ಹೊಳೇನರಸೀಪುರದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ !

0

ಹಾಸನ ಜ.19 (ಹಾಸನ್_ನ್ಯೂಸ್!,  ಹೊಳೆನರಸೀಪುರ ತಾಲ್ಲೂಕು ವ್ಯಾಪ್ತಿಯಲ್ಲಿ  ಖಾಲಿ ಇರುವ  ಅಂಗನವಾಡಿ ಕೇಂದ್ರಗಳಿಗೆ ಖಾಲಿಯಿರುವ ಹುದ್ದೆಗಳ ಭರ್ತಿಗಾಗಿ  ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಆಯ್ಕೆ ಮಾಡಲು ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
     ಸರ್ಕಾರದ ಆದೇಶದಂತೆ ಆಯ್ಕೆ ಸಮಿತಿ ಹಾಗೂ ಆಯ್ಕೆ ನಿಯಮಗಳನ್ನು (ಮಾನದಂಡ) ನೀಡಲಾಗಿದ್ದು ಈ ಮಾರ್ಗಸೂಚಿಗಳ ಅನ್ವಯ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಹೊಸಲಕ್ಕೇಗೌಡನ ಕೊಪ್ಪಲು(ಮಿನಿ), ಮಾವಿನಕೆರೆ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗೆ ಲಕ್ಕೂರು(ಪ.ಜಾ), ಪಡುವಲಹಿಪ್ಪೆ ದೊಡ್ಡಹಳ್ಳಿ, ಜಾಕನಹಳ್ಳಿ, ಮೋಟನಾಯಕನಹಳ್ಳಿ, ದೊಡ್ಡಕುಂಚೆ-ಎ, ಗುಳ್ಳದಪುರ,ನ್ಯಾಮನಹಳ್ಳಿ, ಲಕ್ಕೂರು(ಮೀಸಲಾತಿ), ದೊಡ್ಡಹಳ್ಳಿ, ಉಣ್ಣೇನಹಳ್ಳಿ ಅಂಗನವಾಡಿ ಸಹಾಯಕಿರ ಹುದ್ದೆಗೆ ಆನ್‍ಲೈನ್ ಮೂಲಕ ಅರ್ಜಿ ಅಹ್ವಾನಿಸಿದೆ.
      ಅರ್ಹ ಅಭ್ಯರ್ಥಿಗಳು ಅರ್ಜಿಸಲ್ಲಿಸಲು ಕಡೆಯ ಜ.30 ರ ಸಂ 5.30  ರೊಳಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ವೆಬ್ ಸೈಟ್ ನಂ. www.anganawadirecruit.kar.nic.in ನಲ್ಲಿ ಅರ್ಜಿ ಸಲ್ಲಿಸಬಹುದು -ಹೊಳೆನರಸೀನಪುರ ಶಿಶು ಅಭಿವೃದ್ಧಿ

LEAVE A REPLY

Please enter your comment!
Please enter your name here