ಹಾಸನ,ನ.19(ಹಾಸನ್_ನ್ಯೂಸ್) !, ಹಾಸನ ನಗರಸಭಾ ವ್ಯಾಪ್ತಿಯ ಸಾರ್ವಜನಿಕರು / ಮನೆ ಮಾಲೀಕರು ನಗರಸಭೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಎಲ್ಲೆಂದರಲ್ಲಿ ಜಾಹಿರಾತು, ಧಾರ್ಮಿಕ ಹಾಗೂ ರಾಜಕೀಯ ಪಕ್ಷಗಳ ಫ್ಲಕ್ಸ್ ಗಳು ಮತ್ತು ಬ್ಯಾನರ್ಗಳನ್ನು ಅಳವಡಿಸುತ್ತಿದ್ದು, ಇದರಿಂದ ನಗರದ ಸ್ವಚ್ಛತೆ ಹಾಗೂ ಸೌಂದರ್ಯಕ್ಕೆ ಧಕ್ಕೆಯಾಗುತ್ತಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ , ಯಾವುದೇ ರೀತಿಯ ಫ್ಲಕ್ಸ್ ಗಳನ್ನು ನಗರಸಭೆ ಅನುಮತಿ ಇಲ್ಲದೇ ಅಳವಡಿಸಿದಲ್ಲಿ ಬರೋಬ್ಬರಿ 5,000₹ ದಿಂದ 10,000₹ ರೂಗಳ ವರೆಗೆ ದಂಡ ವಿಧಿಸುವುದರ ಜೊತೆಗೆ ಮನೆಯ ಒಳಚರಂಡಿ / ಕುಡಿಯುವ ನೀರಿನ ಸರಬರಾಜು ಬಂದ್ ಮಾಡಲಾಗುವುದು ” – ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.