ವಿದ್ಯಾರ್ಥಿಗಳು ತಮ್ಮದೇ ಹೆಸರು ಹಾಕಿಕೊಂಡು ಓದುವಂತೆ ಬರೆದಿರುವಂತೆ ಇರುವ ಈ ಪತ್ರ ವೈರಲ್

0

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವಂತ ಕೆ.ಪಿ ನಾರಾಯಣ ( Beluru BEO K P Narayana ) ಅವರು, ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಏಳಿಗೆ ಬಗ್ಗೆ ತೋರಿರುವಂತ ಆಸಕ್ತಿ ಎಲ್ಲರೂ ಮೆಚ್ಚುವಂತಿದೆ. ಅಲ್ಲದೇ ಪರೀಕ್ಷೆಗೆ ಹಾಜರಾಗುವಂತ ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸ ತುಂಬಿದಂತೆ ಇದೆ. ತಮ್ಮ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮದೇ ಹೆಸರು ಹಾಕಿಕೊಂಡು ಓದುವಂತೆ ಬರೆದಿರುವಂತೆ ಇರುವ ಪತ್ರ ಮಾತ್ರ ವಿಶೇಷ ,

ನಿಜಕ್ಕೂ ಮಕ್ಕಳ ನಾಡಿ ಮಿಡಿತ, ಪೋಷಕರಿಗೆ ಜವಾಬ್ದಾರಿಯನ್ನು ಹೆಚ್ಚಿಸೋದರಲ್ಲ ಕಿಂಚಿತ್ತು ಅನುಮಾನವಿಲ್ಲ . ,ಅವರು ಮಕ್ಕಳಿಗಾಗಿ ಬರೆದಂತ ಪತ್ರದಲ್ಲಿ ಪರೀಕ್ಷಾ ಸಿದ್ಧತೆ, ಏಕಾಗ್ರತೆ, ಮುಂಜಾಗ್ರತಾ ಕ್ರಮಗಳು, ಪರೀಕ್ಷಾ ಕೊಠಡಿಯಲ್ಲಿ ಮಕ್ಕಳು ಹೇಗಿರಬೇಕು. ಪರೀಕ್ಷೆ ಆರಂಭದ ನಂತರ ಪ್ರಶ್ನೆ ಪತ್ರಿಕೆ ಪಡೆದುಕೊಂಡು ಹೇಗೆ ಓದಿ ಪರೀಕ್ಷೆ ಬರೆಯಬೇಕು . ಅದಕ್ಕೆ ಯಾವ ರೀತಿಯಲಿ ಅರ್ಥೈಸಿಕೊಂಡು ಉತ್ತರಿಸಬೇಕು. ಪ್ರತಿ ವಿಷಯದ ಪರೀಕ್ಷೆಯ ನಂತರ ಮುಂದಿನ ವಿಷಯದ ಪರೀಕ್ಷೆಗೆ ತಯಾರಿ ಹೇಗೆ ನಡೆಸಬೇಕು ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಮಕ್ಕಳಿಗೆ ಅರ್ಥೈಸಿ ಹೇಳಿದ್ದಾರೆ ನೋಡಲು ಚೆಂದ . , ಅಂದಹಾಗೆ

ಬೇಲೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಇಒ ಕೆ.ಪಿ ನಾರಾಯಣ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ಧೈರ್ಯ, ಸ್ಪೂರ್ತಿ ತುಂಬಿ, ಪರೀಕ್ಷೆ ಹೇಗೆ ಬರೆಯಬೇಕು ಎನ್ನುವ ಬಗ್ಗೆ ಬರೆದಿರುವಂತಹ ಪತ್ರ ಇಂತಿದೆ ನೋಡಿ , ಶೇರ್ ಮಾಡಿ

ಈಗಾಗಲೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭಗೊಂಡು ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ , 5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆ ಕೂಡ ಆರಂಭಗೊಳ್ಳಲಿದೆ. , ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗಿರೋದು ಧೈರ್ಯ, ಸ್ಪೂರ್ತಿ ತುಂಬುವ ಮಾತು. ಈ ಕೆಲಸವನ್ನು ರಾಜ್ಯದಲ್ಲೇ ಅಪರೂಪದಲ್ಲಿ ಅಪರೂಪ ಎಂಬಂತೆ ಬಿಇಒ ಒಬ್ಬರು ಮಾಡಿದ್ದು, ವಿದ್ಯಾರ್ಥಿಗಳು, ಪೋಷಕರಿಗಾಗಿ ಬರೆದಂತ ಪತ್ರ ವೈರಲ್ ಆಗಿದೆ.

LEAVE A REPLY

Please enter your comment!
Please enter your name here