ಒಕ್ಕಲಿಗ ಸಂಘದ ನೂತನ ಸಮುದಾಯ ಭವನದ ಗುದ್ದಲಿ ಪೂಜೆ ಕಾರ್ಯಕ್ರಮ ಹಾಸನ

0

ದೇಶಕ್ಕೆ ಅನ್ನ ನೀಡುವ ಒಕ್ಕಲಿಗ ; ಆರ್.ಅಶೋಕ್
ಹಾಸನ ಸೆ.26 : ಒಕ್ಕಲಿಕ ಸಮುದಾಯ ದೇಶಕ್ಕೆ ಅನ್ನ ನೀಡುವ ಜನಾಂಗವಾಗಿದೆ ಎಂದು ಕಂದಾಯ ಸಚಿವರಾದ ಆರ್.ಅಶೋಕ್ ತಿಳಿಸಿದ್ದಾರೆ.

ಜಿಲ್ಲೆಯ ಎಸ್.ಎಂ.ಕೆ ನಗರದಲ್ಲಿ ಹಾಸನ ಜಿಲ್ಲಾ ಒಕ್ಕಲಿಗರ ಸಂಘ ಆಯೋಜಿಸಿದ್ದ ಸಂಘದ ನೂತನ ಸಮುದಾಯ ಭವನದ ಗುದ್ದಲಿ ಪೂಜೆ ಕಾರ್ಯವನ್ನು ನೆರವೇರಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಕೇವಲ ಸ್ವಾರ್ಥ ಅಥವಾ ಮನೆ ಅಭಿವೃದ್ಧಿಗೆ ಮಾತ್ರ ಶ್ರಮಿಸದೆ ಸುಮುದಾಯ ,ಸಮಾಜದ ಅಭಿವೃದ್ದಿಗೂ ಶ್ರಮಿಸಬೇಕು ಆಗ ಮಾತ್ರ ಜನರ ನೆನಪಿನಲ್ಲಿಯೂ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಅವರು ಹೇಳಿದರು.

ಸಮುದಾಯ ಬೆಳೆದರೆ ಜನಾಂಗ ಬೆಳೆಯುತ್ತದೆ, ತಮ್ಮನ್ನು ಸಹ ಒಕ್ಕಲಿಗ ಎನ್ನುವ ಕಾರಣಕ್ಕೆ ಗುರುತುಸಿ ಸಚಿವ ಸ್ಥಾನ ನೀಡಲಾಗಿದೆ ಎಂದರು .

ಬೆಂಗಳೂರು ವಿಮಾನ ನಿಲ್ದಾಣದ ಬಳಿ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗುತ್ತಿದೆ .ಅದೇ ರೀತಿ ಆದಿಚುಂಚನಗಿರಿಯಲ್ಲಿ 114 ಅಡಿ ಎತ್ತರದ ಕಾಲಭೈರವೇಶ್ವರನ ದೊಡ್ಡ ಮೂರ್ತಿ ನಿರ್ಮಾಣವಾಗಬೇಕು ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಕಂದಾಯ ಸಚಿವರು ಹೇಳಿದರು.

ಒಕ್ಕಲಿಗ ಸಮುದಾಯದ ಏಳಿಗೆಗಾಗಿ ರಾಜ್ಯ ಸರ್ಕಾರ ನಿಗಮ ಸ್ಥಾಪನೆ ಮಾಡಿದ್ದು , 500 ಕೋಟಿ ರೂಗಳನ್ನು ಮೀಸಲಿರಿಸಿದೆ ಇದೇ ರೀತಿ ಜನರು ಕೈ ಜೋಡಿಸಿ ಸಮುದಾಯದ ಆಸ್ತಿಗಳನ್ನು ಕಟ್ಟಬೇಕು ಎಂದರಲ್ಲದೆ ಹಾಸನದಲ್ಲಿ ಮುದ್ದೇಗೌಡ ಅವರ ನೇತೃತ್ವದಲ್ಲಿ ಒಕ್ಕಲಿಗರ ಸಂಘದ ಪ್ರಯತ್ನವನ್ನು ಅಭಿನಂದಿಸಿದರು.

ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಮಾತನಾಡಿ ಉದ್ದೇಶಿತ ಒಕ್ಕಲಿಗ ಸಮುದಾಯ ಭವನದ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ರಾಜ್ಯದ ವಿವಿಧೆಡೆಯಲ್ಲಿ ಒಂದುವರೆ ಲಕ್ಷದಷ್ಟು ವಿದ್ಯಾರ್ಥಿಗಳಿಗೆ ಚುಂಚನಗಿರಿ ಮಠದಲ್ಲಿ ವಿದ್ಯಾಭ್ಯಾಸ ನೀಡುತ್ತಿರುವುದು ಶ್ಲಾಘನಾರ್ಹವಾಗಿದೆ ಎಂದರು.

ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ. ನಿರ್ಮಲಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಭವನದ ನಿರ್ಮಾಣ ಕಾರ್ಯವು ಶೀಘ್ರವಾಗಿ ನೆರವೇರಲಿದೆ ಹಾರೈಸಿದರು.

ರಾಜ್ಯದಲ್ಲಿ ಒಕ್ಕಲಿಗರ ಸಂಘ ಸೇರಿದಂತೆ ವಿವಿಧ ಸಮುದಾಯದ ಸಂಘಗಳನ್ನು ಕಟ್ಟಿ ಮಠಗಳ ಏಳಿಗೆಗೆ ಕಾರಣರಾದ ಸಮುದಾಯದ ಕೆ.ಹೆಚ್ ರಾಮಯ್ಯ ಅವರ ಸೇವೆಯನ್ನು ಸ್ಮರಿಸಬೇಕು ಎಂದರು.

ಆಧ್ಯಾತ್ಮ ಕಲಿಸಲು ಮಠ ಸಮುದಾಯ ಅಭಿವೃದ್ದಿಗೆ ಸಂಘಗಳು ಅತೀ ಮುಖ್ಯ ಎಂದು ಸ್ವಾಮಿಜಿ ಅಭಿಪ್ರಾಯ ಪಟ್ಟರು ಒಕ್ಕಲಿಕಗ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕೃಷ್ಣಪ್ಪ ಅವರು ಮಾತನಾಡಿ ಹಾಸನದ ಉದ್ದೇಶಿತ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಘೋಷಿಸಿದರು.

ಶಾಸಕರಾದ ಶಿವಲಿಂಗೇಗೌಡ ಅವರು ಮಾತನಾಡಿ ಮಾಜಿ ಪ್ರಧಾನಿ ಹಾಲಿ ರಾಜ್ಯ ಸಭೆ ಸದಸ್ಯರಾದ ಹೆಚ್.ಡಿ ದೇವೇಗೌಡ ಅವರ ಸಂದೇಶವನ್ನು ಓದಿದರು.
ಶಾಸಕರಾದ ಪ್ರೀತಂ ಜೆ.ಗೌಡ ಅವರು ಮಾತನಾಡಿ ಮಾತನಾಡುವುದು ಕೆಲಸವಾಗಬಾರದು ಹಾಗಾಗಿ ಕೆಲಸವೇ ಮಾತಾಗಬೇಕು ತಾವು ಮಾಡಿ ತೋರಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಮುದಾಯ ಭವನ ನಿರ್ಮಾಣದ ಪ್ರಮುಖ ರುವಾರಿ ಹಾಸನ ಜಿಲ್ಲೆಯ ಒಕ್ಕಲಿಗರ ಸಂಘದ ಅಧ್ಯಕ್ಷ ಮುದ್ದೇಗೌಡ್ರು. ಶಾಸಕರಾದ ಕೆ.ಎಸ್. ಲಿಂಗೇಶ್,ವಿಧಾನ ಪರಿಷತ್ ಸದಸ್ಯರಾದ ಎಂ.ಎ ಗೋಪಾಲಸ್ವಾಮಿ ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮದ ಸದಸ್ಯರಾದ ಸುರಭಿ ರಘು, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಲಾಟ ಮೂರ್ತಿ, ನಗರಸಭೆ ಅಧ್ಯಕ್ಷ ಆರ್. ಮೋಹನ್, ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮದ ಸದಸ್ಯ ಸುರೇಶ ಗೌಡ, ಸಕಲೇಶಪುರ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹೆಚ್.ಎಂ. ವಿಶ್ವನಾಥ್, ಅರಸೀಕೆರೆ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್. ಅನಂತ್ ಕುಮಾರ್, ಆಲೂರು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹೆಚ್.ಪಿ. ಮೋಹನ್, ಜಿಲ್ಲಾಧಿಕಾರಿ ಆರ್. ಗಿರೀಶ್ ಐ.ಎ.ಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀನಿವಾಸಗೌಡ ಐ.ಪಿ.ಎಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಮತ್ತಿತರರು ಹಾಜರಿದ್ದರು

LEAVE A REPLY

Please enter your comment!
Please enter your name here