ಹಾಸನದಲ್ಲಿ 545 ಕೋಟಿ ವೆಚ್ಚದ ಮೆಗಾ ಡೈರಿ : 2023 ರ ಡಿಸೆಂಬರ್‌ಗೆ ಪೂರ್ಣ ; ಸಾವಿರಾರು ಉದ್ಯೋಗ ಸೃಷ್ಟಿ

2

ಹಾಸನ : ‘ನಗರದ ಕೈಗಾರಿಕಾ ಪ್ರದೇಶದಲ್ಲಿ 66 ಎಕರೆ ಪ್ರದೇಶದಲ್ಲಿ 545 ಕೋಟಿ₹ ವೆಚ್ಚದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ KMF &ಹಾಸನ ಹಾಲು ಒಕ್ಕೂಟದ ಸಹಯೋಗದೊಂದಿಗೆ ವಿವಿಧ ಹಾಲಿನ ಉತ್ಪನ್ನಗಳ ಉತ್ಪಾದಿಸುವ ಮೆಗಾ ಡೇರಿ ಪ್ರಾರಂಭ ” – ಬಿ.ಸಿ.ಸತೀಶ್ (ಕರ್ನಾಟಕ ಹಾಲು ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕ)

ಈ ಡೇರಿಯ ವಿಶಿಷ್ಟತೆ ಏನಿವೆ ಗೊತ್ತೆ ??

• ಇದು 2023 ಡಿಸೆಂಬರ್ ವೇಳೆಗೆ ಈ ಡೇರಿ ಕಾರ್ಯಾರಂಭ
• ಏಕಕಾಲದಲ್ಲಿ 15 ಲಕ್ಷ ಲೀಟರ್ ಹಾಲನ್ನು ಸಂಸ್ಕರಣೆ
• ದಿನಕ್ಕೆ 60 ಟನ್ ಹಾಲಿನ ಉತ್ಪನ್ನಗಳನ್ನು ಉತ್ಪಾದಿಸಬಹುದು

ಈಗಾಗಲೇ ಹಾಸನದಲ್ಲಿ ₹ 165 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿವಿಧ ಬಗೆಯ ಹಾಲಿನ ಉತ್ಪನ್ನ ಮಾಡುವ ಪೆಟ್ ಬಾಟಲ್ ಘಟಕವನ್ನು ಕಾರ್ಯಾರಂಭವಾಗಿದ್ದು, ದೇಶದ ಮೂಲೆ ಮೂಲೆಗಳಿಗೂ ಉತ್ಪನ್ನ ತಲುಪುತ್ತಿದೆ’

ಈ ಬೃಹತ್ ಯೋಜನೆ ತರಲು ಕಾರಣ ?

ರಾಜ್ಯದಲ್ಲಿ ಒಟ್ಟು 26 ಲಕ್ಷ ಹಾಲು ಉತ್ಪಾದಕರು , 15 ಸಾವಿರ ಪ್ರಾಥಮಿಕ ಹಾಲು ಉತ್ಪನ್ನ ಘಟಕಗಳು ಇವೆ , ಆದರೆ ಹಾಸನದಲ್ಲೇ ಈ ಮೆಗಾ ಡೇರಿ ಬರಲು‌ ಕಾರಣ ?

ಇಡೀ ದೇಶದಲ್ಲಿಯೇ ಕರ್ನಾಟಕ ಹಾಲು ಮಹಾಮಂಡಳಿ ಹೆಸರು ಪಡೆದಿದ್ದು, ಅದರಲ್ಲೂ ಹಾಸನ ಹಾಲು ಒಕ್ಕೂಟ ಮೂಲಸೌಕರ್ಯ ಹಾಗೂ ಹಾಲಿನ ಉತ್ಪನ್ನದಲ್ಲಿ ನಂ.1 , ಮೊನ್ನೆ ಜೂನ್ 3 ರಂದು ಒಂದೇ ದಿನ 92.40ಲಕ್ಷ ಲೀ. ಹಾಲು ಸಂಗ್ರಹಿಸಿದ ದಾಖಲೆ ಹಾಸನದ್ದು

2 COMMENTS

LEAVE A REPLY

Please enter your comment!
Please enter your name here