ಸಾವೇ ನೀನೆಷ್ಟು ಕ್ರೂರಿ, ಉಳಿದಿದ್ದು ಮಾನವೀಯತೆ! ಅಪಘಾತದಲ್ಲಿ ಮೃತ ಯುವಕನ ಅಂಗದಾನ

0

ಸಾವೇ ನೀನೆಷ್ಟು ಕ್ರೂರಿ, ಉಳಿದಿದ್ದು ಮಾನವೀಯತೆ! ಅಪಘಾತದಲ್ಲಿ ಮೃತ ಯುವಕನ ಅಂಗದಾನ ; ಇನ್ನೊಂದು ದುರಂತವೆಂದರೆ, ಈ ಯುವಕ ಕೋವಿಡ್ ಸಂದರ್ಭ ತಂದೆ ತಾಯಿ‌ ಇಬ್ಬರನ್ನೂ ಕಳೆದುಕೊಂಡಿದ್ದ

ಹಾಸನ : ಅಪಘಾತದಲ್ಲಿ ಯುವಕನ ಸಾವಿನ ದುಃಖದ ನಡುವೆಯೂ ಮಾನವೀಯತೆ ಮೆರೆದ ಅವರ ಕುಟುಂಬ, ಅಂಗಾಂಗ ದಾನ ಮಾಡಿ ಸಾರ್ಥಕತೆ ಪಡೆದ ಘಟನೆ. , ಹಾಸನದಲ್ಲಿ ನಡೆದಿದೆ, ನಗರದ ವಿದ್ಯಾನಗರದಲ್ಲಿ ನಡೆದಿದ್ದ ಅಪಘಾತವೊಂದರಲ್ಲಿ ನಗರದ ಆಚಾರ್ಯ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಹರ್ಷಿಲ್‌ ಎನ್(16) ಎಂಬಾತ ತೀವ್ರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದ. ಅಪಘಾತದಲ್ಲಿ ಹರ್ಷಿಲ್ ತಲೆಗೆ ತೀವ್ರ ಪೆಟ್ಟಾಗಿತ್ತು.

ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಸಹ. ಚಿಕಿತ್ಸೆ ಫಲಕಾರಿಯಾಗದೆ ಹರ್ಷಿಲ್‌ ಸಾವಿಗೀಡಾಗಿದ್ದನು. ಇನ್ನೊಂದು ಮನಕಲಕುವ ದುರಂತವೆಂದರೆ, ಈ ಯುವಕ ಕಳೆದ ಕೋವಿಡ್ ಸಂದರ್ಭ ತಂದೆ ತಾಯಿ‌ ಇಬ್ಬರನ್ನೂ ಕಳೆದುಕೊಂಡಿದ್ದ. ನಂತರ ಈತ ತನ್ನ ಅಜ್ಜಿಯ ಮನೆಯಲ್ಲಿ ‌ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ. ಹರ್ಷಿಲ್ ತಂದೆ ತಾಯಿ ಸಾವಿನಿಂದ ಅದಾಗಲೇ ಮನನೊಂದಿರುವ ಕುಟುಂಬಕ್ಕೆ, ಹರ್ಷಿಲ್ ಸಾವಿ ಬರ ಸಿಡಿಲಿನಂತೆ ಬಡಿದಿದೆ.

ಈ ದುಃಖದ ನಡುವೆಯೂ ಮಾನವೀಯತೆ ಮೆರೆದರು. ಹಾಸನದ ಸಾರ್ವಜನಿಕ ವಲಯದಲ್ಲಿ ಇದೀಗ ಪ್ರಶಂಸನೆ ವ್ಯಕ್ತವಾಗಿದೆ, ಅಂಗಾಂಗ ದಾನ ಮಾಡುವ ಮೂಲಕ ಸಾವಿಗೆ ಸಾರ್ಥಕತೆ ತಂದರು. ದೇವರು ಮೃತ ಮೂವರಿಗೆ ಶಾಂತಿ ಲಭಿಸುವಂತಾಗಲಿ, ಕುಟುಂಬಕ್ಕೆ ದುಂಖ ಭರಿಸುವ ಶಕ್ತಿ ದೊರಕಲಿ..

LEAVE A REPLY

Please enter your comment!
Please enter your name here