ಕಾರ್ಗಿಲ್ ಯುದ್ಧದಲ್ಲಿ ತಮ್ಮ ಪರಾಕ್ರಮ ತೋರಿ ಮೆಡಲ್ ಗೆದ್ದಿದ್ದ ಜಿಲ್ಲೆಯ ಯೋಧ ವರದಕೃಷ್ಣ ಇನ್ನಿಲ್ಲ

0

ನಮ್ಮ ಅರಸೀಕೆರೆ ತಾಲ್ಲೂಕಿನ ಮಾಜಿ ಸೈನಿಕರ ಸಂಘದ ಅಧ್ಯಕ್ಷರು ಆದ ವರದಕೃಷ್ಣ (83)ಅವರು ಇಂದು ನಮ್ಮನ್ನು ಅಗಲಿದ್ದಾರೆ ಕೆಲ ದಿನಗಳಿಂದ ಆರೋಗ್ಯ ಸರಿಯಿಲ್ಲದೆ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಕಾರಿಯಾಗಲಿಲ್ಲ


         ಶ್ರೀಯುತರು ಕಾರ್ಗಿಲ್ ಯುದ್ಧದಲ್ಲಿ ತಮ್ಮ ಪರಾಕ್ರಮವನ್ನು ತೋರಿ ಮೆಡಲ್ಗಳನ್ನು ಇವರು ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.  ಮೃತರು ಪತ್ನಿ ಹಾಗೂ ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ. ಈ ಮಕ್ಕಳಲ್ಲಿ ಇಬ್ಬರು ಮಾಜಿ ಸೈನಿಕರು, ಎಂಬುದು ಹೆಮ್ಮೆಯ ವಿಷಯ


         ಮೃತರ ಅಗಲಿಕೆಗೆ  ತಾಲೂಕು ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಸದಸ್ಯರು ಮತ್ತು ಜನ ಪ್ರತಿನಿಧಿಗಳು ಶಿಕ್ಷಕ ಸಮೂಹ ಸಂತಾಪ ವ್ಯಕ್ತಪಡಿಸಿದೆ


          ಮೃತರ ಅಂತ್ಯ ಸಂಸ್ಕಾರ ತಾಲೂಕಿನ ಹೊಸ ಕಲ್ನಾಯಕನಹಳ್ಳಿ ಸಮೀಪ ಇರುವ ಮೃತರ ತೋಟದಲ್ಲಿ ಇಂದು ಹನ್ನೆರಡು ಗಂಟೆಗೆ ನೆರವೇರಿದೆ

ಮಾಜಿ ಯೋಧರಾದ ವರದ ಕೃಷ್ಣ ಅವರ ನಿಧನಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡರು ಮತ್ತು ತಾಲ್ಲೂಕು ಆಡಳಿತ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಗೌರವ ಶ್ರದ್ಧಾಂಜಲಿ ನಮನ ಸಲ್ಲಿಸಿದರು .

LEAVE A REPLY

Please enter your comment!
Please enter your name here