷಧ ವಿತರಣೆ, ಶೇಖರಣೆ, ಆಂಬುಲೆನ್ಸ್ ವ್ಯವಸ್ಥೆ, ರೋಗಿಗಳಿಗೆ ರೋಗದ ಅರಿವು ಮೂಡಿಸುವ ಕ್ರಮಗಳು, ಸೋಂಕು ತಡೆಗಟ್ಟಲು ಸೂಕ್ತ ಕ್ರಮ ಅನುಸರಿಸುತ್ತಿರುವ ಕ್ರಮ ಹೀಗೆ 45 ಮಾನದಂಡಗಳು ಮತ್ತು 165 ವಿಷಯಗಳ ಪರಿಶೀಲಿಸಲನೆ ನಂತರ ಅಂಕ ನೀಡಿರುವುದು ದೇಶದ ಹಲವು ಆಸ್ಪತ್ರೆಗಳ ನಡುವೆ 95% ಅಂಕ ನಮ್ಮ ಹಿಮ್ಸ್ ಗೆ ದೊರೆತಿದೆ.
-ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ನರ್ಸಿಂಗ್ ಅಧಿಕಾರಿ ವೆಲೊರಿಯನ್ ಪಿಂಟೋ,ಆಡಳಿತಾಧಿಕಾರಿ ಗಿರಿನಂದನ್, ಮೆಡಿಸಿನ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ವೇಣುಗೋಪಾಲ್, ಸಮುದಾಯ ವೈದ್ಯಕೀಯ ಶಾಸ್ತ್ರ ವಿಭಾಗ ಸಹ ಪ್ರಾಧ್ಯಾಪಾಕರಾದ ಡಾ.ಸುಮನಾ ಪ್ರಸಾದ್, ಡಾ.ಪವಿತ್ರಾ ಅವರು ಮತ್ತು ಹಿಮ್ಸ್ ಸಿಬ್ಬಂದಿಗಳಿಗೆ ಧನ್ಯವಾದಗಳು