ಹಲವು ಮುಸ್ಲಿಂ ಸಂಘಟನೆಗಳಿಂದ ಮುಂಜಾನೆ ಹುಣಿಸಿನ ಕೆರೆಯ ಬಳಿ ಸ್ವಚ್ಛತಾ ಅಭಿಯಾನ

0

ಪ್ರವಾದಿ ಮುಹಮ್ಮದ್ (ಸ) ಮಾನವತೆಯ ಮಾರ್ಗದರ್ಶಕ ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ನಡೆಯುತ್ತಿರುವ ಅಭಿಯಾನದ ಅಂಗವಾಗಿ

ಹಾಸನದಲ್ಲಿ ಇಂದು ಸ್ವಚ್ಛತಾ ಅಭಿಯಾನ ನಡೆಸಿದರು. ಹಾಸನದ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಸಮಾಜ ಸೇವಾ ಘಟಕ,

ಸಾಲಿಡಾರಿಟಿ ಯೂಥ್ ಮೂಮೆಂಟ್ ಮತ್ತು ಹ್ಯುಮ್ಯಾನಿಟೇರಿಯನ್ ರೀಲಿಫ್ ಸೊಸೈಟಿ ಯ ಸುಮಾರು 30 ಕಾರ್ಯಕರ್ತರು

ನಗರಸಭಾ ಕಾರ್ಯಕರ್ತರ ಸಹಕಾರದಿಂದ ಇಂದು ಮುಂಜಾನೆ ಹುಣಿಸಿನ ಕೆರೆಯ ಬಳಿ ಸ್ವಚ್ಛತಾ ಅಭಿಯಾನವನ್ನು ನಡೆಸಿದರು.

ಅಭಿಯಾನದ ಅಂಗವಾಗಿ ನಗರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಗಿಡ ನೆಡುವ ಕಾರ್ಯಕ್ರಮವೂ ನಡೆಯಲಿದೆ.

LEAVE A REPLY

Please enter your comment!
Please enter your name here