ಹಾಸನ / ಬೆಂಗಳೂರು : ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನ ಒಂದೆಡೆ ಚಿಂತೆಯಲ್ಲಿದ್ದರೆ ., ಈ ಸಂದರ್ಭದಲ್ಲಿ ಪ್ರಯಾಣಿಕರ ಮೇಲೆ ನೆಲಮಂಗಲ ದೇವಿಹಳ್ಳಿ ಎಕ್ಸ್ಪ್ರೆಸ್ ವೇ ಪ್ರೈವೇಟ್ ಲಿಮಿಟೆಡ್ ಮತ್ತೊಂದು ಬರೆ ಹಾಕಿದಂತಾಗಿದೆ.,
ಕಳೆದ ಮಂಗಳವಾರ ಮಧ್ಯರಾತ್ರಿಯಿಂದ ನೆಲಮಂಗಲ – ಹಾಸನ ರಾಷ್ಟ್ರೀಯ ಹೆದ್ದಾರಿ NH75ರ ಟೋಲ್ ದರವನ್ನು ಹೆಚ್ಚಳ ಮಾಡುವ ಮೂಲಕ ವಾಹನ ಸವಾರರ ಕೋಪ ನೆತ್ತಿಗೇರಲು ಕಾರಣವಾಗಿದೆ. ಬೆಂಗಳೂರಿನ ಹೊರವಲಯದ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ಇರುವ ನೆಲಮಂಗಲ ದೇವಿಹಳ್ಳಿ ಎಕ್ಸ್ಪ್ರೆಸ್ ವೇ ಪ್ರೈವೇಟ್ ಲಿಮಿಟೆಡ್ ಟೋಲ್ನಲ್ಲಿ, ಲಘು ವಾಹನಗಳನ್ನು ಹೊರತುಪಡಿಸಿ ಭಾರೀ ಗಾತ್ರದ ವಾಹನಗಳ ಟೋಲ್ ದರ ಮಂಗಳವಾರ ಮಧ್ಯ ರಾತ್ರಿಯಿಂದಲೇ ಹೆಚ್ಚಳಮಾಡಿದ್ದಾರೆ.,
ಲಾರಿ, ಬಸ್ಗಳಿಗೆ ಸೇರಿದಂತೆ ಹಳೆಯ ದರ ಏಕಮುಖ ಸಂಚಾರ 160 ರೂ. ಮತ್ತು ದ್ವಿಮುಖ ಸಂಚಾರಕ್ಕೆ 240 ರೂಪಾಯಿ ಇತ್ತು. ಈಗಿನ ಹೊಸದರದಲ್ಲಿ ಏಕಮುಖ ಸಂಚಾರಕ್ಕೆ 160 ರೂ., ದ್ವಿಮುಖ ಸಂಚಾರಕ್ಕೆ 245 ರೂ ಇದೆ. ದ್ವಿಮುಖ ಸಂಚಾರದಲ್ಲಿ 5 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹಳೆಯ ದರ ಏಕಮುಖ ಸಂಚಾರಕ್ಕೆ 255 ರೂ., ದ್ವಿಮುಖ ಸಂಚಾರಕ್ಕೆ ಹಳೆ ದರ 385 ರೂ. ಇತ್ತು. ಈಗ ಹೊಸ ದರದಲ್ಲಿ ಏಕಮುಖ ಸಂಚಾರಕ್ಕೆ 260 ರೂ. ಆಗಿದ್ದು 5 ರೂಪಾಯಿ ಹೆಚ್ಚಳವಾದರೆ, ದ್ವಿಮುಖ ಸಂಚಾರದಲ್ಲಿ 390 ರೂಪಾಯಿ ಇದ್ದು, ಇಲ್ಲಿಯೂ ಸಹ 5 ರೂಪಾಯಿ ಹೆಚ್ಚಳವಾಗಿದೆ ಎಂದು ದೇವಿಹಳ್ಳಿ ಟೋಲ್ನ ಸಿಬ್ಬಂದಿ ಅಪ್ ಗ್ರೆಡೆಡ್ ಮಾಹಿತಿ ತಿಳಿಸಿದ್ದಾರೆ.
ಹೆಣ್ಣುಮಕ್ಕಳಿಗೆ ಕಳೆದ 75ವರ್ಷಗಳಿಂದ ಸತತ ಅತ್ಯುತ್ತಮ ಶೈಕ್ಷಣಿಕ ಸೇವೆ ಸಲ್ಲಿಸುತ್ತಿರುವ ಏಕೈಕ ಅಪೂರ್ವ ವಿದ್ಯಾಸಂಸ್ಥೆ,ಹಾಸನದ ‘ಸಂತಫಿಲೋಮಿನಾ ಸಂಸ್ಥೆ’
ಶಿಸ್ತು, ಸಂಸ್ಕೃತಿಯ ಪ್ರತೀಕವಾಗಿ ಹೆಣ್ಣುಮಕ್ಕಳ ಸುರಕ್ಷೆಗೆ
ಹೆಸರಾದ ಸಂಸ್ಥೆ,
2010ರಲ್ಲಿ ಪ್ರಾರಂಭಗೊಂಡ ಡಿಗ್ರಿ
ವಿಭಾಗವು, ಅಂದಿನಿಂದ ಇಂದಿನವರೆಗೆ ಹಲವಾರು ರಾಂಕ್ ಮತ್ತು ಸಾಕಷ್ಚು ಚಿನ್ನದ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡು
ಪೋಷಕರ, ಅಧಿಕಾರಿಗಳ, ಗಣ್ಯರ
ಎಲ್ಲರ ಶ್ಲಾಘನೆಗೆ, ಮೆಚ್ಚುಗೆಗೆ ಪಾತ್ರವಾಗಿದೆ.
ಸುವ್ಯವಸ್ಥಿತ ವಾಚನಾಲಯ,
ಸುಸಜ್ಜಿತ ಕೊಠಡಿಗಳು,
ನುರಿತ ಉಪನ್ಯಾಸಕರು,
ಅತ್ಯುತ್ತಮ ಆಡಳಿತ ವರ್ಗಗಳನ್ನು
ಹೊಂದಿದ,
ಈ ಜ್ಞಾನದೇಗುಲ 2021-2022ನೇ ಸಾಲಿನ ಬಿಕಾಂ ಮತ್ತು ಬಿಬಿಎ ಪದವಿ ಕೋರ್ಸುಗಳಿಗೆ ವಿದ್ಯಾರ್ಥಿನಿಯರ ಪ್ರವೇಶಾತಿಗೆ ಪ್ರೀತಿಪೂರ್ವಕವಾಗಿ ಆಹ್ವಾನಿಸುತ್ತಿದೆ..
ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದುಕೊಂಡು, ಅತ್ಯುತ್ತಮ ವಿದ್ಯಾರ್ಥಿನಿಯರಾಗಬೇಕೆಂಬುದು ಆಡಳಿತವರ್ಗದ ಮಹದಾಶಯ. ಸಂಪರ್ಕಿಸಲು ಕಾಲೇಜಿನ ವೆಬ್ಸೈಟ್ http://spfgchassan.in/ ಅಥವಾ ದೂರವಾಣಿ ಸಂಖ್ಯೆ 08172-235577, 9113673915,9972471068
ಇನ್ನು ಇತರೆ ಟೋಲ್ ದರ ಅಷ್ಟೇ ಇದ್ದು , ಇವರ ನಂತರ ಮುಂದಿನ ದಿನಗಳಲ್ಲಿ ಹೆಚ್ಚಿಸುವ ಸನ್ನೆ ನೀಡಿದ್ದಾರೆ .