ದಿನಾಂಕ 02/10/2020 ರಂದು ಬೇಲೂರು ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳ ಬಂಧನ, 30,530 ರೂ, ನಗದು ಹಣ ಮತ್ತು 2 ಮೊಬೈಲ್ ವಶ

0

•ನಿನ್ನೆ ಸಂಜೆ 7-30 ಗಂಟೆಯ ಸಮಯದಲ್ಲಿ ಬೇಲೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಬೇಲೂರು ನಗರದ ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್ ಮುಂಭಾಗ ಇರುವ ಮಂಜುನಾಥ ಬೇಕರಿ ಮುಂಭಾಗ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ನಡೆಯುತ್ತಿದೆ ಎಂಬುದಾಗಿ ಬೇಲೂರು ಪೊಲೀಸ್ ಠಾಣೆಯ ಪಿಎಸ್ಐ ರವರಿಗೆ ಕರೆ    ಬಂದೆ. ಖಚಿತ ಮಾಹಿತಿಯು ಮೇರೆಗೆ ಪಿಎಸ್‌ಐ ಮತ್ತು ಸಿಬ್ಬಂದಿಗಳು ದಾಳಿ ಮಾಡಿದ್ದಾರೆ, ಈ ಕೆಳಕಂಡ ಆರೋಪಿಗಳು ನಿನ್ನೆ ನಡೆಯುತ್ತಿರುವ ಚೆನ್ನೆ ಸೂಪರ್ ಕಿಂಗ್ ಮತ್ತು ಸನ್‌ರೈಸಸ್ ಹೈದರಾಬಾದ್ ಪಂದ್ಯದ ಬಗ್ಗೆ ಬೆಟ್ಟಿಂಗ್ ಕಟ್ಟಿಕೊಂಡು ಜೂಜಾಟ: ಆಟವಾಡುತ್ತಿದ್ದಾರೆ, ತಿಳಿದು ಇವರನ್ನು ವಶಕ್ಕೆ ಪಡೆದುಕೊಂಡು ಅವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಈ ಕೆಳಕಂಡಂತೆ ಇರುತ್ತದೆ.

•ತಿಮ್ಮಣ್ಣ  57 ವರ್ಷ, ಲಕ್ಷ್ಮೀಪುರ ಬೇಲೂರು ತಾಲೂಕು, ಹಾಸನ ಜಿಲ್ಲೆ,
2. ಶಿವಕುಮಾರ್ 30 ವರ್ಷ, ಗಣಿಕೆರೆ ಬೀದಿ, ಬೇಲೂರು ನಗರ, ಇವರುಗಳನ್ನು ದಸ್ತಗಿರಿ ಮಾಡಿ ಆರೋಪಿಗಳಿಂದ 30,930 ರೂ. ನಗದು ಹಣ ಮತ್ತು 2 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡು ಇವರ ವಿರುದ್ದ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ. ಹಾಗೂ ಈ ಪ್ರಕರಣದಲ್ಲಿ

ಇನ್ನಿತರೆ ಆರೋಪಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ,

ಈ ಪ್ರಕರಣವನ್ನು ಪತ್ತೆ ಮಾಡಿದ ಬೇಲೂರು ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಅಜಯ್ ಕುಮಾರ್ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ, ಹಾಸನ ಅವರ ಶ್ಲಾಘಿಸಿ ವಿಶೇಷ ಬಹುಮಾನ ಘೋಷಿಸಿರುತ್ತಾರೆ.

LEAVE A REPLY

Please enter your comment!
Please enter your name here