ನಮ್ಮ ಜೀವನವೇ ಮತ್ತೊಬ್ಬರಿಗೆ ಪಾಠವಾಗಲಿ

0

ಸಿಟಿಯಲ್ಲಿ ಭೀಮಾನಮವಾಸೆಗಿಂತ ಕಿಟ್ಟಿ ಪಾರ್ಟಿ ಹೆಚ್ಚು : ವಿನಯ್ ಗುರೂಜಿ

ಹಾಸನ: ನಮ್ಮ ಜೀವನವನ್ನು ಒಂದು ಅರ್ಥವಾಗಿ ಬದುಕುವ ಮೂಲಕ ಮತ್ತೊಬ್ಬರಿಗೆ ಒಳ್ಳೆಯ ಪಾಠವಾಗಬೇಕೆ ಹೊರತು ವರ್ಷಕ್ಕೊಮ್ಮೆ ಬರುವ ಭೀಮನಮವಾಸೆಗಿಂತ ಸಿಟಿಯಲ್ಲಿ ಕಿಟ್ಟಿ ಪಾರ್ಟಿ ಆಗಬಾರದು ಎಂದು ಶ್ರೀ ವಿನಯ್ ಗುರೂಜಿ ತಿಳಿಸಿದರು. ನಗರದ ರಿಂಗ್ ರಸ್ತೆ, ತನ್ವೀತ್ರಿಶಾ ಕಲ್ಯಾಣ ಮಂಟಪದ ಬಳಿ ಇರುವ ಕರಿಬೀರೇಶ್ವರ ಟೈಲ್ಸ್ ಮತ್ತು ಹಾರ್ಡ್‌ವೇರ‍್ಸ್ ಶಾಪ್ ಬಳಿ ಶ್ರೀ ವಿನಯ್ ಗುರೂಜಿಯವರ ಹುಟ್ಟುಹಬ್ಬ ಆಚರಣಾ ಸಮಿತಿಯಿಂದ ಭಾನುವಾರದಂದು ಹಮ್ಮಿಕೊಳ್ಳಲಾಗಿದ್ದ ಅವರ ಜನ್ಮದಿನ ಹಾಗೂ ಉಚಿತ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾವನೆಯಿಂದ ಬಂದ ರಥವೇ ಭಾರತ. ದೇವಸ್ಥಾನದಲ್ಲಿ ಭಯದಿಂದ ನಮಸ್ಕಾರ ಮಾಡುವುದು ತಪ್ಪು.

ದೇವರನ್ನು ನಂಬಬಾರದು, ನಂಬಿದರೇ ಬಿಡಬಾರದು. ಆಧ್ಯಾತ್ಮ ಎಂದರೇ ಶಕ್ತಿ. ನಿಮ್ಮ ದೇಹದಲ್ಲೂ ವಿದ್ಯುತ್ ಇದೆ. ಪ್ರತಿ ದೇಹದಲ್ಲೂ ಚೈತನ್ಯ ಇದೆ. ಪ್ರೀತಿ ಎಂದರೇ ರೂಪ ಇಲ್ಲದ ಭಾವನೆ. ಇದೆ ಶ್ರೇಷ್ಠ ಅದು ಕನಿಷ್ಠ ಎಂಬುದು ಭ್ರಮೆಯಾಗಿದ್ದು, ಸೃಷ್ಟಿ ಸರಿಯಾಗಿದೆ, ದೃಷ್ಟಿ ಸರಿಯಾಗಿರಬೇಕು ಎಂದರು. ಅರ್ಧನಾರೇಶ್ವರಿ ಎಂದರೇ ಅವರ ಓಟಿಗೆ ಬೆಲೆ ಇದೆ ಆದರೇ ಅವರಿಗೆ ಬೆಲೆ ಇಲ್ಲವೇ? ಶ್ರದ್ದೆ ಇಲ್ಲದ ಮೇಲೆ ಅದು ಭಕ್ತಿ ಕೇಂದ್ರ ಆಗುವುದಿಲ್ಲ. ಹಾಸನಂಬೆ ದೇವಿ ಎಂದರೇ ಇಲ್ಲಿ ದೇವಿ ಕುಳಿತುಕೊಂಡ ಜಾಗ, ನಾನು ಕೂಡ ಬಂದು ಹೋಗುತ್ತಿದ್ದೇನೆ.

ಹಾಸನ ಎಂದು ಮುದ್ದೆ ಹೆಚ್ಚು ಸೇವನೆ ಮಾಡುತ್ತಾರೆ. ರಾಗಿ ತಿಂದವರಿಗೆಲ್ಲಾ ರೋಗ ಇಲ್ಲ. ಗಟ್ಟಿ ಜನ. ರಾಗಿ ಸೇವಿಸಿದರೇ ಹೆಚ್ಚು ಆರೋಗ್ಯವಾಗಿರುತ್ತದೆ. ಇಲ್ಲಿ ಒಳಗೊಂದು, ಹೊರಗೊಂದು ಇಲ್ಲ ಅಲ್ಲೆ ಡ್ರಾ ಮಾಡುತ್ತಾರೆ. ಇಲ್ಲಿನ ಮಣ್ಣಿನ ಗುಣವೇ ಆಗೆ ಎಂದು ಕಿವಿಮಾತು ಹೇಳಿದರು. ಈ ಭೂಮಿಯಲ್ಲಿ ನಾರಾಯಣ ಕಲ್ಲಾಗಿ ಇದ್ದಾರೆ ಎಂದರೇ ತಿರುಪತಿಯಲ್ಲಿ. ಯಾರಿಗೂ ಯಾರಿಂದ ನಿಮ್ಮ ನಡವಳಿಕೆಯಿಂದ ಕೆಟ್ಟದ ಹೊಡೆಯದಣ್ಣ, ಶ್ರಮಪಟ್ಟರೆ ಕೃಷಿ ಫೇಲಾಗುವುದಿಲ್ಲ. ಗ್ರಾಮಗಳಲ್ಲಿ ಆಚರಿಸುವ ಬೀಮಾನಮಾಸೆಗಿಂತ ಸಿಟಿಗಳಲ್ಲಿ ವ್ಯವಸ್ಥೆ ಎಂದರೇ ಕಿಟ್ಟಿ ಪಾರ್ಟಿ ಹೆಚ್ಚು ಕಾಣುತ್ತೇವೆ.

ಕೇಲ ಮಹಿಳೆಯರು ರೇಷ್ಮೆ ಸೀರೆ ಹುಟ್ಟರೆ ದೇವರು ಬಂದವರಾಗೆ ಆಡುತ್ತಾರೆ. ಹುಟ್ಟಿದಬ್ಬ ಆಚರಣೆಗಿಂತ ಅಂದು ಸೇವಾ ಕೆಲಸ ಮಾಡಿ, ದೇವರಿಗೆ ಶ್ರದ್ದೆ ಬಿಟ್ಟರೆ ತೋರಿಕೆಯಲ್ಲ. ನಮ್ಮ ಜೀವನವೇ ಮತ್ತೊಬ್ಬರಿಗೆ ಪಾಠ ಆಗಬೇಕು ಎಂದು ಸಲಹೆ ನೀಡಿದರು. ನಾವು ಪ್ರಜಾಪ್ರಭುತ್ವದಲ್ಲಿ ಇದ್ದು, ಆದರೂ ನಮ್ಮಳೊಗೆ ಒಂದು ಭಯ. ಅಧಿಕಾರ ಶಾಶ್ವತವಲ್ಲ. ನಾವು ಮಾಡುವ ಒಳ್ಳೆ ಕಾರ್ಯಗಳು ಶಾಶ್ವತ. ಲಕ್ಷ್ಮೀ ಎಂದರೇ ಗುರಿ ಮುಟ್ಟಿಸುವರು. ರಾಜಕೀಯವನ್ನು ತಪಸ್ಸು ಅಲ್ಲ. ಒಂದು ಬ್ಯೂಸ್ನೆಸ್ ಅಂದುಕೊಂಡಿದ್ದೇವೆ.

ಮೋರಿ ಬಿದ್ದರೇ ತೊಳೆದುಕೊಳ್ಳಬಹುದು ಆದರೇ ಹೃದಯದ ಕೊಳೆ ಬಂದರೇ ತೊಳೆಯುವುದು ಹೇಗೆ. ಯಾರೋ ಟಿವಿಲಿ ಜ್ಯೋತಿಷ್ಯ ಹೇಳಿದನ್ನು ಅನುಸರಿಸುತ್ತಿದ್ಧೇವೆ ಎಂದು ಬೇಸರವ್ಯಕ್ತಪಡಿಸಿದರು. ಎಂದು ತೋರಿಕೆಗೆ ಬದುಕು ಆಗಬಾರದು. ಜೀವನದ ಬದುಕು ಆಗಬೇಕು. ಆ ಬದುಕು ಮತ್ತೊಬ್ಬರಿಗೆ ಮಾರ್ಗದರ್ಶಕವಾದಗಲೇ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಖಾಯಿಲೆಯಿಂದ ಬಳಲುತ್ತಿದ್ದವರಿಗೆ ಆರ್ಥಿಕ ಸಹಾಯದ ಚೆಕ್ ವಿತರಿಸಿದರು.

ಅಂಗವಿಕಲರಿಗೆ ವೀಲ್ ಛೇರ್, ಸ್ಟಿಕ್ ನೀಡಿದರು. ೧೦೮ ಮಹಿಳೆಯರ ಪಾದಪೂಜೆ ಕೂಡ ಮಾಡಲಾಯಿತು. ಇದೆ ವೇಳೆ ಶ್ರೀ ಕರೀಬೀರೇಶ್ವರ ಟೈಲ್ಸ್ ಮತ್ತು ಹಾರ್ಡ್‌ವೇರ್ ಮಾಲೀಕರಾದ ಕುಮಾರ್, ಧರ್ಮಗೌಡ್ರು, ದೀಪು, ಹಾಸನ ಜಿಲ್ಲೆಯಿಂದ ವರ್ಗಾವಣೆಗೊಂಡ ವಾರ್ತಾಧಿಕಾರಿ ವಿಣಿದ್ ಚಂದ್ರ, ಮೋಹನ್, ಬಿಜೆಪಿ ಮುಖಂಡ ಶರತ್, ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು, ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ವಾಣಿಜ್ಯ ತೆರಿಗೆ ಉಪ ಆಯುಕ್ತ ಚನ್ನಕೇಶವ, ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ಎಸ್.ಎಸ್.ಎಂ. ಆಸ್ಪತ್ರೆ ಆಡಳಿತಾಧಿಕಾರಿ ಡಾ. ವಿನಯ್ ಕುಮಾರ್, ಜಯಂತ್, ಆನಂದ್, ಸುನೀಲ್, ನಾಗರಾಜು, ಭಾರತ್ ಸೇವಾದಳದ ವಿ.ಎಸ್. ರಾಣಿ, ರತೀ,ಹೋಯ್ಸಳ ರೋಟರಿ ಅಧ್ಯಕ್ಷ ಎಂ.ಡಿ. ಕುಮಾರ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here