ಹಾಸನ/ಬೆಂಗಳೂರು :
ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿದ್ದಾರೆಂಬ ದೂರಿನ ಮೇಲೆ ಸೋಮವಾರ ಬೆಳಿಗ್ಗೆಯೇ ಕಾರ್ಯಾಚರಣೆ ಆರಂಭಿಸಿದ ಲೋಕಾಯುಕ್ತ ಪೊಲೀಸರು, 17 ಅಧಿಕಾರಿಗಳು ಹೊಂದಿರುವ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಹಾಗೂ ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ನಗರ , ಹಾಸನ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಬರೋಬ್ಬರಿ 69 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸರಿಗೆ ಬಹಳ ಅಚ್ಚರಿ ಕಾದಿತ್ತು.
ದೊಡ್ಡ ಮೊತ್ತದ ನಗದು ವಶವಾದ ಮಾಹಿತಿ ಇಲ್ಲವಾದರೂ ಕೆಲವು ಅಧಿಕಾರಿಗಳು ಏಳೆಂಟು ನಿವೇಶನ, ಹತ್ತರು ಸೈಟು ಐಷಾರಾಮಿ ತೋಟದ ಮನೆಗಳನ್ನು ಹೊಂದಿರುವುದು ಪತ್ತೆಯಾಗಿತ್ತು .
ಹಾಸನದ KPTCL ಜೂನಿಯರ್ ಎಂಜಿನಿಯರ್ H.E.ನಾರಾಯಣ ಅವರ ಮನೆ , ದಿನಸಿ ಅಂಗಡಿಯ , ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ಸೋಮವಾರ ಬೆಳಿಗ್ಗೆ ದಾಳಿ ನಡೆಸಿದ್ದರು.
ಹಾಸನ ನಗರದ ಹೊರವಲಯದ ಬೊಮ್ಮನಾಯಕನಹಳ್ಳಿಯಲ್ಲಿ ಇರುವ ನಾರಾಯಣ ಅವರ ನಿವಾಸ ಹಾಗೂ
ಗೊರೂರಿನಲ್ಲಿರುವ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಪ್ರತ್ಯೇಕವಾಗಿ ಶೋಧ ನಡೆಸಿದ್ದು.
ದಾಳಿಯ ವೇಳೆ ಅನೇಕ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, 8 ಲಕ್ಷ₹ ನಗದು ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ. ಲೋಕಾಯುಕ್ತ SP ಮಲ್ಲಿಕ್, DYSP ತಿರುಮಲ್ಲೇಶ್, ಇನ್ಸ್ಪೆಕ್ಟರ್ ಗಳಾದ ಬಾಲು, ಶಿಲ್ಪಾ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿರುತ್ತದೆ .,
ಅಂತೆಯೇ ರಾಜ್ಯದ ವಿವಿಧೆಡೆ ದಾಳಿಯಲ್ಲಿ ಸಿಕ್ಕಿದ್ದೆಷ್ಟು?? :
• ನಾಗೇಂದ್ರ ನಾಯ್ಕ, DCF :
2 ಲಕ್ಷ ₹ ನಗದು, 650g ಚಿನ್ನ ಹಾಗೂ 4K.G. . ಬೆಳ್ಳಿ ಆಭರಣ, 11 ನಿವೇಶನ, ಇನ್ನೋವಾ ಸೇರಿ ಎರಡು ಕಾರು
• V.ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ :
600g ಚಿನ್ನ, 2kg ಬೆಳ್ಳಿ, ಎರಡು ಕಾರು , 10 ನಿವೇಶನ
• ಪರಮೇಶ್ವರಪ್ಪ ಪೇಲನವರ, RFO, ಹಾವೇರಿ :
6 ಲಕ್ಷ ₹ ನಗದು, 8 ಎಕರೆಗೂ ಹೆಚ್ಚು ಜಮೀನು. 3 ಲಕ್ಷ ₹ಮೌಲ್ಯದ ಪುಸ್ತಕಗಳು, 3 ಎಕರೆ ಜಮೀನಿನಲ್ಲಿ ಐಷಾರಾಮಿ ಸೌಲಭ್ಯವಿರುವ ಫಾರ್ಮ್ಹೌಸ್, ವಿದೇಶಿ ನಾಯಿಗಳು & 2 LTR ವಿದೇಶಿ ಮದ್ಯ.
• ಮಹಾಂತೇಶ ನ್ಯಾಮತಿ, RFO, ಹಾವೇರಿ :
6.50 ಲಕ್ಷ ₹ ನಗದು, 3 ಮನೆ, 2 ನಿವೇಶನ & 5 ಎಕರೆ ಹೊಲ. 650g ಚಿನ್ನಾಭರಣ, 2kg ಬೆಳ್ಳಿ
• M.ನಾಗೇಂದ್ರಪ್ಪ, ಸಹಾಯಕ ಎಂಜಿನಿಯರ್, ಶಿರಾ, ತುಮಕೂರು :
ಎರಡು ಮನೆ, ವಿವಿಧ ಕಡೆಗಳಲ್ಲಿ ಎಂಟು ನಿವೇಶನ, 18 ಎಕರೆ 8 ಗುಂಟೆ ಕೃಷಿ ಜಮೀನು
1kg 300 ಗ್ರಾಂ ಚಿನ್ನಾಭರಣ, 2 ಕೆ.ಜಿ 400 ಗ್ರಾಂ ಬೆಳ್ಳಿ ಸಾಮಗ್ರಿ
ಎಲ್ಲೆಲ್ಲಿ ದಾಳಿ ಎಂದರೆ ??
• ಬೆಂಗಳೂರು ನಗರ • ತುಮಕೂರು • ಮಂಡ್ಯ • ಚಿತ್ರದುರ್ಗ
• ಉಡುಪಿ • ಹಾಸನ • ಬಳ್ಳಾರಿ • ರಾಯಚೂರು • ಕಲಬುರ್ಗಿ
• ಬೆಳಗಾವಿ • ಹಾವೇರಿ