ಹಾಸನ ಮಾ.05 (ಹಾಸನ್_ನ್ಯೂಸ್ !!, ಸರಸ್ವತಿ ಸಮ್ಮಾನ ಪುರಸ್ಕøತ, ಪದ್ಮ ಶ್ರೀ ಡಾ. ಎಸ್.ಎಲ್ ಭೈರಪ್ಪನವರು 42 ವರ್ಷಗಳ ಹಿಂದೆ ಬರೆದ ಮಹಾಭಾರತ ವಸ್ತುವಿನ ‘ಪರ್ವ ಕಾದಂಬರಿ ಇದೀಗ ಮಹಾ ರಂಗ ಪ್ರಯೋಗಕ್ಕೆ ಅಣಿಯಾಗಿದೆ.
ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ಈ ಕಾದಂಬರಿಯನ್ನು ರಂಗಪಠ್ಯವನ್ನಾಗಿಸಿ ನಿರ್ದೇಶನ ಮಾಡಿದ್ದಾರೆ. ಭಾರತದ ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಈ ನಾಟಕಕ್ಕೆ ವಸ್ತ್ರ ವಿನ್ಯಾಸ ಮಾಡಿದ್ದು, ಬಿಗ್ ಬಾಸ್ ಖ್ಯಾತಿಯ ರವಿ ಮುರೂರು ಸಂಗೀತ ನಿರ್ದೇಶನ ಮತ್ತು ರಂಗಾಯಣದ ಹಿರಿಯ ಕಲಾವಿದ ಹೆಚ್.ಕೆ ದ್ವಾರಕನಾಥ್ ಅವರು ರಂಗ ವಿನ್ಯಾಸಗೊಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸಚಿವರಾದ ಅರವಿಂದ ಲಿಂಬಾವಳಿ ಅವರು ಪ್ರಯೋಗಕ್ಕೆ ಸಹಕಾರ ನೀಡಿದ್ದಾರೆ. 7 ಗಂಟೆ 30 ನಿಮಿಷಗಳ ಅವಧಿಯ ನಾಟಕ ಸಿದ್ದಗೊಂಡಿದ್ದು ಮಾ. 12, 13, 14 ರಂದು, ಬೆಳಗ್ಗೆ 10 ಗಂಟೆಗೆ ಮೈಸೂರು ಕಲಾಮಂದಿರದಲ್ಲಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
500 ಹಾಗೂ 250 ರೂ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ರಂಗಾಯಣ ಕಚೇರಿಯಲ್ಲಿ ಲಭ್ಯವಿದೆ. ಆನ್‍ಲೈನ್ ಟಿಕೆಟ್ ಕಾಯ್ದಿರಿಸಲು ರಂಗಾಯಣದ ವೆಬ್‍ಸೈಟ್ www.rangayana.org ನಲ್ಲಿ ಪಡೆಯಬಹುದಾಗಿದೆ ಎಂದು ಮೈಸೂರು ರಂಗಾಯಣ ನಿರ್ದೇಶಕರಾದ ಅಡ್ಡಂಡ ಸಿ ಕಾರ್ಯಪ್ಪ ಅವರು ತಿಳಿಸಿದ್ದಾರೆ.