ಹಾಸನ : ಥಾಯ್ಲೆಂಡ್ ದೇಶದ ಕಿಂಗ್ ಮಾಂಗ್ಕುಟ್ಸ್ತಾಂತ್ರಿಕ ವಿವಿಯಲ್ಲಿ ಹಿರಿಯ ಸಂಶೋಧನಾ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಚನ್ನರಾಯಪಟ್ಟಣ ಮೂಲದ ಡಾ.ಸಂಜಯ್ ಎಂ.ಆರ್. ಅಮೆರಿಕಾದ ಸ್ಪ್ಯಾನ್ ಫೋರ್ಡ್ವಿ ವಿ ಹಾಗೂ ನದರ್ಲ್ಯಾಂಡ್ ಮೂಲದ ಪ್ರಕಾಶನ ಸಂಸ್ಥೆ ಎಲ್ ವಿಯರ್ ಹೊರತರುವ ವಿಶ್ವದ ಅಗ್ರ 2 ಪ್ರತಿಶತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕಾಂಪೋಸಿಟ್ಸ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಡಾ. ಸಂಜಯ್ ಎಂ.ಆರ್. ಅವರ 350ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಅಂತಾರಾಷ್ಟ್ರೀಯ ಮನ್ನಣೆ ಪಡೆದ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅಂತಾರಾಷ್ಟ್ರೀಯ ಸಂಶೋಧನಾ ಸಮಾವೇಶಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಥಾಯ್ಲೆಂಡ್ ದೇಶದ ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಡಾ. ಸಂಜಯ್ಎಂ .ಆರ್. ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿ ರುವುದು ನಾಲ್ಕನೇ ಬಾರಿ.