ತಂಗಿಗಾಗಿ ತಾಯಿಯ ಶವದೊಂದಿಗೆ ಕಣ್ಣೀರಿಡುತ್ತಿರುವ ಪುತ್ರ

0

ಹಾಸನ : ತಾಯಿ ಮೃತಪಟ್ಟಿದ್ದಾಳೆ ಎಲ್ಲೇ ಇದ್ದರು ಮನೆಗೆ ಬೇಗ ಬಾ ಎಂದು ಮನೆಬಿಟ್ಟು ಹೋಗಿರುವ ತಂಗಿಗಾಗಿ ಅಣ್ಣನು ಅಳಲು ತೋಡಿಕೊಂಡಿದ್ದಾನೆ.


ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಬೊಮ್ಮನಕೆರೆ ಗ್ರಾಮದ ಲಕ್ಷ್ಮಯ್ಯ-ಹೊನ್ನಮ್ಮ ದಂಪತಿ ಪುತ್ರಿ ಹರಿಣಿ ಗಂಡನನ್ನು ಬಿಟ್ಟು ತವರು ಸೇರಿದ್ದಳು.
ಹರಿಣಿ ಗ್ರಾಮದ ಸಂಘಗಳಲ್ಲಿ ಐದು ಲಕ್ಷ ಸಾಲ ಮಾಡಿದ್ದು, ಸಾಲ ತೀರಿಸಲಾಗದೆ ಕಳೆದ ಆರು ತಿಂಗಳ ಹಿಂದೆ ಮನೆ ಬಿಟ್ಟು ಪರಾರಿಯಾಗಿದ್ದರು.
ಮಗಳು ಮಾಡಿದ ಸಾಲ ತೀರಿಸುವಂತೆ ಹೊನ್ನಮ್ಮನಿಗೆ ಸಾಲಗಾರರು ಕಿರುಕುಳ ನೀಡುತ್ತಿದ್ದರು

ಎಂದು ಆರೋಪ ಕೇಳಿಬಂದಿದ್ದು, ಸಾಲಗಾರರ ಕಿರುಕುಳ ತಾಳಲಾರದೆ ಕಳೆದ ಮೂರು ದಿನಗಳಿಂದ ಹೊನಮ್ಮ ಊಟ, ತಿಂಡಿ ಬಿಟ್ಟಿದ್ದರು.
ನಿನ್ನೆ ತಡರಾತ್ರಿ ಹೊನ್ನಮ್ಮ ಸಾವನ್ನಪ್ಪಿದ್ದಾರೆ. ಅಮ್ಮ ಸಾವನ್ನಪ್ಪಿದ್ದು ಎಲ್ಲಿದ್ದರು ಮನೆಗೆ ಬಾ ಎಂದು ತಂಗಿಗಾಗಿ ಅಸಹಾಯಕ ಅಣ್ಣ ಕಣ್ಣೀರಿಡುತ್ತಿದ್ದಾನೆ. ಮನೆಯಲ್ಲಿಯೇ ಮೃತ ತಾಯಿಯ ಶವವಿಟ್ಟು ಕೊಂಡು ತಂಗಿಗಾಗಿ ಅಣ್ಣ ಕಾಯುತ್ತಿದ್ದಾರೆ.

LEAVE A REPLY

Please enter your comment!
Please enter your name here