ಹೊಳೆನರಸೀಪುರದಲ್ಲಿ SBI ವತಿಯಿಂದ ಗೃಹ ಸಾಲ ಮೇಳ

0

ಹೊಳೇನರಸೀಪುರದ ಭಾರತೀಯ ಸ್ಟೇಟ್ ಬ್ಯಾಂಕಿನ ಮೂರು ಶಾಖೆಯ ವತಿಯಿಂದ ದಿನಾಂಕ 18.09.2021ರಂದು ಹೊಳೇನರಸೀಪುರದ ಪುರಸಭಾ ಕಾರ್ಯಾಲಯದ ಆವರಣದಲ್ಲಿ ಗೃಹ ಸಾಲ ಮೇಳವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಸ್ಟೇಟ್ ಬ್ಯಾಂಕಿನ ಹಾಸನ RBOನ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ. ಎಂ ಶ್ರೀಪತಿ ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹೊಳೇನರಸೀಪುರದ ಪುರಸಭೆಯ ಮುಖ್ಯ ಅಧಿಕಾರಿಯಾದ ಶ್ರೀಮತಿ ಶಾಂತಲಾ ರವರು ಆಗಮಿಸಿದ್ದರು.

ಎಸ್.ಬಿ.ಐ ಹಾಸನ ಆರ್.ಬಿ.ಓ ಮುಖ್ಯ ವ್ಯವಸ್ಥಾಪಕರು (ಬ್ಯುಸಿನೆಸ್ ಅಂಡ್ ಸೇಲ್ಸ್) ಶ್ರೀ. ಮಂಜುನಾಥ ಎ ಎನ್, ವ್ಯವಸ್ಥಾಪಕರು (ಎಂ.ಪಿ.ಎಸ್.ಟಿ) ಶ್ರೀ. ಪಂಕಜ್ ಕುಮಾರ, ಅರಕಲಗೂಡು ರಸ್ತೆ, ಹೊಳೇನರಸೀಪುರದ ಶಾಖೆಯ ವ್ಯವಸ್ಥಾಪಕರಾದ ಶ್ರೀ. ಸೂರಜ್ ಸಿಂಗ್, ಹೊಳೇನರಸೀಪುರದ ಶಾಖೆಯ ವ್ಯವಸ್ಥಾಪಕರಾದ ಶ್ರೀ. ದಿಲೀಪ್, ಕೆ.ಹೆಚ್.ಬಿ. ಕಾಲೋನಿ, ಹೊಳೇನರಸೀಪುರದ ಶಾಖೆಯ ವ್ಯವಸ್ಥಾಪಕರಾದ ಕುಮಾರಿ. ನಿವೇದಿತಾ, ಹೊಳೇನರಸೀಪುರದ ಪುರಸಭೆಯ ಅಧಿಕಾರಿಗಳಾದ

ಶ್ರೀ. ರಮೇಶ್ ರವರು ಹಾಗೂ ವಕೀಲರಾದ ಶ್ರೀ. ಆರ್.ಡಿ. ರವೀಶ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here