ಕೋವಿಡ್ ತೀವ್ರತೆಯ ಬಗ್ಗೆ ಅರಿವಿದ್ದರು KPSC ವತಿಯಿಂದ ಹಾಸನದ ಉದ್ಯೋಗಾಕಾಂಕ್ಷಿ(JE,AE) ಪರೀಕ್ಷಾ ಅಭ್ಯರ್ಥಿಗಳಿಗೆ ದೂರದ ಕಲಬುರಗಿ ಕೇಂದ್ರಕ್ಕೆ ನೀಡಿರೋದು ! ಸರಿಯೇ??
KPSC ವತಿಯಿಂದ ಹಾಸನದ AE ಮತ್ತು JE ಉದ್ಯೋಗಾಕಾಂಕ್ಷಿ ಪರೀಕ್ಷಾ ಅಭ್ಯರ್ಥಿಗಳಿಗೆ ಇದೇ ಡಿ.13 ಮತ್ತು 14 ರಂದು ನಡೆಯುವ ಪರೀಕ್ಷೆಗಳಿಗೆ ದೂರದ (600km) ಕಲಬುರ್ಗಿ ಜಿಲ್ಲೆಗೆ (ಸದ್ಯದ ಕೋವಿಡ್ ತೀವ್ರತೆ ಹೆಚ್ಚಿರುವ ಒಂದು ಜಿಲ್ಲೆಗೆ) ವರ್ಗಾಯಿಸಿರೋದು ಸರ್ಕಾರದ ತೀರ್ಮಾನಕ್ಕೆ ವಿದ್ಯಾರ್ಥಿಗಳ ತೀವ್ರ ಅಸಮಾಧಾನ !!
ಈಗಾಗಲೇ ಪರೀಕ್ಷೆ ಬರೆಯಲಿಚ್ಚಿಸಿದ್ದ ನೂರಾರು ಅಭ್ಯರ್ಥಿಗಳಿಗೆ ನಿಮಗೆ ಅನುಕೂಲವಾಗುವ ಪರೀಕ್ಷಾ ಕೇಂದ್ರ ನಮೂದು ಮಾಡಿ ಎಂದು ಈ ಮುನ್ನವೇ ತಿಳಿಸಿತ್ತಾದರೂ , ಆಡಳಿತ ಮಂಡಳಿ ತಮಗೆ ಅನುಕೂಲ ಎನಿಸುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಿರಿ ಎನ್ನುತ್ತಿರೋದು , ಈ ಕೋವಿಡ್ ತೀವ್ರತೆಯ ಕಾವು ಏರುತ್ತಿರುವಾಗಿ ದೂರ ದೂರ ಪಯಣ ಬೆಳೆಸೋದು ಎಷ್ಟು ಸಮಂಜಸ ಎಂದು ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ ., ಸರ್ಕಾರ , ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿ . ನೂರಾರು ಪರೀಕ್ಷಾ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸ್ಥಳೀಯ ಕೇಂದ್ರದಲ್ಲಿ ಕೋವಿಡ್ ನಿಯಮಾನುಸಾರ CCTV ಒಳಗೊಂಡು ಪರೀಕ್ಷೆ ಬರೆಸುವ ವ್ಯವಸ್ಥೆ ಮಾಡಿಕೊಡಿ ಎಂದು ಈ ಮೂಲಕ ಮನವಿ ಮಾಡುತ್ತಿದ್ದಾರೆ .