ಸಾರ್ವಜನಿಕ ಸಾರಿಗೆ ಇದು ಸರ್ವಜನರ ಅನುಕೂಲಕ್ಕಾಗಿ ಇರುವಂತಹ ಸಾರಿಗೆ ವ್ಯವಸ್ಥೆಯಾಗಿದ್ದು,
ಇದು ಇತ್ತೀಚೆಗೆ ನಡೆದ ಘಟನೆಯಾಗಿದ್ದು, ನಮಗೆ ನೊಂದಂತಹ ವ್ಯಕ್ತಿ ತಿಳಿಸಿದ ಕಾರಣ ಈ ವಿಚಾರವು ಇನ್ನು ಮುಂದುವರೆಯಬಾರದು ಹಾಗೆಯೇ ಇನ್ನೊಬ್ಬ ವ್ಯಕ್ತಿಯು ಈ ಸನ್ನಿವೇಶವನ್ನು ಎದುರಿಸಬಾರೆದೆಂಬ ಉದ್ದೇಶದಿಂದ ಈ ಪೋಸ್ಟ್ ಅನ್ನು ಹಾಕುತ್ತಿದ್ದೇವೆ,
ಕೆ.ಎ.42 ಎಫ್ 2049 ಬಸ್ ನ ಡ್ರೈವರ್ ಮತ್ತು ಕಂಡಕ್ಟರ್ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಾಗ ಎರಡೂ ಡೋರ್ (ಡ್ರೈವರ್ ಇನ್ನೊಂದು ಬದಿ ಮತ್ತು ಬಸ್ ನ ಮಧ್ಯದಲ್ಲಿನ ಡೋರ್) ಗಳನ್ನು ತೆರೆಯುತ್ತಾರೆ ಅದೇ ಬಸ್ ಪ್ರಯಾಣಿಕರಿಂದ ಭರ್ತಿಯಾದಾಗ ಡ್ರೈವರ್ ಬದಿಯ ಡೋರ್ ಅನ್ನು ಮುಚ್ಚಿದರೆ ಮತ್ತೆ ಇಳಿಯಲು ತೆರೆಯಿತ್ತಿಲ್ಲ, ಮಹಿಳೆಯರು ಬೇಡಿಕೊಂಡರೂ
ಡೋರ್ ಅನ್ನು ತೆರೆಯದ ಇವರಿಬ್ಬರ ನಡವಳಿಕೆಗೆ ಇದು ಸತತ 2ನೇ ದಿನ ಆಗಿದ್ದು ಅದೇ ನಡವಳಿಕೆ ಪುರಾವರ್ತಿ ಆದ ಕಾರಣಕ್ಕೆ ಎಸ್ ಆರ್ ಟಿ ಸಿ ಗ್ರಾಹಕ ಸೇವಾ ವಿಭಾಗಕ್ಕೂ ದೂರನ್ನು ನೀಡಿದ್ದು, ಸಾರ್ವಜನಿಕರ ಮಾಹಿತಿಗಾಗಿ ಅಂತೆಯೇ ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಕ್ರಮವನ್ನು ಕೈಗೊಳ್ಳಲಿ ಎಂಬ ಉದ್ದೇಶದಿಂದ ಈ ಮಾಹಿತಿಯನ್ನು ಹಾಕುತ್ತಿದ್ದೇವೆ,
ಪ್ರಯಾಣಿಸಿದ ಟಿಕೆಟ್ ಅನ್ನು ಮಾಹಿತಿಗಾಗಿ ಹಾಕಲಾಗಿದೆ.