ಆರೋಗ್ಯಕರವಾಗಿರುವ ದೇಹ ಬೇಕೆಂದರೆ ಇದನ್ನು ಸೇವಿಸಿ.ವ್ಯಾಯಾಮ ಮಾಡುವ ಹಲವರು ಈ ಚಹಾವನ್ನು ಏಕೆ ಸೇವಿಸುತ್ತಾರೆ ?ಯಾವ ವಿಶೇಷವಾದ ಚಹಾ ಇದು?

0
glass teapot with chinese tea, cup of herbal tea

ಈ ಚಹಾವನ್ನು ಕ್ಯಾಮೆಲಿಯಾ ಸೆನೆನ್ಸಿಸ್ ಗಿಡದ ಎಲೆಗಳಿಂದ ತಯಾರಿಸುತ್ತಾರೆ .ಇದನ್ನೇ ‘ಹಸಿರು ಚಹಾ(ಗ್ರೀನ್ ಟೀ) ಎಂದು ಕರೆಯುತ್ತಾರೆ

ಈ ಗ್ರೀನ್ ಟೀಯಲ್ಲಿ ವಿವಿಧ ಖನಿಜಗಳು, ವಿಟಮಿನ್ಗಳು ,ಸಮೃದ್ಧವಾಗಿದ್ದು ಪ್ರಬಲ ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ.ಇದರ ಸೇವನೆಯಿಂದ ನೀವು ಹಲವಾರು ಪ್ರಯೋಜನೆಗಳನ್ನು ಪಡೆಯಬಹುದು.

*ತೂಕವನ್ನು ಏರದಂತೆ ತಡೆಯುತ್ತದೆ :
ವ್ಯಾಯಾಮ ಮಾಡುವವರು ತಮ್ಮ ಆರೋಗ್ಯವನ್ನು ಕಾಪಾಡಲು ಸಹ ಹಸಿರು ಟೀಯನ್ನು ಆಹಾರದಲ್ಲಿ ಅಳವಡಿಸಿಕೊಳ್ಳುತ್ತಾರೆ.ನಮ್ಮ ದೇಹಕ್ಕೆ ಅಪಾಯಕಾರಿಯಾಗುವ ಕೆಟ್ಟ ಕೊಲೆಸ್ಟ್ರಾಲ್ ನನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

*ಕರೋನಾ ಸಮಯದಲ್ಲಿ ಇದು ಬಹಳ ಸಹಾಯಕಾರಿ:
ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ರೋಗ ವಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ವೈರಸ್ ಮೂಲಕ ಹರಡುವ ಶೀತ,ಫ್ಲೂ ಮೊದಲಾದ ಸಾಮಾನ್ಯ ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ.

*ತ್ವಚೆಗೆ ಹೊಳಪು ನೀಡುತ್ತದೆ:
ಹಸಿರು ಚಹಾದಲ್ಲಿ ಅಡಗಿರುವ ಆ್ಯಂಟಿ- ಏಜಿಂಗ್ ಅಂಶ ನಿಮ್ಮ ಮುಖದಲ್ಲಿರುವ ಸುಕ್ಕುಗಳನ್ನು ಕಡಿಮೆ ಮಾಡಿ ಹೊಳಪಾದ ಚರ್ಮ ನೀಡುತ್ತದೆ.

*ಜೀರ್ಣಕ್ರಿಯೆಗೆ ಬಹಳ ಸಹಾಯಕಾರಿ:
ಹಸಿರು ಚಹಾ ಕೊಳ್ಳುವುದರಿಂದ ಜೀರ್ಣಾಂಗ ವ್ಯವಸ್ಥೆ ಸಮತೋಲನದಲ್ಲಿರುತ್ತದೆ.ನಿಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚು ಮಾಡುತ್ತದೆ.ಇದರಿಂದ ನಮ್ಮ ತೂಕವನ್ನು ಕೂಡ ಕಡಿಮೆ ಗೊಳಿಸಲು ಸಹಾಯವಾಗುತ್ತದೆ.

*ಮಾನಸಿಕ ಶಾಂತಿಯನ್ನು ಲಭಿಸುತ್ತದೆ:
ಲಾಕ್ ಡೌನ್ ಸಮಯ ನಮಗೆ ಬಹಳ ಒತ್ತಡ ನೀಡಿದೆ ಹಲವರಿಗೆ ಮಾನಸಿಕ ಶಾಂತಿ ಎನ್ನುವುದೇ ಇಲ್ಲ. ಇಂಥವರು ಹಸಿರು ಚಹಾ ಸೇವಿಸಿದರೆ ಅದರಲ್ಲಿರುವ ಅಮೈನೋ ಆಮ್ಲಗಳು ದೇಹದಲ್ಲಿ ತಾಜಾತನವನ್ನು ಕಾಪಾಡಿಕೊಳ್ಳುತ್ತವೆ ಇದರಿಂದ ನೀವು ಸದಾ ಲವಲವಿಕೆಯಿಂದ ಇರಬಹುದು.


ನೆನಪಿಡಿ
ಹಸಿರು ಚಹಾವನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಸೂಕ್ತವಲ್ಲ ಏಕೆಂದರೆ ಇದರಲ್ಲಿ ಹೆಚ್ಚು ಕೆಫೈನ್ ಅಂಶ ಇದೆ .ಇದನ್ನು ಎರಡು ಪ್ರಮುಖ ಊಟಗಳ ಮಧ್ಯಾಂತರ ಅವಧಿಯಲ್ಲಿ ಸೇವಿಸುವುದು ಉತ್ತಮ.

-ತನ್ವಿ .ಬಿ

LEAVE A REPLY

Please enter your comment!
Please enter your name here