ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಸನ, ಯುವ ಸ್ಪಂದನ ಕೇಂದ್ರದಲ್ಲಿ ಗೌರವ ಧನದ ಆಧಾರದ ಮೇರೆಗೆ ಯುವ ಪರಿವರ್ತಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ಯುವ ನೀತಿ-2012ರ ಅನ್ವಯ ಕರ್ನಾಟಕ ಸರ್ಕಾರ ಮತ್ತು ಜನ ಆರೋಗ್ಯ ಕೇಂದ್ರ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಯುವಸ್ಪಂದನ ಕಾರ್ಯಕ್ರಮವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿದೆ. ಈ ಯೋಜನೆ ಮೂಲಕ ಯುವಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆಗಳನ್ನು ಒದಗಿಸಲು ಯುವ ಪರಿವರ್ತಕರ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಯುವ ಪರಿವರ್ತಕರ ಹುದ್ದೆ ಖಾಲಿ ಇದ್ದು ಯುವಕ ಮತ್ತು ಯುವತಿಯರು ಯಾವುದೇ ಪದವಿ ಹಾಗು ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ 21 ರಿಂದ 35 ವಯಸ್ಸಿನ ಒಳಗಿರಬೇಕು. ಕನ್ನಡ ಸ್ಪಷ್ಟವಾಗಿ ಮಾತನಾಡಲು, ಸಂವಹನ ಕಲೆ ಕೌಶಲ್ಯ ಹೊಂದಿರಬೇಕು. ಹಾಗು ಸಮುದಾಯದಲ್ಲಿ ಕೆಲಸ ಮಾಡಿದವರಿಗೆ ಆದ್ಯತೆ ಇದೆ.
ತಮ್ಮ ಮೂಲ ದಾಖಲಾತಿಗಳನ್ನು ಸೆ.28ರ ಸಾಯಂಕಾಲ 5 ಗಂಟೆ ಒಳಗಾಗಿ ಖುದ್ದಾಗಿ ಹಾಸನ ಕ್ರೀಡಾಂಗಣದಲ್ಲಿರುವ ಯುವಸ್ಪಂದನ ಕೇಂದ್ರಕ್ಕೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಯುವಸ್ಪಂದನ ಕೇಂದ್ರ ಹಾಸನ ದೂ.ಸಂ:08172245056 . 6363178374ಯನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.