ಸಾರ್ವಜನಿಕರಿಗೆ ಕಿರಿಕಿರಿ ಯಾಗಿದ್ದ ಹೊಳೆನರಸೀಪುರದ ಮಾನಸಿಕ ಅಸ್ವಸ್ಥೆ ನಿಮಾನ್ಸ್ ಗೆ

0

*ಆರೋಗ್ಯ ಇಲಾಖೆಯ ವತಿಯಿಂದ ಕಾರ್ಯಾಚರಣೆ,*
*ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆ ಲಕ್ಷ್ಮಮ್ಮ ಬೆಂಗಳೂರಿನ ನಿಮಾನ್ಸ್ ಗೆ ದಾಖಲು.*

ಹೊಳೆನರಸೀಪುರ: ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಮತ್ತು ರಸ್ತೆಗಳಲ್ಲಿ ಮಾನಸಿಕ ಅಸ್ವಸ್ಥ ಮಹಿಳೆ ಲಕ್ಷ್ಮಮ್ಮ ಸಂಚರಿಸಿ ಆಗಾಗ ಸಾರ್ವಜನಿಕರ ಮೇಲೆ ಕಲ್ಲು ತೂರಾಟ ಮಾಡುವುದು ಮತ್ತು ಕೋಲಿನಿಂದ ಹೊಡೆಯುವ ಮೂಲಕ ಆತಂಕವನ್ನು ಉಂಟುಮಾಡಿದ್ದರು. ಇದರಿಂದಾಗಿ ಸಾರ್ವಜನಿಕರಿಂದ ತೀವ್ರವಾಗಿ ಆಕ್ಷೇಪಣೆಗಳು ಕಂಡು ಬಂದಿತ್ತು, ಮತ್ತು ಕೆಲವರು ಲಕ್ಷ್ಮಮ್ಮ ನವರು ದ್ವಿಚಕ್ರ ವಾಹನ ಸವಾರರ ಮೇಲೆ ಕಲ್ಲು ತೂರುವ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣ ಮತ್ತು ವಾಟ್ಸಾಪ್ ನಲ್ಲಿ ಹರಿಬಿಟ್ಟಿದ್ದು ತೀವ್ರವಾದ ಸಂಚಲನವನ್ನು ಉಂಟು ಮಾಡಿತ್ತು.

ಇಂದು ತಾಲ್ಲೂಕು ಆಡಳಿತ,ಪುರಸಭೆ ಮತ್ತು ಆರೋಗ್ಯ ಇಲಾಖೆಯ ವತಿಯಿಂದ ಕಾರ್ಯಾಚರಣೆ ನಡೆಸಿ,
ಮಾನಸಿಕ ಅಸ್ವಸ್ಥೆಯಾದ ಲಕ್ಷ್ಮಮ್ಮ ನವರನ್ನು ಆಂಬುಲೆನ್ಸ್ ನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಗೆ ದಾಖಲು ಮಾಡಲು ಹೊಳೆನರಸೀಪುರದ
ಸಾರ್ವಜನಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕರ ಸೂಚನೆಯ ಮೇರೆಗೆ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಕ ಸ್ವಾಮಿ.ಜೆ.ಟಿ. ಗಣಕ ಯಂತ್ರ ಸಹಾಯಕ ಸುನಿಲ್, ಮತ್ತು ವಾಹನ ಚಾಲಕ ಪ್ರದೀಪ್ ಮತ್ತು ಆರಕ್ಷಕ ಇಲಾಖೆಯ ಮತ್ತು ಗೃಹ ರಕ್ಷಕ ಇಲಾಖೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.

*ವರದಿ:  ವಿಶ್ವಕವಿ ಹೊಳೆನರಸೀಪುರ*

LEAVE A REPLY

Please enter your comment!
Please enter your name here